ಚಾಮರಾಜನಗರ:– ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಭಾರೀ ಮಳೆ ಆಗಿದೆ. ಕಳೆದ 4 ದಿನದಿಂದ ಪ್ರತಿದಿನ ಮದ್ಯಾಹ್ನದ ವೇಳೆ 1 ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯುತ್ತಿದೆ.
ಭಾರೀ ಮಳೆಗೆ ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಅವಾಂತರ ಸೃಷ್ಟಿ ಆಗಿದೆ. ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ರಸ್ತೆ ಕೆರೆಯಂತಾಗಿದ್ದು, ವಾಹನ ಸವಾರರು ಪರದಾಟ ನಡೆಸಿದ್ದಾರೆ.
ಜಿಲ್ಲಾಡಳಿತ ಭವನ ಮುಂಭಾಗ ರಸ್ತೆ ಕೆರೆಯಂತಾಗಿದ್ದು, ರಸ್ತೆಯಲ್ಲಿ ಸಾಗಲು ವಾಹನ ಸವಾರರು ಸರ್ಕಸ್ ಮಾಡಿದ್ದಾರೆ.
ಪ್ರತೀಬಾರೀ ಮಳೆಯಾದಗಲೆಲ್ಲ ಈ ರಸ್ತೆಯಲ್ಲಿ ಕೃತಕ ರಸ್ತೆ ನಿರ್ಮಾಣಗೊಳ್ಳಲಿದ್ದು, ಸಾರ್ವಜನಿಕರಿಂದ ಹಿಡಿಶಾಪ ಹಾಕಲಾಗಿದೆ.