ಕಲಘಟಗಿ: ಏಡ್ಸ್ ರೋಗ ತಡೆಗಟ್ಟಲು ಎಲ್ಲರೂ ಕೈಜೋಡಿಸುವುದು ಅವಶ್ಯವಾ ಗಿದೆ. ಜೊತೆಗೆ ರೋಗ ಹರಡದಂತೆ ತಿಳಿವಳಿಕೆ ನೀಡುವ ವಿಶೇಷ ದಿನವಾಗಿದೆ ಎಂದು ಹಿರಿಯ ಸೆಷನ್ಸ್ ನ್ಯಾಯಾದೀಶ -ರವೀಂದ್ರ ಹೋನುಲೆ ತಿಳಿಸಿದರು. ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದಿಂದ ಪಟ್ಟಣದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯ ಇಲಾಖೆ ಏಡ್ಸ್ ರೋಗದ ಕುರಿತು ಹೆಚ್ಚಿನ ನಿಗಾ ವಹಿಸಿ ಪರಿಶೀಲನೆ -ಮಾಡಿ ತಪಾಸಣೆ ಒಳಪಡಿಸಿ ನಂತರ -ರೋಗಿಗಳಿಗೆ ರಕ್ತ ನೀಡಲಾಗುತ್ತಿದೆ. ಅವರ ಕಾರ್ಯ ಮೆಚ್ಚುವಂತಹದು.
Free Gas Scheme: ಈ ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಸಿಗಲಿದೆ ಉಚಿತ LPG ಗ್ಯಾಸ್..! ಇಂದೇ ಅರ್ಜಿ ಸಲ್ಲಿಸಿ
ಕಲಘಟಗಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮವನ್ನು ನ್ಯಾಯಾಧೀಶ ರವೀಂದ್ರ ಹೋನುಲೆ ಉದ್ಘಾಟಿಸಿದರು ಎಂದರು. ಆಸ್ಪತ್ರೆ ವೈದ್ಯಾಧಿಕಾರಿ ಡಾ.ಯಶವಂತ ಮದಿನಕರ ಮಾತನಾಡಿ, ಏಡ್ಸ್ ಬಗ್ಗೆ ಯಾರಿಗಾದರೂ ಆರೋಗ್ಯದಲ್ಲಿ ಅನು ಮಾನ ಮೂಡಿದರೆ ಹತ್ತಿರದ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳುವದು ಉತ್ತಮ ಎಂದರು.
ಸೆಷನ್ಸ್ ನ್ಯಾಯಾಧೀಶ ಗಣೇಶ.ಎನ್, ತಾಲ್ಲೂಕು ವಕೀಲರ ಸಂಘದ ಅಣ್ಣಪ್ಪ ಓಲೇಕಾರ, ಮಾಲತೇಶ ಕುಲಕರ್ಣಿ, ಆರೋಗ್ಯ ಇಲಾಖೆ ಸಮಾಲೋಚಕರಾದ ರೇಣುಕಾ ಜೋಗುರ, ಎನ್.ಆರ್. ಹೊಸವಕ್ಕಲ, ಎಸ್.ಎಂ.ಬಳಿಗೇರ, ಎಸ್. ಎಸ್ ಹಾವೇರಿ ಇದ್ದರು.