ಬೆಳಗಾವಿ:- ಜಿಲ್ಲೆ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ 2ನೇ ಹೆಂಡತಿಯನ್ನು ಬಿಟ್ಟು ತನ್ನ ಬಳಿಯೇ ಇರುವಂತೆ ಪೀಡಿಸುತ್ತಿದ್ದ ಮೊದಲ ಹೆಂಡ್ತಿಯನ್ನೇ ಪತಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಜರುಗಿದೆ.
25 ವರ್ಷದ ರಿಯಾಜ್ ಪಠಾಣ್ ಕೊಲೆಯಾದ ವ್ಯಕ್ತಿ. 30 ವರ್ಷದ ರಿಯಾಜ್ ಪಠಾಣ್ ಕೊಲೆ ಮಾಡಿದ ಗಂಡ ಎನ್ನಲಾಗಿದೆ. ಎರಡನೇ ಹೆಂಡತಿ ಫರ್ಜಾನಾ ಪಠಾಣ್ ಮಾತು ಕೇಳಿ ರಿಯಾಜ್, ಮೊದಲ ಪತ್ನಿ ಶಮಾ ಮಲಗಿದ್ದಾಗ ಆಕೆಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆಗೈದಿದ್ದಾನೆ.
ಹತ್ತು ವರ್ಷದ ಹಿಂದೆ ಶಿಗ್ಗಾವಿಯ ರಿಯಾಜ್ ಪಠಾಣ್ ಎಂಬಾತನನ್ನ ಮದುವೆಯಾಗಿದ್ದಳು. ಇದಾದ ಬಳಿಕ ಗಂಡ ಹೆಂಡತಿ ಕೆಲಸಕ್ಕೆಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಇಂಚಲ ಗ್ರಾಮಕ್ಕೆ ಬಂದು ನೆಲಸಿದ್ದರು. ರಿಯಾಜ್ ರಸ್ತೆ ಬದಿಯಲ್ಲಿ ಚೆಸ್ಮಾ, ವಾಚ್ ಮಾರುವ ವ್ಯಾಪಾರ ಮಾಡುತ್ತಿದ್ದರೆ, ಶಮಾ ಮಾತ್ರ ಮನೆಯಲ್ಲೇ ಇರುತ್ತಿದ್ದಳು. ಈ ದಂಪತಿಗೆ ಮೂರು ಮಕ್ಕಳು ಸಹ ಇದ್ದು, ಸಂಸಾರ ಸುಂದರವಾಗಿತ್ತು. ಆದ್ರೆ, ಈ ಸಂಸಾರದಲ್ಲಿ ಮತ್ತೋರ್ವ ಮಹಿಳೆ ಎಂಟ್ರಿ ಕೊಟ್ಟಿದ್ದಕ್ಕೆ ಈ ದುರಂತ ಸಂಭಿಸಿದೆ.
ಒಂದೂವರೆ ವರ್ಷದ ಹಿಂದೆ ಹೆಂಡತಿ ಇದ್ರೂ ರಿಯಾಜ್ ಮತ್ತೊಬ್ಬಳನ್ನ ಗುಟ್ಟಾಗಿ ಮದುವೆಯಾಗಿದ್ದ. ಎರಡನೇಯ ಮದುವೆಯಾಗಿದ್ದ ರಿಯಾಜ್ ಕೆಲ ತಿಂಗಳಿಂದ ಮನೆಗೆ ಬರುವುದನ್ನ ನಿಲ್ಲಿಸಿದ್ದ. ವಾರದಲ್ಲಿ ಎರಡ್ಮೂರು ದಿನ ಬರುತ್ತಿದ್ದ. ಇದರಿಂದ ಸಂಶಯ ಬಂದು ಕೇಳಿದಾಗ ತನಗೆ ಫರ್ಜಾನಾ ಎಂಬಾಕೆ ಜೊತೆಗೆ ಮತ್ತೊಂದು ಮದುವೆಯಾಗಿರುವುದಾಗಿ ಹೇಳಿದ್ದ. ಇದನ್ನ ಕೇಳಿ ಶಾಕ್ ಆಗಿದ್ದ ಶಮಾ ಮೂರು ಮಕ್ಕಳಿಗಾಗಿ ಅನಿವಾರ್ಯವಾಗಿ ರಿಯಾಜ್ ಜೊತೆಗೆ ಉಳಿದುಕೊಂಡಿದ್ದಳು. ಆದ್ರೆ, ಗಂಡ ರಿಯಾಜ್ ಮಾತ್ರ ಸರಿಯಾಗಿ ಮನೆಗೆ ಬರುವುದನ್ನೇ ನಿಲ್ಲಿಸಿದ್ದ. ಇದರಿಂದ ಕೆರಳಿದ್ದ ಶಮಾ ತನ್ನೊಟ್ಟಿಗೆ ಇರುವಂತೆ ಒತ್ತಾಯಿಸುತ್ತಿದ್ದಳು.
ಕೆಲ ದಿನಗಳ ಹಿಂದೆ ಎರಡನೇವಳನ್ನ ಬಿಟ್ಟು ಬಿಡುವಂತೆ ಹೇಳಿದ್ದಳು. ಇದರಿಂದ ಕೋಪಗೊಂಡು ಈ ವಿಚಾರವನ್ನ ಎರಡನೇ ಹೆಂಡ್ತಿ ಫರ್ಜಾನ ಮುಂದೆ ಹೇಳಿಕೊಂಡಿದ್ದ. ಆಗ 2ನೇ ಪತ್ನಿ, ಶಮಾಳನ್ನು ಸಾಯಿಸಿಬಿಡು ಎಂದು ಸಲಹೆ ಕೊಟ್ಟಿದ್ದಾಳೆ. 2ನೇ ಹೆಂಡ್ತಿ ಕೊಟ್ಟ ಪ್ಲ್ಯಾನ್ನಂತೆ ರಾತ್ರಿ ಮನೆಗೆ ಬಂದು ಮಲಗಿದ್ದ ಶಮಾಳ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ