ಬಿಗ್ ಬಾಸ್ ಮನೆಯಲ್ಲಿ ಈ ವಾರ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಎಂದಿನಂತೆ ನಾಮಿನೇಟ್ ಪ್ರಕ್ರಿಯೆ ಕೂಡ ಆಗಿ ಹೋಗಿದೆ. ಅಚ್ಚರಿಯ ಸಂಗತಿ ಅಂದರೆ, ಈ ವಾರ ನಾಮಿನೇಟ್ ಆದವರಲ್ಲಿ ಅಷ್ಟೂ ಜನರು ಹುಡುಗರೇ ಇದ್ದಾರೆ. ಸಂಗೀತಾ, ನಮ್ರತಾ, ತನಿಷಾ ಈ ವಾರ ಸೇಫ್ ಆಗಿದ್ದಾರೆ. ಸಹಜವಾಗಿಯೇ ವರ್ತೂರು ಸಂತೋಷ್, ಮೈಕಲ್ (Michael), ಕಾರ್ತಿಕ್, ಡ್ರೋನ್ ಪ್ರತಾಪ್ (Drone Pratap) ಮತ್ತು ತುಕಾಲಿ ಸಂತು (Tukali Santu) ನಾಮಿನೇಟ್ ಆಗಿದ್ದಾರೆ. ಸೇಫ್ ಆದವರಲ್ಲಿ ವಿನಯ್ ಪ್ರಮುಖರು.
ಪ್ರತಿ ಸಲವೂ ನಡೆಯುವ ನಾಮಿನೇಷನ್ ಪ್ರಕ್ರಿಯೆಯಲ್ಲಿ ಈ ಐವರ ಹೆಸರು ಇದ್ದೇ ಇರುತ್ತದೆ. ಅದರಲ್ಲೂ ಕೊನೆ ಗಳಿಗೆಯಲ್ಲಿ ಹೇಗೋ ಮೈಕಲ್ ಉಳಿದುಕೊಂಡು ಬಿಡುತ್ತಾರೆ. ಆದರೆ, ಈ ವಾರ ಮೈಕಲ್ ಉಳಿದುಕೊಳ್ಳೋದು ಕಷ್ಟವೆಂದೇ ಹೇಳಲಾಗುತ್ತಿದೆ. ವರ್ತೂರು ಸಂತೋಷ್ ಈ ಬಾರಿ ಭರ್ಜರಿ ಮನರಂಜನೆ ನೀಡಿದ್ದಾರೆ.
ಹಾಗಾಗಿ ಸೇಫ್ ಆಗಬಹುದು. ಡ್ರೋನ್ ಪ್ರತಾಪ್ ಮೇಲೆ ಸಾಕಷ್ಟು ಅನುಕಂಪ ಮೂಡಿದೆ. ಅವರಿಗೆ ಹೆಚ್ಚು ವೋಟು ಬರುವ ಮೂಲಕ ಸೇಫ್ ಆಗಬಹುದು. ಕಾರ್ತಿಕ್ ಸ್ಟ್ರಾಂಗ್ ಕಂಟೆಸ್ಟೆಂಟ್ ಅವರಿಗೆ ಯಾವುದೇ ತೊಂದರೆ ಆಗದು. ಉಳಿದುಕೊಳ್ಳೋದು ತುಕಾಲಿ ಸಂತು. ಮೈಕಲ್ ಗೆ ಹೋಲಿಸಿದರೆ ತುಕಾಲಿ ಬೆಟರ್. ಹಾಗಾಗಿ ಅವರು ಉಳಿದುಕೊಳ್ಳಬಹುದು.
Phone Pay ಯೂಸ್ ಮಾಡುತ್ತಿದ್ದೀರಾ : ಹಾಗಾದ್ರೆ ಈ ಸ್ಟೋರಿ ಮಿಸ್ ಮಾಡ್ದೆ ಒದಿ!
ಸದ್ಯ ಎಲಿಮಿನೇಷನ್ (Eliminate) ತೂಗು ಕತ್ತಿ ತೂಗ್ತಾ ಇರೋದು ಮೈಕಲ್ ಮೇಲೆ. ಈ ವಾರ ಮೈಕಲ್ ಉಳಿದುಕೊಂಡರು ನಿಜಕ್ಕೂ ಅಚ್ಚರಿ. ಈಗಾಗಲೇ ಎರಡು ಬಾರಿ ಅವರು ಎಲಿಮಿನೇಷನ್ ಕತ್ತಿಯಿಂದ ಬಚಾವ್ ಆಗಿದ್ದಾರೆ. ಈ ಬಾರಿ ಮರುಜೀವ ಸಿಗೋದು ಬಹುತೇಕ ಅನುಮಾನ ಎನ್ನುವ ಮಾತು ಹರಿದಾಡುತ್ತಿದೆ. ಹಾಗಂತ ಮೈಕಲ್ ಕಳಪೆ ಏನೂ ಅಲ್ಲ. ಅದ್ಭುತ ಆಟಗಳನ್ನೇ ಆಡುತ್ತಾ ಬಂದಿದ್ದಾರೆ. ಆದರೆ, ಮನೆಯಲ್ಲಿ ಉಳಿದುಕೊಳ್ಳಲು ಬೇಕಾದ ತಂತ್ರಗಳನ್ನು ಅವರು ಅರಿತುಕೊಂಡಿಲ್ಲ.
ಎಂದಿನಂತೆ ಈ ವಾರ ಒಬ್ಬರು ಮನೆಯಿಂದ ಆಚೆ ಬರುತ್ತಾರೆ. ಮತ್ತೊಬ್ಬರು ಬಿಗ್ ಬಾಸ್ ಮನೆಯಲ್ಲಿ ಮೈನಸ್ ಆಗ್ತಾರೆ. ಸಹಜವಾಗಿಯೇ ಕಂಟೆಸ್ಟೆಂಟ್ ಗಳ ಎದೆಯಲ್ಲಿ ನಡುಕ ಶುರುವಾಗತ್ತೆ. ಮತ್ತಷ್ಟು ಧೈರ್ಯ ತಂದುಕೊಂಡು ಆಡಲೇಬೇಕಾದ ಅನಿವಾರ್ಯತೆ ಇರತ್ತೆ. ಮತ್ತೆ ಜಗಳ, ಮತ್ತೊಂದು ವೀಕೆಂಡ್. ಮುಂದಿನ ವಾರ ಯಾರು ಎಲಿಮಿನೇಟ್ ಆಗ್ತಾರೆ ಅಂತ ನೋಡೋಣ.