ಬೆಂಗಳೂರು: ಮಹಿಳೆಗೆ ಮದುವೆಯಾಗಿದ್ದರು ತನ್ನನ್ನ ಮದುವೆ ಆಗುವಂತೆ ಪೀಡಿಸುತ್ತಿದ್ದು, ಮದುವೆ ಆಗಲ್ಲ ಎಂದು ಹೇಳಿದ್ದಕ್ಕೆ ಆಕೆ ಮನೆಗೆ ಬೆಂಕಿ ಇಟ್ಟಿರುವಂತಹ ಘಟನೆ ಬೆಂಗಳೂರಿನ ಸಾರಾಯಿಪಾಳ್ಯದಲ್ಲಿ ನಡೆದಿದೆ. ಅರ್ಬಾಜ್ ಮಹಿಳೆ ಮನೆಗೆ ಬೆಂಕಿ ಇಟ್ಟ ಪಾಗಲ್ ಪ್ರೇಮಿ . ಮಹಿಳೆಯ ದೂರದ ಸಂಬಂಧಿಯಾಗಿದ್ದ ಅರ್ಬಾಜ್,
ಮದುವೆ ಆಗು ಎಂದು ಮಹಿಳೆ ಹಿಂದೆ ಬಿದ್ದಿದ್ದ. ಈ ಬಗ್ಗೆ 2 ಕುಟುಂಬದ ಹಿರಿಯರು ಬುದ್ಧಿ ಹೇಳಿದ್ದರು. ಹಿರಿಯರ ಬುದ್ಧಿಮಾತಿಗೂ ಬಗ್ಗದ ಅರ್ಬಾಜ್, ಮುಂಜಾನೆ 4 ಗಂಟೆ ಸುಮಾರಿಗೆ ಮಹಿಳೆ ಮನೆಗೆ ಬೆಂಕಿ ಹಚ್ಚಿದ್ದಾನೆ.
ಉದ್ಯೋಗ ಆಕಾಂಕ್ಷಿಗಳೇ ಗಮನಿಸಿ.. BBMPಯಲ್ಲಿ 11,307 ಗ್ರೂಪ್ ಡಿ ಹುದ್ದೆಗಳು ಖಾಲಿ ಇದೆ..! ಇಂದೇ ಅರ್ಜಿ ಸಲ್ಲಿಸಿ
ಮನೆಯಲ್ಲಿ ಯಾರೂ ಇಲ್ಲದಿದ್ದಕ್ಕೆ ಭಾರಿ ಅನಾಹುತ ತಪ್ಪಿದೆ. ಬೆಂಕಿ ಇಟ್ಟಿದ್ದರಿಂದ ಮನೆಯಲ್ಲಿದ್ದ ಬಟ್ಟೆಗಳು, ಟಿವಿ, ಫ್ರಿಡ್ಜ್ ವಸ್ತುಗಳು ಬೆಂಕಿಗಾಹುತಿ ಆಗಿವೆ. ಕೇಸ್ ದಾಖಲಿಸಿಕೊಂಡು ಅರ್ಬಾಜ್ನನ್ನು ಪೊಲೀಸರು ಬಂಧಿಸಿದ್ದಾರೆ. ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.