ಮಂಗಳೂರು: ಕುಮಾರಸ್ವಾಮಿ ಯಾವಾಗ ಬೇಕಾದ್ರೂ ಹೇಗೆ ಬೇಕಾದ್ರೂ ಯೂ ಟರ್ನ್ ಹೊಡೆಯುತ್ತಾರೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮುಸ್ಲಿಮರು ಪಂಚರ್ ಹಾಕುವವರು, ವೆಲ್ಡಿಂಗ್ ಮಾಡುವರು ಅಂತಾ ಲಘುವಾಗಿ ಮಾತಾಡಿದ್ದಾರೆ. ಹೀಗಾಗಿ ಯಾಕೆ ಅವರ ಬಳಿ ಬಂದು ಓಟ್ ಕೇಳುತ್ತೀರಿ? ನಿನ್ನೆ ಕುಮಾರಸ್ವಾಮಿ ಅದೇ ಮಾತು ಹೇಳಿದ್ದಾರೆ ಎಂದ ಜಮೀರ್ ಅಹ್ಮದ್ ಖಾನ್,
ಹೌದು ಸ್ವಾಮಿ ನಾವು ಬಡವರು ಅವರ ಬಳಿ ಯಾಕೆ ಓಟ್ ಕೇಳುತ್ತೀರಿ. ಕುಮಾರಸ್ವಾಮಿಗೆ ಅದೇ ಪ್ರಶ್ನೆ ನಂದು, ಕುಮಾರಸ್ವಾಮಿ ಯಾವಾಗ ಸತ್ಯ ಹೇಳಿದ್ದಾರೆ? ಯೂ ಟರ್ನ್ ಕುಮಾರಸ್ವಾಮಿ ಅಂತ ಅವರ ಹೆಸರಿದೆ. ಯಾವಾಗ ಬೇಕಾದರೂ ಹೇಗೆ ಬೇಕಾದರೂ ಟರ್ನ್ ಮಾಡುತ್ತಾರೆ ಎಂದು ಹೇಳಿದರು.
ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್: ಈ ಯೋಜನೆಯಡಿ ಸಿಗಲಿದೆ ಉಚಿತ ‘ಹೊಲಿಗೆ ಯಂತ್ರ’!
ಇನ್ನು, ನಾನು ಜನತಾದಳಕ್ಕೆ ಬರಲು ಕಾರಣ ಆದಿಚುಂಚನಗಿರಿ ಸ್ವಾಮೀಜಿ ಎಂದ ಜಮೀರ್ ಅಹ್ಮದ್ ಖಾನ್, ನಾನು ಮಠದ ಹುಡುಗ, ಆದಿ ಚುಂಚನಗಿರಿ ಮಠದಲ್ಲಿ ಬೆಳೆದಿದ್ದು ನಾನು. ಶೇಖರ್ ಸ್ವಾಮೀಜಿ ಬಳಿ ಕೇಳಲು ಹೇಳಿ, ಪ್ರತಿ ಶನಿವಾರ ನಾನು ಬೆಳಗ್ಗಿನಿಂದ ಸಂಜೆವರೆಗೂ ಮಠದಲ್ಲಿ ಇರುತ್ತೇನೆ. ನಾನು ಸ್ವಾಮೀಜಿ ಮಡಿಲಲ್ಲಿ ಬೆಳೆದವನು. ಇದನ್ನು ಕುಮಾರಸ್ವಾಮಿ ಅವರಲ್ಲಿಯೇ ಕೇಳಿ ಎಂದು ಹೇಳಿದರು.
ಲೋಕಾಯುಕ್ತ ಅಧಿಕಾರಿಗಳು ನೋಟಿಸ್ ನೀಡಿರುವ ವಿಚಾರದ ಬಗ್ಗೆಯೂ ಮಾತನಾಡಿದ ಸಚಿವರು, ನೋಟಿಸ್ ಬಂದದ್ದು ನನಗೆ ಗೊತ್ತಿಲ್ಲ. ನೋಟಿಸ್ ಕೊಡೋದು ರೂಟೀನ್. ಇಡಿಯವರು ಎಸಿಬಿಗೆ ಪಾವರ್ಡ್ ಮಾಡಿದ್ದಾರೆ. ಕೇಸ್ ಅಲ್ಲಿಂದ ಲೋಕಾಯುಕ್ತಗೆ ಬಂದಿದೆ. ನೋಟಿಸ್ ಬಂದ ಮೇಲೆ ಹೋಗಲೇ ಬೇಕು ಎಂದು ಹೇಳಿದರು.