ಸಾಮಾನ್ಯವಾಗಿ ಯಾವುದೇ ರೀತಿಯ ಹಾಲನ್ನಾದರೂ ಸಹ ಬಿಸಿ ಮಾಡಿ ಕುಡಿಯುವುದು ವಾಡಿಕೆ. ಅದರಲ್ಲೂ ಬೆಳಗ್ಗೆ ಹೊತ್ತು ಹಾಲಿನಿಂದ ಕಾಫಿ, ಟೀ ಮಾಡಿ ಕುಡಿಯುವ ಅಭ್ಯಾಸ ಸಾಕಷ್ಟು ಮಂದಿಗಿದೆ. ಅಲ್ಲದೇ ಮನೆಗೆ ಅತಿಥಿಗಳು ಬಂದಾಗ ಮೊದಲು ನೀಡುವುದೇ ಅವರಿಗೆ ಕಾಫಿ ಮತ್ತು ಟೀ. ಇನ್ನೂ ಕೆಲವರು ಬಾದಾಮಿ ಹಾಲು ಮಾಡಿ ಕುಡಿಯಲು ಇಷ್ಟಪಡುತ್ತಾರೆ.
IPL 2025: ಮುಂಬೈ ತೊರೆಯೋದು ಕನ್ಫರ್ಮ್: ರೋಹಿತ್ ಶರ್ಮಾ ಖರೀದಿಗೆ RCB ರೆಡಿ!
ಒಟ್ಟಾರೆ ಹಾಲನ್ನು ಬಿಸಿ ಮಾಡಿ ಕುಡಿಯುವವರು ಹೆಚ್ಚಿದ್ದರೆ, ಮತ್ತೆ ಕೆಲವರು ಹಾಲನ್ನು ಕಾಯಿಸದೇ ಕುಡಿಯುತ್ತಾರೆ. ಆದರೆ ಹಾಲನ್ನು ಬಿಸಿ ಮಾಡಿ ಕುಡಿದರೆ ಒಳ್ಳೆಯದೋ ಅಥವಾ ಬಿಸಿ ಮಾಡದೇ ಕುಡಿದರೆ ಒಳ್ಳೆಯದೋ ಎಂಬುವುದರ ಬಗ್ಗೆ ನಾವಿಂದು ಒಂದಷ್ಟು ಮಾಹಿತಿಯನ್ನು ತಿಳಿಯೋಣ.
ಈ ಬಗ್ಗೆ ಹೆಮಟಾಲಜಿಸ್ಟ್-ಆನ್ಕೊಲೊಜಿಸ್ಟ್ ಡಾ. ರವಿ ಕೆ. ಗುಪ್ತಾ ಅವರು, ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಪ್ಯಾಕ್ ಮಾಡಿದ ಹಾಲನ್ನು ಬಿಸಿಮಾಡಲು ಮಾಡಬೇಕಾದ ಮತ್ತು ಮಾಡಬಾರದ ವಿಚಾರಗಳ ಬಗ್ಗೆ ವಿವರವಾಗಿ ವಿವರಿಸಿದ್ದಾರೆ.
ಡಾ.ರವಿ ಪ್ರಕಾರ ಪ್ಯಾಕೇಜ್ಡ್ ಹಾಲು ಎಂದರೆ ಪಾಶ್ಚರೀಕರಿಸಲಾಗಿದೆ. ಅಂದರೆ ಈ ಹಾಲನ್ನು ಹೆಚ್ಚಿನ ತಾಪಮಾನದಲ್ಲಿ ಬಿಸಿ ಮಾಡಿ ನಂತರ ಪ್ಯಾಕೆಟ್ಗಳಲ್ಲಿ ತುಂಬಿಸಲಾಗಿರುತ್ತದೆ. ಈ ಹಾಲನ್ನು ಮತ್ತೊಮ್ಮೆ ಕಾಯಿಸಿದರೆ ಹಾಲಿನ ಗುಣಮಟ್ಟ ಕಳೆದು ಹೋಗುತ್ತದೆ. ಹಾಲಿನಲ್ಲಿರುವ ಪ್ರಯೋಜನಕಾರಿ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ.
ಅಲ್ಲದೇ ಈ ಹಾಲನ್ನು ಹೆಚ್ಚು ಬಿಸಿಮಾಡಿದರೆ, ಹಾಲು ಮೊಸರಾಗಲು ಪ್ರಾರಂಭವಾಗುತ್ತದೆ ಅಥವಾ ಅದರ ಸ್ಥಿರತೆ ಕಳೆದುಕೊಂಡು ಗಟ್ಟಿಯಾಗಲು ಆರಂಭಿಸುತ್ತದೆ. ಹಾಗಾಗಿ ಡಾ. ರವಿ ಅವರು ನೀಡಿರುವ ಸಲಹೆಯಂತೆ ಪ್ಯಾಕೆಟ್ ಹಾಲನ್ನು ಮತ್ತೆ ಕುದಿಸಿ ಕುಡಿಯಬಾರದು.
ಹಾಲು ಕುಡಿಯುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ದೇಹಕ್ಕೆ ಸಾಕಷ್ಟು ಜೀವಸತ್ವಗಳು, ಸತು ಮತ್ತು ಪ್ರೋಟೀನ್ಗಳನ್ನು ಒದಗಿಸುತ್ತದೆ.
ಹಾಲು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ ಮತ್ತು ಚರ್ಮಕ್ಕೆ ಉತ್ಕರ್ಷಣ ನಿರೋಧಕ ಗುಣಗಳನ್ನು ಒದಗಿಸುತ್ತದೆ. ಹಾಲು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿರುವ ಕಾರಣ ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ. ಇದರಲ್ಲಿ ವಿಟಮಿನ್ ಡಿ ಕೂಡ ಸಮೃದ್ಧವಾಗಿದೆ. ವಿಟಮಿನ್ ಡಿ ಮೂಳೆಗಳನ್ನು ಬಲಪಡಿಸುವಲ್ಲಿ ಸಹ ಪರಿಣಾಮಕಾರಿಯಾಗಿದೆ.
ಹಾಲನ್ನು ಯಾವ ಸಮಯದಲ್ಲಿ ಕುಡಿಯಬೇಕು?: ಹಾಲನ್ನು ದಿನವೂ ಕುಡಿಯುವುದರಿಂದ ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ಪ್ರೋಟೀನ್ಗಳಂತಹ ಅಗತ್ಯವಾದ ಪೋಷಕಾಂಶಗಳು ಸಿಗುತ್ತವೆ. ಇದು ಮೂಳೆಯ ಆರೋಗ್ಯಕ್ಕೆ ಒಳ್ಳೆಯದು. ಸ್ನಾಯುಗಳ ಕಾರ್ಯನಿರ್ವಹಣೆಯನ್ನು ಬೆಂಬಲಿಸುವುದರ ಜೊತೆಗೆ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ. ರಂಜಕದ ಉಪಸ್ಥಿತಿಯು ಶಕ್ತಿಯ ಚಯಾಪಚಯ ಕ್ರಿಯೆಯಲ್ಲಿ ಸಹಾಯ ಮಾಡುತ್ತದೆ.
ಹಾಲನ್ನು ದಿನದ ಯಾವುದೇ ಸಮಯದಲ್ಲಿ ಕುಡಿಯಬಹುದಾದರೂ, ಮಲಗುವ ಮುನ್ನ ಬೆಚ್ಚಗಿನ ಹಾಲನ್ನು ಕುಡಿಯುವುದರಿಂದ ಹೆಚ್ಚು ಪ್ರಯೋಜನಗಳಿವೆ. .