ಮಂಡ್ಯ:- ಸಂಸದರು ಐದು ವರ್ಷದಲ್ಲಿ ಕಾವೇರಿ ಸಮಸ್ಯೆ ಬಗಹರಿಸಿದರೆ ನಾನು ಇನ್ನು ಮುಂದೆ ಚುನಾವಣೆ ಗೆ ನಿಲ್ಲಲ್ಲ ಎಂದು ಹೇಳುವ ಮೂಲಕ ಸಂಸದ ಕುಮಾರಸ್ವಾಮಿಗೆ ಸಚಿವ ಚಲುವರಾಯಸ್ವಾಮಿ ಟಾಂಗ್ ಕೊಟ್ಟಿದ್ದಾರೆ.
ಕೆಲವು ವ್ಯಕ್ತಿಗಳನ್ನ ಓಲೈಕೆ ಮಾಡಲು ಮಾತನಾಡುವವರಿಗೆ ಬಾಯಿಗೆ ಬೀಗ ಹಾಕ್ಬೇಕು. ಸರ್ವ ಪಕ್ಷಗಳ ಸಭೆಯಲ್ಲಿ ರಾಷ್ಟ್ರ ಇಸ್ಯೂ ಇರುವ ಕಾವೇರಿ ನದಿ ಯ ವಿಚಾರದಲ್ಲಿ ಏನ್ ತೀರ್ಮಾನ ತಕೊಂಡಿದ್ರು. ಜಿಲ್ಲೆಯ ಸಂಸದರಾಗಿ ಸಭೆ ಗೆ ಬರಲ್ಲ ಅಂದ್ರೆ ಈ ಜಿಲ್ಲೆಯ ಜನರಿಗೆ ಏನು ಉತ್ತರ ಕೊಡ್ತಾರೆ.
ಅಭಿನಂದನೆ ಸಮಾರಂಭ ಬಾಡೂಟಕ್ಕೆ ಇರ್ತಾರೆ ಆದ್ರೆ ಸಭೆಗೆ ಹೋಗಲ್ಲ ಅಂದ್ರೆ ಏನ್ ಹೇಳ್ಬೇಕು. ಜನತಾ ದರ್ಶನ ಹಾಗೂ ಮಂತ್ರಿಗಿರಿ ಬೇರೆ ಆದ್ರೆ ಜನರಿಗೆ ಇವರಿಂದ ಏನ್ ಉಪಯೋಗ. ಜಿ ಮಾದೇಗೌಡ ಹಾಗೂ ಅಂಬರೀಶ್ ರವರ ಹಾಗೆ ಇವರು ಇರ್ತಾರ. ಸರ್ವ ಪಕ್ಷಗಳ ಸಭೆ ಮಾಡೋದು ನಮ್ಮ ತೀರ್ಮಾನವನ್ನು ಕೇಂದ್ರ ಸರ್ಕಾರಕ್ಕೆ ತಲುಪಿಸಲು. ಸಲಹೆ ಎಲ್ಲಾ ಕೇಳಿಲ್ಲ ಎಂದು ಸಭೆ ಗೆ ಬರ್ದೆ ಇದ್ರೆ ಏನ್ ಅರ್ಥ. ಸರ್ವ ಪಕ್ಷಗಳ ಸಭೆ ಕರ್ದಾಗ ಅವರು ಮುಖ್ಯಮಂತ್ರಿ ಆಗಿದ್ದಾಗ ಎಲ್ಲರ ಸಲಹೆ ಕೇಳ್ತಿದ್ರ. ಅವರಿಗೆ ವಿಳ್ಯದ ಎಲೆ ಕೊಟ್ಟು ಕರೆಯಲ್ಲ.
ಅವರು ಬರ್ಬೇಕು ಅಥವಾ ಯಾಕೆ ಬರ್ಲಿಲ್ಲ ಅಂತ ಕೇಳುವ ಪ್ರಮೆಯ ಇಲ್ಲ ಎಂದರು.
ನಮಗೆ ಸಂವಿಧಾನದಲ್ಲಿ ಪ್ರಜಾಪ್ರಭುತ್ವ ದ ಶಕ್ತಿ ಇದೆ.
ರೈತರಿಗಾಗಿ ಕೇಂದ್ರ ಸರ್ಕಾರ ಹಾಗೂ ಕೋರ್ಟ್ ವಿರುದ್ಧ ಹೋರಾಟ ಮಾಡಲು ಸಿದ್ದರಿದ್ದೀವಿ. ಎರಡು ಲಕ್ಷಕ್ಕೂ ಅಧಿಕ ಮತ ಪಡೆದ ಸಂಸದರು ಕಾವೇರಿ ವಿಚಾರ ಚರ್ಚಿಸಲು ಸರ್ವ ಪಕ್ಷಗಳ ಸಭೆಗೆ ಬರದ ಸಂಸದರು ಇವರು.
ಜನರಿಗೆ ಕೊಟ್ಟ ಮೊದಲ ಭರವಸೆ ಕಾವೇರಿ ನೀರಿನ ಸಮಸ್ಯೆ ಬಗೆಹರಿಸ್ತೀನಿ ಎನ್ನುವುದು. ಇದೇ ಸಂಸದರು ಐದು ವರ್ಷ ದಲ್ಲಿ ಕಾವೇರಿ ಸಮಸ್ಯೆಯನ್ನ ಬಗಹರಿಸಿದರೆ ನಾನು ಇನ್ನು ಮುಂದೆ ಚುನಾವಣೆ ಗೆ ನಿಲ್ಲಲ್ಲ. ಈ ಸಮಸ್ಯೆ ಬಗಹರಿದರೆ ನಾನು ಅವರ ಸೇವಕನಾಗಿ ಇರ್ತೀನಿ. CWRC ಯಲ್ಲಿ ಇವರು ಬಗೆ ಹರಿಸ್ತಾರ ಎಂದು ಪ್ರಶ್ನಿಸಿದರು.