ದಕ್ಷಿಣ ಕನ್ನಡ:- ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಧಾರಾಕಾರ ಮಳೆಯಾಗಿದ್ದು, ಭಾರೀ ಪ್ರಮಾಣದಲ್ಲಿ ರಸ್ತೆಯಲ್ಲೇ ಮಳೆ ನೀರು ಹರಿದು ಹೊಳೆಯಂತಾಗಿದೆ. ಗುರುವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬಿಸಿಲಿನಿಂದ ಕೂಡಿದ್ದ ಸುಬ್ರಹ್ಮಣ್ಯ ಪರಿಸರದಲ್ಲಿ ಸಂಜೆ ಬಳಿಕ ಮಳೆ ಆರಂಭವಾಗಿದ್ದು, ರಾತ್ರಿಯವರೆಗೂ ಮುಂದುವರೆದಿತ್ತು.
ಧಾರಾಕಾರ ಮಳೆಗೆ ಸುಬ್ರಹ್ಮಣ್ಯ-ಗುತ್ತಿಗಾರು-ಸುಳ್ಯ ರಸ್ತೆ ಹಾಗೂ ಸುಬ್ರಹ್ಮಣ್ಯ-ಪಂಜ-ಬೆಳ್ಳಾರೆ ರಸ್ತೆಯ ಹಲವೆಡೆ ಅಸಮರ್ಪಕ ಚರಂಡಿ ವ್ಯವಸ್ಥೆಯಿಂದ ಮಳೆ ನೀರು ಬಾರೀ ಪ್ರಮಾಣದಲ್ಲಿ ರಸ್ತೆಯಲ್ಲೇ ಹರಿದು ಹೊಳೆಯಂತಾಗಿದ್ದು, ವಾಹನ ಸವಾರರು ಪರದಾಡುವಂತಾಗಿತ್ತು. ಸುಬ್ರಹ್ಮಣ್ಯದಲ್ಲಿ ಕೆಲ ಮನೆಗಳಿಗೆ ನೀರು ನುಗ್ಗಿದ ಘಟನೆಯೂ ನಡೆದಿದೆ. ಸುಬ್ರಹ್ಮಣ್ಯ, ಬಿಳಿನೆಲೆ, ಯೇನೆಕಲ್ಲು, ಬಳ್ಪ, ಪಂಜ, ಹರಿಹರ ಪಲ್ಲತಡ್ಕ, ಕೊಲ್ಲಮೊಗ್ರು, ಗುತ್ತಿಗಾರು, ನಡುಗಲ್ಲು, ಎಲಿಮಲೆ, ಸಂಪಾಜೆ ಸೇರಿದಂತೆ ವಿವಿಧೆಡೆ ಧಾರಾಕಾರ ಮಳೆಯಾಗಿದೆ.
ಭಾರೀ ಮಳೆಯ ಪರಿಣಾಮ ಕುಕ್ಕೆಯ ಗಜರಾಣಿ ಯಶಸ್ವಿನಿ ಮಳೆ ನೀರಿನಲ್ಲೇ ವಾಕಿಂಗ್ ಮಾಡಿದ್ದಾಳೆ. ಸಂಜೆಯ ವೇಳೆ ಭಾರೀ ಮಳೆಯ ನೀರು ರಸ್ತೆಯಲ್ಲಿ ನಿಂತಿದೆ. ಸುಬ್ರಹ್ಮಣ್ಯ ಸಮೀಪದ ಬಳ್ಪದಲ್ಲಿ 245 ಮಿಮೀ ಮಳೆಯಾಗಿದೆ