ಆನೇಕಲ್:- ಸ್ನೇಹಿತರ ಜೊತೆ ಪ್ರವಾಸಕ್ಕೆ ತೆರಳಿದ್ದ ಟೆಕ್ಕಿ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಸಮೀಪದ ಸುಗ್ಗಿ ರೆಸಾರ್ಟ್ ನಲ್ಲಿ ಜರುಗಿದೆ.
ಡಿಜಿಟಲ್ ಅರೆಸ್ಟ್ ವಂಚನೆ ಪ್ರಕರಣ ಬಗ್ಗೆ ಜಾಗೃತಿಗೆ ಕ್ರಮ: ಜಿ ಪರಮೇಶ್ವರ್!
ಹೊರಮಾವು ಸಮೀಪದ ಬಂಡೆಬೊಮ್ಮಸಂದ್ರ ನಿವಾಸಿ ಪಾಪಾರಾವ್(37) ಮೃತ ವ್ಯಕ್ತಿ. ಜೆಎಸ್ ಅಸೋಸಿಯೇಟ್ಸ್ ಇಂಡಿಯಾ ಪ್ರೈವೇಟ್ ಲಿ ಉದ್ಯೋಗಿ ಎನ್ನಲಾಗಿದೆ.
ಇಂದು ಸಹೋದ್ಯೋಗಿಗಳ ಜೊತೆ ಪ್ರವಾಸಕ್ಕೆ ಮೃತ ಪಾಪಾರಾವ್ ಬಂದಿದ್ದ. ರೆಸಾರ್ಟ್ ನಲ್ಲಿ ಆಟವಾಡುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯೆ ಸಾವನ್ನಪ್ಪಿದ್ದಾರೆ.
ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.