ಕಲಬುರ್ಗಿ;- ಬರದಿಂದ ಕಂಗೆಟ್ಟ ಕಲಬುರಗಿಯಲ್ಲಿ ಇವತ್ತು ಮಳೆಯಾಗಿದೆ. ವಿಚಿತ್ರ ಅಂದ್ರೆ ಮಟಮಟ ಮಧ್ಯಾನವೇ ಅದೂ ಬಿಸಿಲಿನಲ್ಲಿಯೇ ಮಳೆ ಬಂದಿದ್ದು ಜನರಿಗೆ ಆಶ್ಚರ್ಯವಾಗಿದೆ.
ಆರಂಭದಲ್ಲಿ ಎಲ್ಲೆಡೆ ಮೋಡಕವಿದ ವಾತಾವರಣವಿತ್ತು. ಆದ್ರೆ ಮಳೆ ಕೈಕೊಟ್ಟಿದೆ.ಹೀಗಾಗಿ ಬರಲು ಸಾಧ್ಯವೇ ಇಲ್ಲ ಅಂತ ಜನ ಮಾತಾಡಿಕೊಳ್ಳುತಿದ್ರು. ಇದೇವೇಳೆ ಏಕಾಎಕಿ ಮಳೆ ಬಂದು ಧರೆ ತಂಪಾಗಿಸಿತು.. ಜಗತ್ ಬಡಾವಣೆ ರಾಘವೇಂದ್ರ ಕಾಲನಿ ಸೇರಿ ಹಲವು ಏರಿಯಾಗಳಲ್ಲಿ ವರುಣ ಚನ್ನಾಗಿಯೇ ದರ್ಶನಕೊಟ್ಟಿದ್ದಾನೆ.
ಮೂಲಗಳ ಪ್ರಕಾರ ಇನ್ನೆರಡು ದಿನವೂ ಮಳೆ ಸುರಿಯುವ ಸಾಧ್ಯತೆಗಳಿದೆ ಎನ್ನಲಾಗಿದೆ..