2024ರ ವರ್ಷಾಂತ್ಯಕ್ಕೆ ಬಂದಿರೋ ಮ್ಯಾಕ್ಸ್ ಸಿನಿಮಾ ಅಮೋಘ ಸಕ್ಸಸ್ ಕಂಡಿದೆ. ಎರಡೂವರೇ ವರ್ಷಗಳ ಗ್ಯಾಪ್ ನಂತರ ಬಂದಿರೋ ಕಿಚ್ಚನ ಸಿನಿಮಾಗೆ ಅಭಿಮಾನಿಗಳ ಮೆಚ್ಚುಗೆ ಸಿಕ್ಕಿದೆ.
ಚಳಿಗಾಲದಲ್ಲಿ ಹೃದಯದ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ: ಈ ಆಹಾರಗಳ ಸೇವನೆ ಇಂದೇ ನಿಲ್ಲಿಸಿ!
ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದ್ದು, ಸಿನಿಮಾ ಸೂಪರ್ ಹಿಟ್ ಆಗಿದೆ. ಕ್ರಿಸ್ಮಸ್ ಸಂದರ್ಭದಲ್ಲಿ ತೆರೆಗೆ ಬಂದ ಈ ಚಿತ್ರವನ್ನು ಜನರು ಮೆಚ್ಚಿಕೊಂಡಿದ್ದಾರೆ.
ಅದರಂತೆ ಬಿಗ್ ಬಾಸ್ ಮನೆಯಲ್ಲೂ ಮ್ಯಾಕ್ಸಿಮಮ್ ಮ್ಯಾಕ್ಸ್ ಹವಾ ಜೋರಾಗಿದ್ದು, ಸ್ಪರ್ಧಿಗಳು ಕೇಕ್ ಕತ್ತರಿಸಿ ಕಿಚ್ಚನ ಸಕ್ಸಸ್ ಸೆಲೆಬ್ರೇಟ್ ಮಾಡಿದ್ದಾರೆ. ಇದೇ ವೇಳೆ ಬಿಗ್ ಬಾಸ್,100 ದಿನ ಓಡಲಿ ಎಂದು ಸಿನಿಮಾ ಬಗ್ಗೆ ಶುಭ ಹಾರೈಸಿದ್ದಾರೆ. ಇನ್ನೂ ಸಿನಿಮಾ ಯಶಸ್ವಿಗೆ ನನ್ನ ತಾಯಿ ಆಶೀರ್ವಾದ ಎಂದು ಸುದೀಪ್ ಹೇಳಿದ್ದಾರೆ.
ತಾಯಿಯನ್ನು ಕಳೆದುಕೊಂಡ ನೋವು ನಟ ಕಿಚ್ಚ ಸುದೀಪ್ ಅವರನ್ನು ಕಾಡುತ್ತಲೇ ಇದೆ. ಅಮ್ಮ-ಮಗ ಅಂದ್ರೆ ಹೀಗಿರಬೇಕು ಎನ್ನುವಂತಿದ್ರು ಸುದೀಪ್ ಹಾಗೂ ಅವರ ತಾಯಿ ಸರೋಜ ಸಂಜೀವ್. ಅನಾರೋಗ್ಯದಿಂದ ಬಳಲುತ್ತಿದ್ದ ಸರೋಜ ಅವರು ಅಕ್ಟೋಬರ್ 20ರಂದು ಇಹಲೋಕ ತ್ಯಜಿಸಿದ್ರು.
ಪ್ರೀತಿಯ ಅಮ್ಮನನ್ನು ಕಳೆದುಕೊಂಡ ನೋವು ಕಿಚ್ಚನನ್ನು ಬಿಟ್ಟು ಬಿಡದೆ ಕಾಡ್ತಿದೆ. ಇದೀಗ ಬಿಗ್ ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರು ಮ್ಯಾಕ್ಸ್ ಸಕ್ಸೆಸ್ಗೆ ನನ್ನ ಅಮ್ಮನೇ ಕಾರಣ. ಅವರ ಆಶೀವಾರ್ದ ಎಂದಿದ್ದಾರೆ.
ಇನ್ನೂ 2024ರ ವರ್ಷಾಂತ್ಯಕ್ಕೆ ಬಂದಿರೋ ಮ್ಯಾಕ್ಸ್ ಸಿನಿಮಾ ಅಮೋಘ ಸಕ್ಸಸ್ ಕಂಡಿದೆ. ಎರಡೂವರೆ ವರ್ಷಗಳ ಗ್ಯಾಪ್ ನಂತರ ಬಂದಿರೋ ಕಿಚ್ಚನ ಸಿನಿಮಾಗೆ ಅಭಿಮಾನಿಗಳ ಮೆಚ್ಚುಗೆ ಸಿಕ್ಕಿದೆ. ಒಂದೇ ರಾತ್ರಿಯಲ್ಲಿ ನಡೆಯೋ ಈ ಥ್ರಿಲ್ಲಿಂಗ್ ಕಹಾನಿಯಲ್ಲಿ ಕಿಚ್ಚ ಮ್ಯಾಕ್ಸಿಮಮ್ ಮಾಸ್ ಅವತಾರದಲ್ಲಿ ಮಿಂಚಿದ್ದಾರೆ.
ರಾಜ್ಯದಲ್ಲೇ 250ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಏಕಕಾಲಕ್ಕೆ ಸುದೀಪ್ ಮ್ಯಾಕ್ಸ್ ಸಿನಿಮಾ ತೆರೆಗೆ ಬಂದಿತ್ತು. ಮ್ಯಾಕ್ಸ್ ಸಿನಿಮಾ ಟಿಕೆಟ್ ಕೂಡ ಭಾರೀ ಸಂಖ್ಯೆಯಲ್ಲೇ ಸೋಲ್ಡ್ ಔಟ್ ಆಗಿತ್ತು. ‘ಮ್ಯಾಕ್ಸ್’ ಸಿನಿಮಾವನ್ನು ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ. ತಮಿಳಿನ ಖ್ಯಾತ ನಿರ್ಮಾಪಕ ಕಲೈಪುಲಿ ಎಸ್ ತನು ಅವರು ನಿರ್ಮಾಣ ಮಾಡಿದ್ದಾರೆ.