ತಿರುವನಂತಪುರಂ: ಅಯ್ಯಪ್ಪನ (Ayyappa) ದರ್ಶನಕ್ಕೆಂದೇ 48 ದಿನಗಳವರೆಗೂ ವ್ರತ ಆಚರಿಸಿ ಶಬರಿಮಲೆಗೆ (Sabarimala) ತೆರಳಿದ್ದ ಕರ್ನಾಟಕ (Karnatka) ಸೇರಿ ಹಲವು ರಾಜ್ಯಗಳ ಭಕ್ತರು, ಅಯ್ಯಪ್ಪನ ದರ್ಶನ ಮಾಡಲಾಗದೆಯೇ ಮರಳುತ್ತಿದ್ದಾರೆ. ಭಕ್ತರ ನಿರ್ವಹಣೆ, ಭಕ್ತರ ವಾಹನಗಳ ನಿರ್ವಹಣೆಯಲ್ಲಿ ಟ್ರಾವಂಕೂರು ದೇವಸ್ಥಾನ ಮಂಡಳಿ (Travancore Devaswom Board) ಮತ್ತು ಪೊಲೀಸರು ಪೂರ್ಣ ವಿಫಲರಾಗಿದ್ದು,
The situation at #Sabarimala is really scary.!!🚨🚨
The Kerala government have failed badly. pic.twitter.com/faKQ1SFKDq
— महारथी-മഹാരഥി (@MahaRathii) December 12, 2023
ಕೇರಳ ಸರ್ಕಾರದ (Kerala Government) ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ದೇವರ ದರ್ಶನಕ್ಕೆ ಭಕ್ತರು ಹಲವು ಗಂಟೆಗಳ ಕಾಲ ಅನ್ನ, ನೀರು ಇಲ್ಲದೇ ಸರದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಅವ್ಯವಸ್ಥೆ ಪ್ರಶ್ನಿಸಿದ್ದಕ್ಕೆ ಪೊಲೀಸರು ಭಕ್ತರ ಮೇಲೆಯೇ ಹಲ್ಲೆ ನಡೆಸಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದೆ.
Hello @pinarayivijayan & communist govt !!!
Karma has no deadline…!!#Sabarimala #Kerala #Hindus pic.twitter.com/PC8Z5vKOJe
— Pratheesh Viswanath (@pratheesh_Hind) December 12, 2023
ಕಣ್ಣೀರಿಟ್ಟ ಬಾಲಕ: ನೀಲಕ್ಕಲ್ನಲ್ಲಿ ತಂದೆಯಿಂದ ತಪ್ಪಿಸಿಕೊಂಡ ಪುಟ್ಟ ಬಾಲಕನೊಬ್ಬ ಬಸ್ಸಿನಲ್ಲೇ ತಂದೆಯನ್ನು ಹುಡುಕಿಕೊಡುವಂತೆ ಕಣ್ಣೀರೀಟ್ಟು ಕೈಮುಗಿದು ಬೇಡಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ. ಬಾಲಕ ಕಣ್ಣೀರಿಟ್ಟ ಕೆಲ ಹೊತ್ತಿನಲ್ಲೇ ಆತನ ತಂದೆ ವಾಹನದ ಬಳಿ ಪುತ್ರನನ್ನು ಸಂತೈಸಿದ್ದು ವಿಡಿಯೋದಲ್ಲಿ ಸೆರೆಯಾಗಿದೆ.