ಚೆನ್ನೈ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ಚಂಡಮಾರುತದ ಪ್ರಭಾವದಿಂದಾಗಿ ತಮಿಳುನಾಡು, ಆಂಧ್ರದ ದಕ್ಷಿಣ ಭಾಗ ಹಾಗೂ ಕೇರಳದಲ್ಲಿ ಭಾರೀ ಮಳೆ ಸುರಿಯುತ್ತಿದೆ. ತಮಿಳುನಾಡಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಚೆನ್ನೈನಿಂದ ಬೆಂಗಳೂರಿಗೆ ಸಂಚರಿಸುವ ಕೆಲವು ರೈಲುಗಳನ್ನು ರೈಲ್ವೇ ಇಲಾಖೆ ರದ್ದುಗೊಳಿಸಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ತಮಿಳುನಾಡಿನ ಕೆಲವು ಕಡೆ ಭಾರೀ ಮಳೆ ಸುರಿಯುತ್ತಿದೆ.
ಚೆನ್ನೈನಲ್ಲಿ ಕಳೆದ ಎರಡು ದಿನಗಳಿಂದ ಬಿಟ್ಟುಬಿಡದೇ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಇದರಿಂದಾಗಿ ಭಾರತೀಯ ಹವಾಮಾನ ಇಲಾಖೆ (IMD) ತಮಿಳುನಾಡು ರಾಜ್ಯಾದ್ಯಂತ ಹೆಚ್ಚು ಮಳೆಯಾಗುವ ಮೂನ್ಸುಚನೆಯನ್ನು ನೀಡಿದೆ.
ಈ ಹಿನ್ನೆಲೆಯಲ್ಲಿ ತ್ರೀವ ಮಳೆಯ ಪರಿಣಾಮ ರೈಲ್ವೆ ಇಲಾಖೆ ಇಂದು (ಅ.16) ಚೆನ್ನೈನಿಂದ ಬೆಂಗಳೂರು ಹಾಗೂ ಮೈಸೂರಿಗೆ ಸಂಚರಿಸುವ ಕೆಲವು ರೈಲುಗಳನ್ನು ರದ್ದುಗೊಳಿಸಿದೆ. ಮಳೆಯಿಂದಾಗಿ ಮುನ್ನೆಚ್ಚರಿಕೆ ಕ್ರಮವಾಗಿ ರೈಲುಗಳನ್ನು ರದ್ದುಗೊಳಿಸಿದೆ.
ಯಾವ್ಯಾವ ರೈಲುಗಳು ರದ್ದು:
(ರೈಲು ಸಂಖ್ಯೆ)
ಚೆನ್ನೈ-ಬೆಂಗಳೂರು – 12657
ಚೆನ್ನೈ-ಬೆಂಗಳೂರು – 12607, 12608
ಚೆನ್ನೈ-ಮೈಸೂರು – 12609
ಮೈಸೂರು-ಚೆನ್ನೈ – 12610
ಚೆನ್ನೈ-ಬೆಂಗಳೂರು – 12027
ಬೆಂಗಳೂರು-ಚೆನ್ನೈ – 12028
ಮೈಸೂರು- ಬೆಂಗಳೂರು – 20623
ಬೆಂಗಳೂರು-ಮೈಸೂರು – 20624
ಮೈಸೂರು-ಚೆನ್ನೈ ಸೆಂಟ್ರಲ್ – 16022