ಮೈಸೂರು:- ಬೈಕ್ ರನ್ನಿಂಗ್ ಇರುವಾಗಲೇ ಹೃದಯಾಘಾತ ಸಂಭವಿಸಿದ ಹಿನ್ನೆಲೆ, ತಡೆಗೋಡೆಗೆ ಗುದ್ದಿ ಸವಾರ ದುರ್ಮರಣ ಹೊಂದಿದ ಘಟನೆ ಮೈಸೂರಿನಲ್ಲಿ ಜರುಗಿದೆ.
ಮೈಸೂರಿನ ಬೋಗಾದಿ ರಿಂಗ್ ರಸ್ತೆಯಲ್ಲಿ ಘಟನೆ ಜರುಗಿದ್ದು, ರವಿ ಮೃತ ವ್ಯಕ್ತಿ ಎನ್ನಲಾಗಿದೆ. ಇತ್ತ ಮುಂಬೈ ಪುಣೆ ಎಕ್ಸ್ಪ್ರೆಸ್ವೇನಲ್ಲಿ ಶನಿವಾರ ಸಂಜೆ ಭಯಾನಕ ರಸ್ತೆ ಅಪಘಾತ ನಡೆದಿದೆ. ಪಾರ್ಕಿಂಗ್ ಮಾಡಿದ್ದ ಕಾರಿನ ಮೇಲೆ ಯಮದೂತ ಗೂಡ್ಸ್ ಲಾರಿ ಎರಗಿ ಬಂದಿದೆ. ಘಟನೆಯಲ್ಲಿ ಮೂರು ಕಾರುಗಳು ಜಖಂಗೊಂಡಿವೆ.
ಪ್ರಾಣ ಉಳಿಸಿಕೊಳ್ಳಲು ಜನ ದಿಕ್ಕೆಟ್ಟು ಓಡಿದ್ದಾರೆ. ಎರಡೂ ಘಟನಾವಳಿಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.