ಬೆಂಗಳೂರು: ಲಿಸ್ಟ್ ಬಗ್ಗೆ ಯತೀಂದ್ರ ಮಾತನಾಡಿರುವ ವಿಡಿಯೋ ವೈರಲ್ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ಮಾಜಿ ಶಾಸಕ ಡಾ.ಯತೀಂದ್ರಗೆ ಫೋನ್ ಕರೆ ಮಾಡಿದ್ದು ಯಾರು? ಹಲೋ ಅಪ್ಪ ಅಂತಾ ಯತೀಂದ್ರ ಹೇಳಿದ್ದು ಯಾರಿಗೆ? ವಿವೇಕಾನಂದ ಯಾರು?, ನಾಲ್ಕೈದು ಲಿಸ್ಟ್ ಕೊಟ್ಟಿದ್ದು ಏನು? ಸಿದ್ದರಾಮಯ್ಯ ಪುತ್ರ ಯತೀಂದ್ರಗೆ ಫೋನ್ ಮಾಡಿ ಕೇಳಿದ್ಯಾರು? ಅದು ಸಿಎಂ ಪರಿಹಾರ ನಿಧಿಯ ಹೆಸರುಗಳು? ಒಬ್ಬ ಮುಖ್ಯಮಂತ್ರಿ ಫೋನ್ ಮಾಡಿ ಲಿಸ್ಟ್ ಬಗ್ಗೆ ಮಾತಾಡುತ್ತಾರೆ.
ಯಾರು ಮಹದೇವ?, ಯಾರು ಲೇಬರ್ ಇನ್ಸ್ಪೆಕ್ಟರ್ ಅವನು? ಆರ್.ಮಹದೇವ್ ಅವರದ್ದು ವಿಶೇಷ ಕರ್ತವ್ಯ ಏನು? ಸಾರ್ವಜನಿಕವಾಗಿ ಈ ರೀತಿಯಾದರೆ 4 ಗೋಡೆ ಮಧ್ಯೆ ಇನ್ನೇನು ಆಗುತ್ತಿದೆ? ಸಿಎಂ ಕೆಲಸ ಅಂದರೆ ಮಗನಿಗೆ ಫೋನ್ ಮಾಡಿ ಕೇಳಬಹುದಾ? ಸಾರ್ವಜನಿಕರ ಹಣ ಲೂಟಿ ಮಾಡಿ ಎಂದು ಅಧಿಕಾರ ಕೊಟ್ಟಿದ್ದಾರಾ? ಫೋನ್ ಮಾಡಿ ಹೇಳಿದ್ದಾರಲ್ಲ ಅದರ ದಾಖಲೆ ಬಿಡುಗಡೆ ಮಾಡಿ. ಯಾವ ಶಾಲೆಗಳ ಸಿಎಸ್ಆರ್ ಫಂಡ್ ಅಂತಾ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.