ಕಲಬುರಗಿ: ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಮದ್ವೆಗೆ ಹೊರಟಿದ್ದ ಮಾವ ಸೊಸೆ ಸ್ಥಳದಲ್ಲೆ ಸಾವನ್ನಪ್ಪಿದ ದಾರುಣ ಘಟನೆ ಕಲಬುರಗಿಯಲ್ಲಿ ನಡೆದಿದೆ..ನಗರದ ಹೊರವಲಯದ ಅವರಾದ್ ಬಳಿ ಘಟನೆ ನಡೆದಿದ್ದು 60 ವರ್ಷದ ಮಾವ ಗುರುನಾಥ್ 32 ವರ್ಷದ ಸೊಸೆ ಸಂಗೀತಾ ಸ್ಥಳದಲ್ಲೆ ಮೃತಪಟ್ಟಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
ಲಕ್ಷ್ಮಣ ಎಂಬುವರಿಗೆ ಗಂಭಿರ ಗಾಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೇಲೂರಿನಿಂದ ಬಸವಕಲ್ಯಾಣಕ್ಕೆ ಸಂಬಂಧಿಕರ ಮದುವೆಗೆ ಬೈಕ್ ಮೇಲೆ ತೆರಳುವಾಗ ದುರಂತ ಸಂಭವಿಸಿದೆ. ಒಂದೇ ಬೈಕ್ ಮೇಲೆ ಮೂವರು ತೆರಳುತ್ತಿದ್ದರು ಎನ್ನಲಾಗಿದೆ. ಸಂಚಾರಿ ಠಾಣೆ ಪೋಲೀಸ್ರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ..
![](https://ainlivenews.com/wp-content/uploads/2024/01/Ad-Banner-copy-scaled.jpg)