ಮಂಡ್ಯ : ಮೈಶುಗರ್ ಕಾರ್ಖಾನೆ ಭಾರೀ ನಷ್ಟ ಕಂಡು ಬಂದಿದ್ದು, ರೈತರು ಹಾಗೂ ಹೋರಾಟಗಾರರು ಆರ್ಥಿಕ ಇಲಾಖೆಯ ವರದಿಯಿಂದ ಭಯಗೊಂಡಿದ್ದಾರೆ. ಮೈಶುಗರ್ ಕಾರ್ಖಾನೆಯಲ್ಲಿ ಹಿಂದಿನ ಆಡಳಿತ ಮಂಡಳಿಯಲ್ಲಿ ನಡೆದಿದ್ದ ಭಾರೀ ಅವ್ಯವಹಾರ ನಡೆದಿದ್ದು, ಭಾರೀ ನಷ್ಟದಿಂದ ಕಾರ್ಖಾನೆ ಮುಚ್ಚಲ್ಪಟ್ಟಿತ್ತು.
ಸರ್ಕಾರಿ ಸಾಮ್ಯದ ಏಕೈಕ ಕಾರ್ಖಾನೆ ಮಂಡ್ಯದ ಮೈಷುಗರ್ ಕಾರ್ಖಾನೆಯಲ್ಲಿ ನೂರಾರು ಕೋಟಿ ಅಕ್ರಮ ನಡೆದಿದೆ. 2008 ರಿಂದ 2013ರವರೆಗೆ ಭ್ರಷ್ಟಾಚಾರ ನಡೆದಿದ್ದು, ಅಂದಿನ ಅಧ್ಯಕ್ಷ ನಾಗರಾಜಪ್ಪ ಅವಧಿಯಲ್ಲಿ ಸರ್ಕಾರದ 122 ಕೋಟಿ ರೂ. ಹಣ ಲೂಟಿಯಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಲೋಕಾಯುಕ್ತದಿಂದ ತನಿಖೆ ನಡೆದು ಆರೋಪ ಸಾಬೀತಾಗಿದೆ. ಆರೋಪ ಸಾಬೀತಾದ ಹಿನ್ನೆಲೆ ಲೋಕಾಯುಕ್ತರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಹಿಂಡಲಗಾ ಜೈಲಿನಲ್ಲಿ ಜಾಮರ್ ; ಸುತ್ತಮುತ್ತಲ ಜನರಿಗೆ ನೆಟ್ವರ್ಕ್ ಸಮಸ್ಯೆ
ನಾಗರಾಜಪ್ಪನವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಲೋಕಾಯುಕ್ತ ಆದೇಶ ನೀಡಿದೆ. ಇಷ್ಟಾದ್ರೂ ಯಾವುದೇ ಕ್ರಮ ಕೈಗೊಳ್ಳದೇ ಸರ್ಕಾರ ಹಾಗೂ ಆಡಳಿತ ಮಂಡಳಿ ಮೀನಾ ಮೇಷ ಎಣಿಸುತ್ತಿದೆ. ಚುನಾವಣಾ ಪೂರ್ವವಾಗಿ ಅಧಿಕಾರಕ್ಕೆ ಬಂದ ಹದಿನೈದು ದಿನದಲ್ಲಿ ಕಾರ್ಖಾನೆ ಪ್ರಾರಂಭಿಸುವುದಾಗಿ ವಾಗ್ದಾನ ನೀಡಲಾಗಿತ್ತು. ಅದರಂತೆ ಸರ್ಕಾರ ನುಡಿದಂತೆ ನಡೆದುಕೊಂಡಿದೆ. ಆದರೆ ಇದೀಗ ಆರ್ಥಿಕ ಇಲಾಖೆಯ ವರದಿಯಿದ ಮಂಡ್ಯ ಭಾಗದ ರೈತರು ಹಾಗೂ ಮುಖಂಡರು ಆತಂಕಗೊಂಡಿದ್ದು, ಸಚಿವರ ಮುಂದೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದೆ. ಕಬ್ಬು ಬೆಳೆಗಾರರ ಮುಖಂಡರು ಆಡಳಿತ ಮಂಡಳಿ ಹಾಗೂ ಸರ್ಕಾರದ ಕಾರ್ಯವೈಖರಿ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.