ವಿಟಮಿನ್ ಸಿ ಮತ್ತು ಇತರ ಪೋಷಕಾಂಶಗಳ ಸಮೃದ್ಧ ಮೂಲವಾಗಿರುವ ಕಿತ್ತಳೆ ಹಣ್ಣು ರುಚಿಕರ ಮಾತ್ರವಲ್ಲ ಆರೋಗ್ಯಕ್ಕೂ ಹಲವು ಪ್ರಯೋಜನಗಳನ್ನು ನೀಡುತ್ತದೆ. ಸಾಮಾನ್ಯವಾಗಿ ನಾವು ಕಿತ್ತಳೆ ಹಣ್ಣನ್ನು ತಿಂದು ಅದರ ಸಿಪ್ಪೆಯನ್ನು ಬಿಸಾಡುತ್ತೇವೆ. ಆದರೆ, ಕಿತ್ತಳೆ ಸಿಪ್ಪೆ ತ್ಯಾಜ್ಯವಲ್ಲ, ಅದು ಪೋಷಕಾಂಶಗಳ ಖಜಾನೆ ಎಂದು ನಿಮಗೆ ತಿಳಿದಿದೆಯೇ?
ಮಹಿಳೆಯೊಂದಿಗೆ ರಾಸಲೀಲೆ ಪ್ರಕರಣ: ಮಧುಗಿರಿ ಉಪವಿಭಾಗದ ಡಿವೈಎಸ್ ಪಿ ಸಸ್ಪೆಂಡ್!
ಸಾಮಾನ್ಯವಾಗಿ ನಾವು ಕಿತ್ತಳೆ ಹಣ್ಣಿನ ಸಿಪ್ಪೆ ಸುಲಿದು ಅದು ಕಸವೆಂದುಕೊಂಡು ಆಚೆ ಎಸೆಯುವವರೆ ಹೆಚ್ಚು. ಆದ್ರೆ ನೆನಪಿರಲಿ ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿಯೂ ಕೂಡ ಆರೋಗ್ಯಕಾರಿ ಅಂಶಗಳು ಇವೆ.
1 ಕಿತ್ತಳೆಗಿಂತ ಹೆಚ್ಚು ಆಂಟಿಆಕ್ಸಿಡೆಂಟ್ ಅಂಶ
ನಾವು ಕಿತ್ತಳೆ ಹಣ್ಣಿನ ಸಿಪ್ಪೆ ತಿನ್ನುವುದರಿಂದ ಆಕ್ಸಿಡೆಟೀವ್ ಸ್ಟ್ರೇಸ್ ಹಾಗೂ ಉರಿಯೂತದಂತಹ ಸಮಸ್ಯೆಗಳು ಕಡಿಮೆ ಆಗುತ್ತವೆ. ಕಾರಣ ಇದರಲ್ಲಿ ಕಿತ್ತಳೆ ಹಣ್ಣಿಗಿಂತ ಹೆಚ್ಚು ಆಂಟಿಆಕ್ಸಿಡೆಂಟ್ ಅಂಶಗಳಿವೆ. ಈ ಅಂಶಗಳಿರುವ ಕಾರಣದಿಂದಾಗಿ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು ನರರೋಗಕ್ಕೆ ಸಂಬಂಧಿಸಿದ ಕಾಯಿಲೆಗಳು ನಿಮ್ಮ ಸಮೀಪ ಹಾಯುವುದಿಲ್ಲ.
ವಿಟಮಿನ್ ಸಿ ಯಿಂದ ಹೃದಯ ಆರೋಗ್ಯಕ್ಕೆ ಉಪಯುಕ್ತ
ಇತ್ತೀಚೆಗೆ ಹೊರಬಂದ ದಿ ಜರ್ನಲ್ ಆಫ್ ಅಗ್ರಿಕಲ್ಚರ್ ಅಂಡ್ ಫುಡ್ ಕೆಮೆಸ್ಟ್ರೀ ಎಂಬ ಅಧ್ಯಯನ ಕಿತ್ತಳೆ ಹಣ್ಣಿನ ಸಿಪ್ಪೆ ತಿನ್ನುವುದರಿಂದ ದೇಹಕ್ಕೆ ಅತಿಹೆಚ್ಚು ವಿಟಿಮಿನ್ ಸಿ ದೊರೆಯುತ್ತದೆ. ಇದರಿಂದ ಹೃದಯದ ಆರೋಗ್ಯವು ಹೆಚ್ಚು ಸುಧಾರಿಸುತ್ತದೆ ಎಂದು ಹೇಳಲಾಗಿದೆ. ಆದ್ದರಿಂದ ಕಿತ್ತಳೆ ಹಣ್ಣಿನ ಸಿಪ್ಪೆ ಒಂದು ಕಸವಲ್ಲ ಅದು ಅನೇಕ ವಿಟಮಿನ್ಗಳನ್ನು ಹೊಂದಿರುವ ರಸ ಎನ್ನುವುದು ನಿಮಗೆ ನೆನಪಿರಲಿ
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಈಗಾಗಲೇ ನಿಮಗೆ ಹೇಳಿದಂತೆ ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್ ಸಿ ಇದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಬಹಳ ಸಹಾಯಕಾರಿ. ಇದರಲ್ಲಿ ಆಂಟಿಮೈಕ್ರೋಬಿಯಾದಂತಹ ಅಂಶಗಳು ಇರುವುದರಿಂದ ಅನೇಕ ಸೋಂಕುಗಳಿಂದ ನಮ್ಮನ್ನು ದೂರವಿಡುತ್ತದೆ.
3 ಪಚನ ಕ್ರಿಯೆಗೆ ಸಹಾಯಕ
ಈ ಹಣ್ಣಿನ ಸಿಪ್ಪೆಯನ್ನು ತಿನ್ನುವುದರಿಂದ ನಮ್ಮ ಒಟ್ಟಾರೆ ಪಚನಕ್ರಿಯೆಯ ಪ್ರಕ್ರಿಯೆಗೆ ಸಹಾಯಕವಾಗಲಿದೆ. ಪೆಕ್ಟಿನ್ ಅಂಶವಿರುವುದರಿಂದಾಗಿ ಪಚನಕ್ರಿಯೆಯ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸುವುದಕ್ಕೆ ಶುರು ಮಾಡುತ್ತದೆ. ಹೀಗೆ ಹಲವು ಪ್ರಯೋಜನಗಳಿಂದಾಗಿ ಈ ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ತಿನ್ನಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.
4 ಸಕ್ಕರೆ ರೋಗ ಇರುವವರಿಗೆ ತುಂಬಾ ಒಳ್ಳೆಯದು
ಅತಿಹೆಚ್ಚು ಫೈಬರ್ ಅಂಶವಿರುವ ಕಿತ್ತಳೆ ಹಣ್ಣಿನ ಸಿಪ್ಪೆ , ಸಕ್ಕರೆ ರೋಗ ಇರುವವರು ತಿಂದರೆ ತುಂಬಾ ಪ್ರಯೋಜನಗಳಿವೆ. ಇದು ದೇಹಕ್ಕೆ ಸೇರುವುದರಿಂದ ರಕ್ತದಲ್ಲಿ ಸೇರುವ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದರಿಂದ ಶುಗರ್ ಲೇವಲ್ ಕಡಿಮೆ ಆಗುವ ಸಾಧ್ಯತೆ ಹೆಚ್ಚು ಇದೆ.
5 ಚಯಾಪಚಯ ಕ್ರಿಯೆಗೆ ಬೂಸ್ಟ್
ಚಯಾಪಚಯ ಕ್ರಿಯೆ ಅಂದರೆ, ಚಯಾಪಚಯವು ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸಲು ದೇಹದ ಜೀವಕೋಶಗಳಲ್ಲಿ ಸಂಭವಿಸುವ ರಾಸಾಯನಿಕ ಪ್ರತಿಕ್ರಿಯೆಗಳನ್ನು ಸೂಚಿಸುತ್ತದೆ. ಕಿತ್ತಳೆ ಹಣ್ಣು ಈ ಚಯಾಪಚಯ ಕ್ರಿಯೆಗೆ ಮತ್ತಷ್ಟು ಶಕ್ತಿ ತುಂಬುವುದರಿಂದ ನಿತ್ಯ ವ್ಯಾಯಾಮ ಮಾಡಿ ತೂಕ ಇಳಿಸಬೇಕು ಅಂದುಕೊಂಡವರಿಗೆ ಬಹಳ ಸಹಾಯಕಾರಿ.