ಕನ್ನಡದ ‘ಹೆಬ್ಬುಲಿ’ (Hebbuli) ನಟಿ ಅಮಲಾ ಪೌಲ್ (Amala Paul) ಅವರು ತಮ್ಮ ಅಭಿಮಾನಿಗಳಿಗೆ ಅಮ್ಮನಾಗುತ್ತಿರುವ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸ್ಪೆಷಲ್ ಫೋಟೋ ಮೂಲಕ ಸಿಹಿಸುದ್ದಿ ಹಂಚಿಕೊಂಡಿದ್ದಾರೆ.
‘ಇಬ್ಬರು ಮೂವರಾಗುತ್ತಿದ್ದೇವೆ’ ಎಂದು ನಟಿ ಅಮಲಾ ಬೇಬಿ ಬಂಪ್ (Baby Bump) ಫೋಟೋ ಶೇರ್ ಮಾಡಿ ಬರೆದುಕೊಂಡಿದ್ದಾರೆ. ನಟಿಯ ಪೋಸ್ಟ್ಗೆ ನಟ-ನಟಿಯರು, ಅಭಿಮಾನಿಗಳು ಶುಭಕೋರಿದ್ದಾರೆ
ಹೆಬ್ಬುಲಿ’ ನಟಿ ಅಮಲಾ ಪೌಲ್ ಅವರು 2023ರ ನವೆಂಬರ್ನಲ್ಲಿ ಜಗತ್ ದೇಸಾಯಿ ಜೊತೆ ಕೊಚ್ಚಿಯಲ್ಲಿ ಮದುವೆಯಾದರು. ಇದು ಅಮಲಾ 2ನೇ ಮದುವೆಯಾಗಿತ್ತು. ನಿರ್ದೇಶಕ ವಿಜಯ್ ಜೊತೆಗಿನ ಡಿವೋರ್ಸ್ ನಂತರ ಜಗತ್ ಜೊತೆ ಹಲವು ವರ್ಷಗಳು ಡೇಟಿಂಗ್ ಮಾಡಿದ್ದರು ಅಮಲಾ.
ಕನ್ನಡ, ತಮಿಳು ಸೇರಿದಂತೆ ಬಹುಭಾಷೆಯಲ್ಲಿ ನಾಯಕಿಯಾಗಿ ನಟಿಸುತ್ತಾ ಅಪಾರ ಅಭಿಮಾನಿಗಳ ಗಳಿಸಿದ್ದಾರೆ. ಮದುವೆ ನಂತರವೂ ಮತ್ತೆ ಸಿನಿಮಾ ಮಾಡುತ್ತಾರಾ ಅಮಲಾ ಈ ಬಗ್ಗೆ ಸ್ಪಷ್ಟನೆ ಇಲ್ಲ.