ಬೆಂಗಳೂರು:- ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ-2021ಕ್ಕೆ ರಾಜ್ಯ ಸರ್ಕಾರ ರದ್ದು ಮಾಡಿದೆ.
14-7-21ರಲ್ಲಿ ಅಂದಿನ ಬಿಜೆಪಿ ಸರ್ಕಾರ ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ ಜಾರಿಗೆ ತಂದಿತ್ತು. ಜನರಿಗೆ ಸಾರಿಗೆ ಸಂಪರ್ಕ ಕಲ್ಪಿಸಲು ಹಾಗೂ ಸ್ವಯಂ ಉದ್ಯೋಗ ಅವಕಾಶ ಕಲ್ಪಿಸಲು ಈ ಯೋಜನೆ ಪರಿಚಯಿಸಿತ್ತು. ಆದರೆ ಖಾಸಗಿ ಸಾರಿಗೆ ಒಕ್ಕೂಟ ವಿರೋಧಿಸಿ ಯೋಜನೆ ರದ್ದು ಮಾಡುವಂತೆ ಹಲವು ಬಾರಿ ಮನವಿ ಮಾಡಿದ್ದವು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರವೂ ಸಾರಿಗೆ ಸಚಿವರ ಭೇಟಿ ಮಾಡಿ ಮನವಿ ಮಾಡಿದ್ದವು. ಅಲ್ಲದೆ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧ ಮಾಡುವಂತೆ ಬೆಂಗಳೂರು ಬಂದ್ ಕೂಡ ಮಾಡಲಾಗಿತ್ತು.
ಖಾಸಗಿ ಸಾರಿಗೆ ಸಂಸ್ಥೆ ಮನವಿಗೆ ಸ್ವಂದಿಸಿದ ರಾಜ್ಯ ಸರ್ಕಾರದ ವರದಿ ನೀಡಲು ಸಮಿತಿ ರಚನೆ ಮಾಡಿತ್ತು. ಬಿಎಂಆರ್ ಸಿಎಲ್ ಎಂಡಿ ನೇತೃತ್ವದಲ್ಲಿ ಸಮಿತಿಗೆ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ ಅಗತ್ಯತೆ ಹಾಗೂ ಜಾರಿ ಬಗ್ಗೆ ವರದಿ ನೀಡಲು ಸರ್ಕಾರದ ಸೂಚನೆ ನೀಡಿತ್ತು. ಅದರಂತೆ ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ-2021 ಪೂರಕವಾಗಿಲ್ಲ ಅಂತ ಸಮಿತಿ ಅಂತ ವರದಿ ನೀಡಿತ್ತು. ಅದರಂತೆ ರಾಜ್ಯ ಸರ್ಕಾರ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧಿಸಿ ಆದೇಶ ಹೊರಡಿಸಿದೆ. ಸರ್ಕಾರ ಈ ನಿರ್ಧಾರ ಖಾಸಗಿ ಸಾರಿಗೆ ಒಕ್ಕೂಟದ ಸಂತಸಕ್ಕೆ ಕಾರಣವಾಗಿದೆ.