ತುಮಕೂರು: ತುಮಕೂರಿನ ಹೆಬ್ಬೂರು ಪೊಲೀಸರು ಕಾರ್ಯಾಚರಣೆ ನಡೆಸಿ 12 ಬೈಕ್ ಕಳವು ಹಾಗೂ ಐದು ಪೊಲೀಸ್ ಠಾಣೆಗೆ ಬೇಕಿದ್ದ ಕಳ್ಳಾನಾಗಿದ್ದ ಖದೀಮನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇರ್ಫಾನ್ ಅಲಿಯಾಸ್ ಫಾಕ್ಸ್ ಬಂಧಿತ ಆರೋಪಿಯಾಗಿದ್ದುಬೈಕ್ ನಲ್ಲಿ ಹೋಗುತ್ತಿದ್ದ,
ಇರ್ಫಾನ್ ಅನ್ನು ಅನುಮಾನದ ಮೇಲೆ ತಡೆದು ದಾಖಲಾತಿ ಪರಿಶೀಲನೆ ವೇಳೆ ಆರೋಪಿ ಸಿಕ್ಕಿಬಿದ್ದೀದ್ದಾನೆ. ಜಯನಗರ, ತಿಲಕ್ ಪಾರ್ಕ್, ಹೆಬ್ಬೂರು, ಕ್ಯಾತ್ಸಂದ್ರ, ತುಮಕೂರು ನಗರ ಪೊಲೀಸರಿಗೆ ಬೇಕಿದ್ದ ಖದೀಮ ಕದ್ದ ಬೈಕ್ ಗಳನ್ನು ಐದಾರು ಸಾವಿರಕ್ಕೆ ಮಾರಾಟ ಮಾಡುತ್ತಿದ್ದನು. ಇನ್ನೂ ಘಟನೆ ಸಂಬಂಧ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.