ಬೆಂಗಳೂರು: ಕೊಲೆ ಮಾಡುವ ಉದ್ದೇಶದಿಂದ ರೂಂಗೆ ಕರೆದುಕೊಂಡು ಹೋಗಿದ್ದಾನೆ ಎಂದು ಪೂರ್ವ ವಿಭಾಗ ಡಿಸಿಪಿ ದೇವರಾಜ್ ಹೇಳಿದ್ದಾರೆ. ಪ್ರಿಯಕರನಿಂದ ಪ್ರಿಯತಮೆಯನ್ನು ಬರ್ಬರ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ್ದು, 4 ದಿನಗಳ ಹಿಂದೆ ಸರ್ವೀಸ್ ಅಪಾರ್ಟ್ಮೆಂಟ್ನಲ್ಲಿ ಮಹಿಳೆ ಕೊಲೆ ಆಗಿದೆ.
ಆರೋಪಿ ಆರವ್ ಹನೋವ್ ಕೇರಳ ಮೂಲದವನು. ಸಿಸಿಟಿವಿಯಲ್ಲಿ ಆತ ಅಪಾರ್ಟ್ಮೆಂಟ್ನಿಂದ ಹೊರಗಡೆ ಹೋಗುವುದು ಗೊತ್ತಾಗುತ್ತೆ. ಆತನ ಪತ್ತೆಗೆ ಮೂರು ತಂಡ ರಚನೆ ಮಾಡಲಾಗಿತ್ತು. ಕೇರಳ, ಉತ್ತರ ಕರ್ನಾಟಕಕ್ಕೆ ತಂಡಗಳನ್ನು ಕಳುಹಿಸಲಾಗಿತ್ತು. ಕೊನೆಗೆ ದೇವನಹಳ್ಳಿ ಬಳಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಎಚ್ಚರ.. ಎಚ್ಚರ.. ಶನಿವಾರ ಈ ಕೆಲಸಗಳನ್ನು ಮಾಡಿದ್ರೆ ಶನಿ ದೋಷ ಬರೋದು ಗ್ಯಾರಂಟಿ!
ವೈಯಕ್ತಿಕ ವಿಚಾರಕ್ಕೆ ಕೊಲೆ ಮಾಡಿದ್ದಾನೆ. ಕೊಲೆ ಮಾಡುವ ಉದ್ದೇಶದಿಂದ ರೂಂಗೆ ಕರೆದುಕೊಂಡು ಹೋಗಿದ್ದಾನೆ. ಹಗ್ಗವನ್ನು ಮೊದಲೇ ಖರೀದಿ ಮಾಡಿದ್ದಾನೆ. ಜೆಪ್ಟೋದಲ್ಲಿ ನೈಲಾನ್, ಚಾಕು ತರಿಸಿಕೊಂಡಿದ್ದ. ಕೊಲೆಯಾದ ಮಹಿಳೆ ಹೆಚ್ಎಸ್ಆರ್ ಲೇಔಟ್ ಕೌನ್ಸಲಿಂಗ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದರು.
ಬೊಂಬಲ್ ಅನ್ನೋ ಆ್ಯಪ್ ಮೂಲಕ ಪರಿಚಯ ಆಗಿದ್ದಾರೆ. ಆರೋಪಿ ಇಲ್ಲಿಂದ ರೈಲ್ವೆ ಸ್ಟೇಷನ್ ಮೂಲಕ ಉತ್ತರ ಪ್ರದೇಶ, ವಾರಣಾಸಿ ಸೇರಿ ಹಲವು ಕಡೆಗಳಲ್ಲಿ ಹೋಗಿದ್ದಾನೆ. ಕೊನೆಗೆ ದೇವನಹಳ್ಳಿ ಬಳಿ ಬಂದಿದ್ದಾನೆ. ಮಾಹಿತಿ ಪಡೆದು ಬಂಧಿಸಲಾಗಿದೆ. ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.