ನವದೆಹಲಿ:- ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಂದ ಭಾರತವನ್ನು ಸಂಪೂರ್ಣವಾಗಿ ಮುಕ್ತಗೊಳಿಸಲು ಸಾಧ್ಯವೇ ಎಂಬ ಪ್ರಶ್ನೆ ಇದೀಗ ಎದ್ದಿದ್ದು, ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸ್ಪಷ್ಟನೆ ನೀಡಿದ್ದಾರೆ.
ರಾಜ್ಯಪಾಲರು ಸಂವಿಧಾನಕ್ಕೆ ಬದ್ಧರಿರಬೇಕು: ಸುಪ್ರೀಂ ಕೋರ್ಟ್ ನ್ಯಾ. ನಾಗರತ್ನಾ !
“ಶೇ.100 ರಷ್ಟು ಇದು ಕಷ್ಟ, ಆದರೆ ಅಸಾಧ್ಯದ ಕೆಲಸವಲ್ಲ ಎಂಬುದು ನನ್ನ ಅಭಿಪ್ರಾಯ” ಎಂದು ಸಚಿವರು ಹೇಳಿದ್ದಾರೆ. ಇಂಧನ ಆಮದು ಮಾಡಿಕೊಳ್ಳಲು ಭಾರತ 16 ಲಕ್ಷ ಕೋಟಿ ರೂ. ವೆಚ್ಚ ಮಾಡುತ್ತದೆ. ಈ ಹಣವನ್ನು ರೈತರ ಜೀವನ ಸುಧಾರಣೆಗೆ ಬಳಸಲಾಗುವುದು, ಹಳ್ಳಿಗಳು ಅಭಿವೃದ್ಧಿ ಹೊಂದುತ್ತವೆ ಮತ್ತು ಯುವಕರಿಗೆ ಉದ್ಯೋಗಾವಕಾಶ ಸಿಗಲಿದೆ ಎಂದು ಸಚಿವರು ಹೇಳಿದ್ದಾರೆ. ಆದಾಗ್ಯೂ, ಈ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸಲು ಗಡ್ಕರಿ ಯಾವುದೇ ಟೈಮ್ಲೈನ್ ಅನ್ನು ನೀಡಿಲ್ಲ, ಇದನ್ನು ಗ್ರೀನ್ ಎನರ್ಜಿ ಪ್ರತಿಪಾದಕರು ಕೂಡ ಅತ್ಯಂತ ಕಷ್ಟಕರವೆಂದು ಪರಿಗಣಿಸುತ್ತಾರೆ.
ಹೈಬ್ರಿಡ್ ವಾಹನಗಳ (Hybrid Vehicles) ಮೇಲಿನ ಜಿಎಸ್ಟಿಯನ್ನು ಶೇಕಡಾ 5 ಕ್ಕೆ ಮತ್ತು ಫ್ಲೆಕ್ಸ್ ಎಂಜಿನ್ಗಳ ಮೇಲಿನ ಜಿಎಸ್ಟಿಯನ್ನು (GST On Hybrid Vehicle) ಶೇಕಡಾ 12 ಕ್ಕೆ ಇಳಿಸುವ ಪ್ರಸ್ತಾವನೆಯನ್ನು ಹಣಕಾಸು ಸಚಿವಾಲಯಕ್ಕೆ (Finance Ministry) ಕಳುಹಿಸಲಾಗಿದ್ದು, ಅದನ್ನು ಪರಿಗಣಿಸಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ. ಜೈವಿಕ ಇಂಧನಗಳ ಬಳಕೆಯನ್ನು ಉತ್ತೇಜಿಸುವ ಮೂಲಕ ದೇಶವು ಇಂಧನ ಆಮದನ್ನು ತೊಡೆದುಹಾಕಬಹುದು ಎಂದು ತಾವು ಬಲವಾಗಿ ನಂಬುವುದಾಗಿ ಸಚಿವರು ಹೇಳಿದ್ದಾರೆ. 2004 ರಿಂದ ಪರ್ಯಾಯ ಇಂಧನಗಳನ್ನು ಪ್ರತಿಪಾದಿಸುತ್ತಿದ್ದೇನೆ ಮತ್ತು ಮುಂಬರುವ ಐದರಿಂದ ಏಳು ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಲಿದೆ ಎಂದು ಗಡ್ಕರಿ ಹೇಳಿದ್ದಾರೆ
ಈ ಬದಲಾವಣೆಗೆ ಯಾವುದೇ ದಿನಾಂಕ ಮತ್ತು ವರ್ಷವನ್ನು ನಾನು ನಿಮಗೆ ಹೇಳಲಾರೆ ಏಕೆಂದರೆ ಇದು ತುಂಬಾ ಕಷ್ಟಕರವಾಗಿದೆ. ಇದು ಕಷ್ಟ, ಆದರೆ ಅಸಾಧ್ಯವಲ್ಲ.” ಎಲೆಕ್ಟ್ರಿಕ್ ವಾಹನಗಳನ್ನು (Electric Vehicle) ಪರಿಚಯಿಸುವ ವೇಗದಲ್ಲಿ ಮುಂಬರುವ ಯುಗವು ಪರ್ಯಾಯ ಮತ್ತು ಜೈವಿಕ ಇಂಧನವಾಗಲಿದೆ (Bio Fuel) ಮತ್ತು ಈ ಕನಸು ನನಸಾಗಲಿದೆ ಎಂಬುದು ತಮ್ಮ ಬಲವಾದ ನಂಬಿಕೆ” ಎಂದು ಗಡ್ಕರಿ ಹೇಳಿದ್ದಾರೆ.