ಬೇಸಿಗೆ ಎಂದ ತಕ್ಷಣ ನಮಗೆ ನೆನಪಿಗೆ ಬರುವ ಹಣ್ಣು ಕಲ್ಲಂಗಡಿ. ಸುಲಭವಾಗಿ ಜೀರ್ಣವಾಗುವ ಈ ಹಣ್ಣು ದೇಹಕ್ಕೆ ಸಾಕಷ್ಟು ತೇವಾಂಶವನ್ನು ಒದಗಿಸುತ್ತದೆ ಮತ್ತು ಶಾಖವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಬೇಸಿಗೆಯಲ್ಲಿ ಅನೇಕ ಜನರು ಇದನ್ನು ಹೆಚ್ಚಾಗಿ ತಿನ್ನುತ್ತಾರೆ. ಕೆಲವರು ಕಲ್ಲಂಗಡಿ ಹಣ್ಣನ್ನು ಪೂರ್ತಿಯಾಗಿ ತಿನ್ನುವುದಿಲ್ಲ, ಒಂದು ಭಾಗವನ್ನು ಫ್ರಿಡ್ಜ್ ನಲ್ಲಿಟ್ಟು ನಂತರ ತಿನ್ನುತ್ತಾರೆ.
ಹೊಟ್ಟೆ FAT ಹೆಚ್ಚಾಗಿದ್ಯಾ!? ನಿತ್ಯ ಈ ಬೀಜಗಳನ್ನು ತಿನ್ನಿ, ಎರಡೇ ತಿಂಗಳಲ್ಲಿ ಫ್ಲಾಟ್ ಆಗುತ್ತೆ!
ಬೇಸಿಗೆಯ ಬಿಸಿಲು ಶುರುವಾಗಿದೆ. ಈಗಂತೂ ಮಾರುಕಟ್ಟೆಯಲ್ಲಿ ಕಲ್ಲಂಗಡಿ ಹಣ್ಣು ಹೆಚ್ಚಾಗಿ ಸಿಗುತ್ತದೆ. ಬಾಯಲ್ಲಿ ನೀರೂರಿಸುವ ಈ ಹಣ್ಣು ಬೇಸಿಗೆಯ ಶಾಖದಿಂದ ಉತ್ತಮ ಪರಿಹಾರವನ್ನು ನೀಡುತ್ತದೆ. ಕಲ್ಲಂಗಡಿಯಲ್ಲಿ ನೀರು ಮತ್ತು ನಾರಿನ ಅಂಶ ಹೇರಳವಾಗಿದೆ.
ಕಲ್ಲಂಗಡಿ ಹಣ್ಣು ನಿರ್ಜಲೀಕರಣವನ್ನು ಕಡಿಮೆ ಮಾಡುತ್ತದೆ. ಆದರೆ, ಅನೇಕ ಮಂದಿ ಕಲ್ಲಂಗಡಿ ತಿಂದ ತಕ್ಷಣ ನೀರು ಕುಡಿಯುತ್ತಾರೆ. ಆದರೆ ಎಂದಿಗೂ ಈ ತಪ್ಪನ್ನು ಮಾಡಬೇಡಿ ಎಂದು ವೈದ್ಯರು ಹೇಳುತ್ತಾರೆ. ಇದಕ್ಕೆ ನಿಖರವಾದ ವೈಜ್ಞಾನಿಕ ಕಾರಣವಿಲ್ಲದಿದ್ದರೂ, ಕೆಲವು ಆರೋಗ್ಯ ತಜ್ಞರು ಇದರಿಂದ ಅಜೀರ್ಣ, ಗ್ಯಾಸ್ಟ್ರಿಕ್ ಮತ್ತು ಇತರ ಸಮಸ್ಯೆಗಳು ಉಂಟಾಗಬಹುದು ಎಂದು ಎಚ್ಚರಿಕೆ ನೀಡುತ್ತಾರೆ.
ಕಲ್ಲಂಗಡಿಯಲ್ಲಿ ನೀರಿನ ಅಂಶ ಮತ್ತು ನೈಸರ್ಗಿಕ ಸಕ್ಕರೆ ಅಂಶ ಹೆಚ್ಚಿದ್ದು, ಇದು ಜೀರ್ಣಕ್ರಿಯೆ ಮತ್ತು ಹೊಟ್ಟೆಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ವಾಸ್ತವವಾಗಿ ಬ್ಯಾಕ್ಟೀರಿಯಾದಂತಹ ಸೂಕ್ಷ್ಮಜೀವಿಗಳು ಬೆಳೆಯಲು ನೀರು ಮತ್ತು ಸಕ್ಕರೆ ಎರಡೂ ಬೇಕು. ಹಾಗಾಗಿ ಕಲ್ಲಂಗಡಿ ತಿಂದ ತಕ್ಷಣ ನೀರು ಕುಡಿಯುವುದರಿಂದ, ನಿಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಬ್ಯಾಕ್ಟೀರಿಯಾ ಬೆಳೆಯುವ ಸಾಧ್ಯತೆ ಇರುತ್ತದೆ.
ಇದು ಹೊಟ್ಟೆಯ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಇದಲ್ಲದೇ, ಹೊಟ್ಟೆ ಉಬ್ಬುವಿಕೆ, ಗ್ಯಾಸ್ಟ್ರಿಕ್ ಮತ್ತು ಹೊಟ್ಟೆಯ ಅಸ್ವಸ್ಥತೆಯಂತಹ ಸಮಸ್ಯೆಗಳು ಉಂಟಾಗಬಹುದು. ಕಲ್ಲಂಗಡಿ ತಿಂದ ತಕ್ಷಣ ನೀರು ಕುಡಿಯುವುದರಿಂದ ಹೊಟ್ಟೆಯಲ್ಲಿ ಪಿಹೆಚ್ ಸಮತೋಲನ ಹಾಳಾಗಬಹುದು. ಇದು ಉತ್ತಮ ಜೀರ್ಣಕ್ರಿಯೆಗೆ ಅಡ್ಡಿಯುಂಟು ಮಾಡುತ್ತದೆ.
ಕಲ್ಲಂಗಡಿ ತಿಂದ ನಂತರ ನೀರು ಕುಡಿದರೆ ಜೀರ್ಣಾಂಗ ವ್ಯವಸ್ಥೆ ದುರ್ಬಲಗೊಂಡು ಇದರಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಕೆಲವೊಮ್ಮೆ, ಕಲ್ಲಂಗಡಿ ತಿಂದ ತಕ್ಷಣ ಹೆಚ್ಚು ನೀರು ಕುಡಿಯುವುದರಿಂದ ಅತಿಸಾರ, ಹೊಟ್ಟೆ ಉಬ್ಬರ ಮತ್ತು ವಾಂತಿ ಕೂಡ ಉಂಟಾಗುತ್ತದೆ.
ಏಕೆಂದರೆ ಕುಡಿಯುವ ನೀರು ಕಲ್ಲಂಗಡಿ ಜೀರ್ಣಕ್ರಿಯೆಯ ಪ್ರಕ್ರಿಯೆಯಲ್ಲಿ ವ್ಯತ್ಯಾಸವನ್ನುಂಟು ಮಾಡುತ್ತದೆ. ದುರ್ಬಲ ಜೀರ್ಣಶಕ್ತಿ ಇರುವವರು ಈ ಸಮಸ್ಯೆಗಳನ್ನು ಅನುಭವಿಸುವ ಸಾಧ್ಯತೆ ಹೆಚ್ಚು. ಆದರೆ, ಈ ಸಮಸ್ಯೆ ಎಲ್ಲರಿಗೂ ಆಗುವುದಿಲ್ಲ, ಇದು ಪ್ರತಿಯೊಬ್ಬ ವ್ಯಕ್ತಿಯ ಜೀರ್ಣಕ್ರಿಯೆಯ ಶಕ್ತಿಯನ್ನು ಅವಲಂಬಿಸಿರುತ್ತದೆ.
ನೀರು ಯಾವಾಗ ಕುಡಿಯಬೇಕು: ಜೀರ್ಣಕ್ರಿಯೆಯ ಸಮಸ್ಯೆಗಳನ್ನು ತಡೆಗಟ್ಟಲು, ಕಲ್ಲಂಗಡಿ ತಿಂದ ನಂತರ ಕನಿಷ್ಠ ಒಂದು ಗಂಟೆ ಕಾಯಬೇಕು ಮತ್ತು ನೀರು ಕುಡಿಯಬೇಕು ಎಂದು ತಜ್ಞರು ಹೇಳುತ್ತಾರೆ. ಕಲ್ಲಂಗಡಿಗಳು ಮಾತ್ರವಲ್ಲದೇ, ಕಲ್ಲಂಗಡಿ ಜಾತಿಗೆ ಸೇರಿದ ಕರಬೂಜ, ಸೌತೆಕಾಯಿ, ಕಿತ್ತಳೆ ಮತ್ತು ಸ್ಟ್ರಾಬೆರಿಗಳಲ್ಲಿಯೂ ಹೆಚ್ಚಿನ ನೀರಿನ ಅಂಶವಿದೆ.
ಇವುಗಳನ್ನು ತಿಂದ ನಂತರವೂ ಸ್ವಲ್ಪ ಸಮಯ ಬಿಟ್ಟು ನೀರು ಕುಡಿಯುವುದು ಒಳ್ಳೆಯದು. ಹೀಗೆ ಮಾಡುವುದರಿಂದ ಹೊಟ್ಟೆಯಲ್ಲಿ ಆಮ್ಲಗಳು ಮತ್ತು pH ಮಟ್ಟಗಳು ತೊಂದರೆಗೊಳಗಾಗದಂತೆ ನೋಡಿಕೊಳ್ಳುತ್ತದೆ. ಆಹಾರ ಸರಿಯಾಗಿ ಜೀರ್ಣವಾಗುವಂತೆ ನೋಡಿಕೊಳ್ಳುತ್ತದೆ.
ಕಲ್ಲಂಗಡಿ ತಿಂದ ನಂತರ ಹಾಲು ಕುಡಿಯಬಹುದೇ?: ಆಯುರ್ವೇದದ ಪ್ರಕಾರ, ಕೆಲವು ರೀತಿಯ ಆಹಾರವನ್ನು ಒಟ್ಟಿಗೆ ಸೇವಿಸುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಕಲ್ಲಂಗಡಿ ಸ್ವಲ್ಪ ಸಿಟ್ರಸ್ ಪರಿಮಳವನ್ನು ಹೊಂದಿದ್ದರೆ, ಹಾಲು ನೈಸರ್ಗಿಕವಾಗಿ ಸಿಹಿಯಾಗಿರುತ್ತದೆ.
ಹೀಗಾಗಿ ಕಲ್ಲಂಗಡಿ ತಿಂದ ತಕ್ಷಣ ಹಾಲು ಕುಡಿದರೆ ಹೊಟ್ಟೆ ಉಬ್ಬರ, ಅಜೀರ್ಣ ಮತ್ತು ಹೊಟ್ಟೆ ಉಬ್ಬರ ಬರುವ ಸಾಧ್ಯತೆ ಇದೆ. ಎರಡೂ ದ್ರವ ಪದಾರ್ಥಗಳಾಗಿರುವುದರಿಂದ, ಇವುಗಳನ್ನು ಒಂದೇ ಸಮಯದಲ್ಲಿ ತೆಗೆದುಕೊಳ್ಳುವುದರಿಂದ ನಿಮ್ಮ ಹೊಟ್ಟೆ ತುಂಬಿ ನಿಮಗೆ ಅನಾನುಕೂಲಕರವೆನಿಸಬಹುದು.
ಕಲ್ಲಂಗಡಿಯ ಪ್ರಯೋಜನಗಳು: ಕಲ್ಲಂಗಡಿ ಹಣ್ಣಿನಲ್ಲಿ ಲೈಕೋಪೀನ್ ಎಂಬ ಪೋಷಕಾಂಶ ಸಮೃದ್ಧವಾಗಿದೆ. ಇದು ಕಲ್ಲಂಗಡಿಗೆ ವಿಶಿಷ್ಟವಾದ ಕೆಂಪು ಬಣ್ಣವನ್ನು ನೀಡುತ್ತದೆ. ಇದು ಶಕ್ತಿಶಾಲಿ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಬಹು ಮುಖ್ಯವಾಗಿ ಇದು ದೇಹದಲ್ಲಿ ಸಂಗ್ರಹವಾಗಿರುವ ಫ್ರೀ ರಾಡಿಕಲ್ಗಳನ್ನು ತೆಗೆದುಹಾಕುತ್ತದೆ ಮತ್ತು ಜೀವಕೋಶದ ಹಾನಿಯನ್ನು ಕಡಿಮೆ ಮಾಡುತ್ತದೆ.