ಬೆಂಗಳೂರು:- ಬೆಂಗಳೂರು-ಬಳ್ಳಾರಿ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಬದಲಿ ಮಾರ್ಗ ಬದಲಾಯಿಸಲಾಗಿದೆ.
ಹೆಬ್ಬಾಳ ಫ್ಲೈಓವರ್ ಬೆಂಗಳೂರು-ಬಳ್ಳಾರಿ ರಸ್ತೆಯಲ್ಲಿ ಬಿಡಿಎ ಮತ್ತು ಬಿಎಂಆರ್ಸಿಎಲ್ ನಮ್ಮ ಮೆಟ್ರೋ ಕಾಮಗಾರಿ ನಡೆಯುತ್ತಿರುವುದರಿಂದ ಸಂಚಾರ ನಿಧಾನಗತಿಯಲ್ಲಿರುತ್ತದೆ. ಹೀಗಾಗಿ ಸೂಚಿಸಿರುವ ಬದಲಿ ಮಾರ್ಗಗಳಲ್ಲಿ ಸಂಚರಿಸಬೇಕೆಂದು ಬೆಂಗಳೂರು ಸಂಚಾರಿ ಪೊಲೀಸ್ ಇಲಾಖೆ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಹೆಬ್ಬಾಳ ಪ್ರೈಓವರ್ ಬೆಂಗಳೂರು-ಬಳ್ಳಾರಿ ರಸ್ತೆಯಲ್ಲಿದ್ದು, ವಿಮಾನ ನಿಲ್ದಾಣ ಮತ್ತು ಹೊರಜಿಲ್ಲೆ ಮತ್ತು ಹೊರರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಪ್ರತಿದಿನ 2.5 ಲಕ್ಷಕ್ಕೂ ಅಧಿಕ ವಾಹನಗಳು ಸಂಚರಿಸುವುದರಿಂದ ಹಾಗೂ ಹೆಬ್ಬಾಳ ಥೈಓವರ್ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಸಂಚಾರದಿಂದ ಸಂಚಾರ ದಟ್ಟಣೆಯುಂಟಾಗುತ್ತದೆ. ಸಂಚಾರ ದಟ್ಟಣೆಯನ್ನು ನಿವಾರಿಸಲು ವಿವಿಧ ಪೌರ ಸಂಸ್ಥೆಗಳಿಂದ ಕಾಮಗಾರಿಗಳನ್ನು ಕೈಗೊಂಡಿವೆ.
ಬಿಡಿಎ ವತಿಯಿಂದ ಪ್ರೈಓವರ್ ಅಗಲೀಕರಣ ಹಾಗೂ ಬಿಎಂಆರ್ಸಿಎಲ್ ನಿಂದ ಮೆಟ್ರೋ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಪೀಕ್ ಅವರ್ಸ್ನಲ್ಲಿ ಸಂಚಾರ ನಿಧಾನಗತಿಯಲ್ಲಿರುತ್ತದೆ. ಇದರಿಂದಾಗಿ ಏರ್ಪೋರ್ಟ್ಗೆ ಚಲಿಸುವ ವಾಹನಗಳು ನಿಗದಿತ ವೇಳೆಗೆ ಏರ್ಪೋರ್ಟ್ ತಲುಪಲು ಸಾಧ್ಯವಾಗುವುದಿಲ್ಲ.
ಕೆ.ಆರ್ ಪುರಂ-ಏರ್ಪೋರ್ಟ್ ಕಡೆಗೆ ತೆರಳಲು ಬಳಸಬೇಕಾದ ಮಾರ್ಗಗಳು:
ಹೊರವರ್ತುಲ ರಸ್ತೆಯಲ್ಲಿ ಬಲ ತಿರುವು ಪಡೆದು ಹೆಣ್ಣೂರು ಕ್ರಾಸ್-ಬಾಗಲೂರು ರಸ್ತೆಯ ಏರ್ಪೋರ್ಟ್ ಪರ್ಯಾಯ ರಸ್ತೆಯ ಮೂಲಕ ವಿಮಾನ ನಿಲ್ದಾಣಕ್ಕೆ ಹೋಗಬೇಕು.
ಹೊರವರ್ತುಲ ರಸ್ತೆಯಲ್ಲಿ ನಾಗವಾರ ಅಂಕ್ಷನ್ ಬಳ ಬಲ ತಿರುವು ಪಡೆದು ಥಣಿಸಂದ್ರ- ಹೆಗಡೆನಗರ ಮುಖ್ಯರಸ್ತೆ, ಬೆಳ್ಳಳ್ಳಿ ಸೇತುವೆ-ರೇವಾ ಜಂಕ್ಷನ್ ಮೂಲಕ ಬಲ ತಿರುವು ಪಡೆದು ಬಾಗಲೂರು ರಸ್ತೆಯ ಏರ್ಪೋರ್ಟ್ ಪರ್ಯಾಯ ರಸ್ತೆಯ ಮೂಲಕ ವಿಮಾನ ನಿಲ್ದಾಣಕ್ಕೆ ಹೋಗಬೇಕು.
ವಾಹನಗಳು ಬಳಸಬೇಕಾದ ಮಾರ್ಗಗಳು:
ಹೊರವರ್ತುಲ ರಸ್ತೆಯ ಮೂಲಕ ಚಲಿಸುವ ವಾಹನಗಳು ಐಓಸಿ-ಮುಕುಂದ ಥಿಯೇಟರ್ ರಸ್ತೆಯ ಅಂಗರಾಜಮರಂ ಮೇಲೇತುದೆ ಮಾರ್ಗ ಮೂಲಕ ನಗರದ ಕಡೆಗೆ ಹೋಗಬಹುದು.
ನಾಗವಾರ ಮತ್ತು ಬ್ಯಾನರಿ ರಸ್ತೆ ಮಾರ್ಗವಾಗಿ ನಗರಕ್ಕೆ ಪ್ರವೇಶಿಸಬಹುದು.