ಬೆಂಗಳೂರು:- ಅವರೊಬ್ಬರೇ ಮಹಾನ್ ಗಂಡಸು, ನಾವು ಗಂಡಸರಲ್ಲ ಎಂದು ಡಿಕೆ ಶಿವಕುಮಾರ್ ಅವರು ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ನಾವು ಗಂಡಸರಲ್ಲ, ಅವರೊಬ್ಬರೇ ಗಂಡಸರು. ಗಂಡಸ್ತನದ ಎಲ್ಲಾ ಶಕ್ತಿ ಅವರಲ್ಲಿ ಇದೆ. ಕುಮಾರಸ್ವಾಮಿ ಈ ಹಿಂದೆ ಏನು ಮಾತನಾಡಿದ್ದಾರೆ ನೆನಪಿಟ್ಟುಕೊಳ್ಳಬೇಕು.
ಮಿಲಿಟರಿಯವರು ಜೈಲಿಗೆ ಕರ್ಕೊಂಡು ಹೋಗ್ತಾರೆಂದು ಹೇಳಿದ್ದರು. ನಮ್ಮ ಮೇಲೆ ಸುಳ್ಳು ಕೇಸ್ ಹಾಕಿಸಿದ್ದರು. ಎಲ್ಲವನ್ನೂ ಮರೆತು ಹೆಚ್.ಡಿ.ಕುಮಾರಸ್ವಾಮಿರನ್ನು ಸಿಎಂ ಮಾಡಿದ್ದೆವು. ಮಗ ಸೋತಾ ಎಂದು ಗದಾಪ್ರಹಾರ, ಯಾರು ಸಹಿಸಿಕೊಳ್ಳುತ್ತಾರೆ? ನಾನು ಯೂಟರ್ನ್ ಮಾಡಿದವನಲ್ಲ, ಸ್ಟ್ರೈಟ್ ಯುದ್ಧ ಮಾಡಿದವನು. ಅವನ ಅಣ್ಣನ ಮಗನ ಪೆನ್ಡ್ರೈವ್ ಹಂಚಿದ್ದು ನಾನು ಎಂದಿದ್ದರು.
ಈ ಹಿಂದೆ ಅವರು ಮೋದಿ, ಅಮಿತ್ ಶಾ ಬಗ್ಗೆ ಏನು ಮಾತಾಡಿದ್ರು? ನಾನು ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿ ಮಗ ಅಲ್ಲ. ದೆಹಲಿಯಲ್ಲಿ ಯಾರಿಗೆ ಪತ್ರ ಕೊಟ್ಟ, ನಿಮ್ಮ ತಂದೆ ಏನು ಮಾಡಿದ್ರು. ವಿಚಾರಗಳು ಇದೆ ಎಂದು ಹೇಳಿದೆ, ದಾಖಲೆ ಇದೆ ಎಂದು ಹೇಳಿಲ್ಲ ಎಂದು ಡಿಕೆ ಶಿವಕುಮಾರ್ ವಾಗ್ದಾಳಿ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಡಿಕೆ ಶಿವಕುಮಾರ ಹಾಗೂ hd ಕುಮಾರಸ್ವಾಮಿ ವಿರುದ್ಧ ವಾಕ್ಸಮರ ಮುಂದುವರಿದಿದೆ.