ಗುವಾಹಟಿ:- ಗುವಾಹಟಿಯಲ್ಲಿ ಭಾನುವಾರ ಸಂಜೆ ಭಾರಿ ಮಳೆಯಾಗಿದೆ. ಹವಾಮಾನ ಇಲಾಖೆ ಪ್ರಕಾರ, ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮಿಂಚು, ಗುಡುಗು ಸಹಿತ ಬಿರುಗಾಳಿ ಮತ್ತು ಗಾಳಿಯ ವೇಗ ಗಂಟೆಗೆ 30 ರಿಂದ 40 ಕಿಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ತ್ರಿಪುರದಂತಹ ಇತರ ಈಶಾನ್ಯ ರಾಜ್ಯಗಳಲ್ಲೂ ಭಾರೀ ಮಳೆಯಾಗುತ್ತಿದೆ.
MP Election: ವಿಂಟೇಜ್ ಕಾರ್ ಹಾಗೂ ಬೈಕ್ ಗಳ ರ್ಯಾಲಿ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮ!
ಇನ್ನೂ ಭಾರೀ ಮಳೆಯಿಂದ ಗುವಾಹಟಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹಲವು ಭಾಗಗಳು ಹಾನಿಗೊಳಗಾಗಿದ್ದು, ವಿಮಾನ ನಿಲ್ದಾಣದೊಳಗೆ ಶೀಟ್ ಕುಸಿಯುತ್ತಿರುವ, ನೀರಿನಿಂದ ಮುಳುಗಿರುವ ಚಿತ್ರ ಮತ್ತು ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಮುಂದಿನ ದಿನಗಳಲ್ಲಿ ಈಶಾನ್ಯ ರಾಜ್ಯಗಳಲ್ಲಿ ಸಾಕಷ್ಟು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ