ಫಾಫ್ ಡುಪ್ಲೆಸಿಸ್ ಬಳಿಕ ಆರ್ಸಿಬಿ ಮುಂದಿನ ಕ್ಯಾಪ್ಟನ್ ಯಾರು ಅನ್ನೋ ಚರ್ಚೆ ಜೋರಾಗಿದೆ.
ಮೃತದೇಹ ಎತ್ತದಂತೆ ಹುಬ್ಬಳ್ಳಿಯಲ್ಲಿ ಪ್ರತಿಭಟನೆ: ಗೂಂಡಾ ಸರ್ಕಾರ ಎಂದು ಘೋಷಣೆ
ಆರ್ಸಿಬಿ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ಗೆ ಈಗ 39 ವರ್ಷ. ಮುಂದಿನ ಸೀಸನ್ ವೇಳೆಗೆ ಫಾಫ್ಗೆ 40 ವರ್ಷ ಆಗಲಿದೆ. ಹಾಗಾಗಿ ತನಗೆ ವಯಸ್ಸಾದ ಕಾರಣ ಫಾಫ್ ಐಪಿಎಲ್ಗೆ ನಿವೃತ್ತಿ ಘೋಷಿಸಲಿದ್ದಾರೆ. ಈ ಕಾರಣಕ್ಕೆ ಆರ್ಸಿಬಿ ತಂಡ ಹೊಸ ನಾಯಕನನ್ನು ಹುಡುಕಬೇಕಾಗಿದೆ.
ಸದ್ಯಕ್ಕೆ ಲಭ್ಯವಿರೋ ಮಾಹಿತಿ ಪ್ರಕಾರ ಆರ್ಸಿಬಿ ತಂಡದಲ್ಲಿರೋ ಕೊಹ್ಲಿ ಆಪ್ತ ರಜತ್ ಪಾಟಿದಾರ್ ಅವರಿಗೆ ನಾಯಕತ್ವ ಪಟ್ಟ ಕಟ್ಟಬಹುದು. ಇಲ್ಲದೆ ಹೋದಲ್ಲಿ ಕರ್ನಾಟಕದ ಹುಡುಗ ಲಕ್ನೋ ತಂಡದ ಕ್ಯಾಪ್ಟನ್ ಆಗಿರೋ ಕೆ.ಎಲ್ ರಾಹುಲ್ ಅವರನ್ನು ಆರ್ಸಿಬಿ ಕ್ಯಾಪ್ಟನ್ ಮಾಡಬಹುದು ಅನ್ನೋ ಮಾತುಗಳು ಕೇಳಿ ಬಂದಿವೆ.
ಇತ್ತೀಚೆಗಷ್ಟೇ ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಮತ್ತು ಕೆ.ಎಲ್ ರಾಹುಲ್ ಮಧ್ಯೆ ಜೋರು ಗಲಾಟೆ ಆಗಿತ್ತು. ಕನ್ನಡಿಗ ರಾಹುಲ್ ಮುಂದಿನ ಸೀಸನ್ ವೇಳೆಗೆ ಲಕ್ನೋ ತೊರೆದು ಆರ್ಸಿಬಿಗೆ ಬರಲಿದ್ದಾರೆ ಎಂದು ವರದಿ ಕೂಡ ಆಗಿತ್ತು.,