ಬೆಂಗಳೂರು: ಕರ್ನಾಟಕದಲ್ಲಿ ಇನ್ನೆರಡು ದಿನ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
Vastu Tips: ತಪ್ಪಿಯೂ ಈ ದಿಕ್ಕಲ್ಲಿ ಮಲಗಬೇಡಿ: ಇಲ್ಲಿದೆ ಆಘಾತಕಾರಿ ಮಾಹಿತಿ!
ಕಳೆದೆರಡು ದಿನಗಳ ಹಿಂದೆ ಸಿಲಿಕಾನ್ ಸಿಟಿಯನ್ನ ಹಿಂಡಿ ಹಿಪ್ಪೆ ಮಾಡಿದ್ದ ವರುಣ, ಇದೀಗ ಮತ್ತೆ ಅಬ್ಬರಿಸಲು ಸಜ್ಜಾಗಿ ನಿಂತಿದ್ದಾನೆ. ಎರಡು ದಿನ ನಿರಂತರ ಮಳೆಗೆ ಸುಸ್ತಾಗಿದ್ದ ಸಿಟಿಜನರಿಗೆ ಕೊಂಚ ಬಿಡುವು ನೀಡಿದ್ದ ಮಳೆರಾಯ ನಿನ್ನೆ ಮಧ್ಯಾಹ್ನ ದಿಢೀರ್ ಪ್ರತ್ಯಕ್ಷವಾಗಿ ಸಿಟಿಯಲ್ಲಿ ಫಜೀತಿ ಸೃಷ್ಟಿಸಿದ್ದಾನೆ.
ಇನ್ನೆರಡು ದಿನಗಳ ಕಾಲ ರಾಜ್ಯದ ಕೆಲ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ನಾಳೆ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ್ದು, ರಾಜಧಾನಿಯಲ್ಲೂ ಮಳೆ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿಎಸ್ ಪಾಟೀಲ್ ತಿಳಿಸಿದ್ದಾರೆ.
ರಾಜಧಾನಿಯ ಜನರ ನಿದ್ದೆಗೆಡಿಸಿದ್ದ ಹಿಂಗಾರು ಮಳೆಯ ಕಾಟ ಇನ್ನೂ ಎರಡು ದಿನ ಇರಲಿದ್ದು, ರಾಜಧಾನಿ ಸೇರಿ ಹಲವೆಡೆ ವರುಣನ ಆಟ ಮುಂದುವರಿಯಲಿದೆ.