ಬೆಂಗಳೂರು: ಬಿಜೆಪಿ- ಜೆಡಿಎಸ್ ಲೋಕಸಭಾ ಮೈತ್ರಿಯ ನಂತರ ಎರಡೂ ಪಕ್ಷಗಳಲ್ಲಿ ಆದ ರಾಜಕೀಯ ಕ್ಷಿಪ್ರ ಬೆಳವಣಿಗೆಗಳು ಭಾರೀ ತಲ್ಲಣವನ್ನೇ ಸೃಷ್ಠಿಸಿವೆ. ಅಸಮಾಧಾನ, ಆಂತರಿಕೆ ಭಿನ್ನಮತ, ಆಪರೇಷನ್ ಹಸ್ತ ಮಧ್ಯೆ ಉಭಯ ಪಕ್ಷದ ನಾಯಕರಿಗೆ ತಲೆನೋವು ತಂದೊಡ್ಡಿದೆ. ಈ ಅಸಮಾಧಾನ ಶಮನಕ್ಕೆ ಎರಡೂ ಪಕ್ಷದ ರಾಜ್ಯಾಧ್ಯಕ್ಷರು ಮುಂದಾಗಿದ್ದು ಮೈತ್ರಿಯನ್ನ ಸರಿದಾರಿಗೆ ತರಲು ಜೋಡೆತ್ತುಗಳಾಗಿ ಕೆಲಸ ಮಾಡಲು ಮುಂದಾಗಿದ್ದಾರೆ. ಕುಮಾರಸ್ವಾಮಿ- ವಿಜಯೇಂದ್ರ ಭೇಟಿಯ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…….
2024 ರ ಲೋಕಸಭಾ ಚುನಾವಣೆಗೆ ಬಿಜೆಪಿ ಹೈಕಮಾಂಡ್ ನಾಯಕರು ಕಮಲ-ದಳ ಮೈತ್ರಿಯನ್ನು ಮಾಡಿಕೊಂಡಿದ್ದಾರೆ. ಈ ಮೈತ್ರಿಗೆ ಉಭಯ ಪಕ್ಷಗಳಲ್ಲೂ ಅಸಮಾಧಾನ ಸ್ಪೋಟಗೊಂಡಿದೆ ಕೆಲ ನಾಯಕರು ನಮಗೆ ಹೇಳದೆ ಮೈತ್ರಿ ಮಾಡಿಕೊಂಡಿದ್ದಾರೆ ಅಂತ ಮುನಿಸಿಕೊಂಡಿದ್ರೆ, ಕೆಲವರು ಪಕ್ಷದೊಳಗಿನ ಲೆಕ್ಕಾಚಾರ, ಜಾತಿ ಸಮೀಕರಣ, ಸ್ಥಳೀಯ ಲೆಕ್ಕಾಚಾರಗಳಿಂದಾಗಿ ಮೈತ್ರಿ ವಿರೋಧಿಸ್ತಿದ್ದಾರೆ. ಅದ್ರಲ್ಲು ಪ್ರಮುಖವಾಗಿ ಈಗಾಗ್ಲೆ ಜೆಡಿಎಸ್ ನ ಇಬ್ಬರು ಮಾಜಿ ಶಾಸಕರು ಮೈತ್ರಿ ವಿರೋಧಿಸಿ ಹೊರೆ ಇಳಿಸಿ ಹಸ್ತ ಹಿಡಿದಿದ್ದಾರೆ. ಈ ಮಧ್ಯೆ ಎಲ್ಲಾ ಅಸಮಾಧಾನ, ಭಿನ್ನಮತಗಳನ್ನು ಸರಿಪಡಿಸಿ ಚುನಾವಣೆ ತಂತ್ರಗಾರಿಕೆ ಮಾಡಲು ಎರಡೂ ಪಕ್ಷದ ರಾಜ್ಯಾಧ್ಯಕ್ಷರುಗಳು ಮುಂದಾಗಿದ್ದಾರೆ….
ರಾಮನಗರದ ಕೇತಗಾನಹಳ್ಳಿ ಯ ಮಾಜಿ ಸಿಎಂ ಕುಮಾರಸ್ವಾಮಿ ನಿವಾಸಕ್ಕೆ ಮಧ್ಯಾಹ್ನ 2 ಗಂಟೆಗೆ ತೆರಳಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಧ್ಯಾಹ್ನದ ಭೋಜನದ ಜೊತೆ ಲೋಕಸಮರದ ಮೆಗಾ ಮೀಟಿಂಗ್ ನಡೆಸಿದ್ರು. ಈ ಸಂಧರ್ಭದಲ್ಲಿHDK ಗೆ ಪುತ್ರ ನಿಖಿಲ್ ಸೇರಿದಂತೆ ಹಲವು ಶಾಸಕರು ಸಾಥ್ ನೀಡಿದ್ರು. ಸುಮಾರು 1 ಗಂಟೆಗಳ ಕಾಲ ನಡೆದ ಮೆಗಾ ಮೀಟಿಂಗ್ ನಲ್ಲಿ ಎರಡೂ ಪಕ್ಷದಲ್ಲಿ ಆಗ್ತಿರುವ ಭಿನ್ನಮತ, ಅಸಮಾಧಾನ, ಗೊಂದಲಗಳನ್ನು ಬಗೆಹರಿಸುವ ಬಗ್ಗೆ ಚರ್ಚೆ ನಡೆಸಿದ್ರು. ಇದಾದ್ಮೇಲೆ ಪ್ರಮುಖವಾಗಿ ಕುತೂಹಲಕೆರಳಿಸಿರುವ ಸೀಟು ಹಂಚಿಕೆ, ಅಭ್ಯರ್ಥಿಗಳ ಆಯ್ಕೆ ಕುರಿತಂತೆಯೂ ಉಭಯ ಅಧ್ಯಕ್ಷರುಗಳು ಚರ್ಚೆ ನಡೆಸಿದ್ರು….
ದೀರ್ಘಕಾಲದ ಸಂದಿ ನೋವು & ವಯಸ್ಸಾದಂತೆ ಈ ನೋವುಗಳು ನಿಮ್ಮನ್ನ ಕಾಡುತ್ತಿದ್ದರೆ: ಇಲ್ಲಿದೆ ಉಚಿತ – ಸಲಹೆ, ಸರಳ ಚಿಕಿತ್ಸೆ
ಮೆಗಾ ಮೀಟಿಂಗ್ ನ ನಂತರ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮುಂಬರುವ ಲೋಕಸಭಾ ಚುನಾವಣೆಯಲ್ಲಿ 28 ಕ್ಕೆ 28 ಕ್ಷೇತ್ರ ಗೆಲ್ಲಬೇಕು, ರೈತ ವಿರೋಧಿ, ರಾಜ್ಯ ವಿರೋಧಿ ಈ ಸರ್ಕಾರಕ್ಕೆ ಬುದ್ದಿ ಕಲಿಸಬೇಕು. ಆ ನಿಟ್ಟಿನಲ್ಲಿ ಕೂತು ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇನೆ ಸೀಟು ಹಂಚಿಕೆ ವಿಚಾರವಾಗಿ ನಮ್ಮ ಕೇಂದ್ರ ನಾಯಕರು ಮಾತಾಡುತ್ತಾರೆ.
ನಮ್ಮಲ್ಲಿ ಏನೇ ಗೊಂದಲ ಇದ್ರೂ ಕೂಡ ಅದರ ಬಗ್ಗೆ ಚರ್ಚೆ ಮಾಡ್ತಿದ್ದೀವಿ ನಮ್ಮ ಗುರಿ ಇರೋದು ಮತ್ತೊಮ್ಮೆ ನರೇಂದ್ರ ಮೋದಿಯವರನ್ನ ಪ್ರಧಾನಿ ಮಾಡಬೇಕು ಎಂದ್ರು ವಿಜಯೇಂದ್ರ….
ಇನ್ನು ಮಾಜಿ ಸಿಎಂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಮಾತನಾಡಿ ಮೋದಿ ಮತ್ತೆ ದೇಶದ ಪ್ರಧಾನಮಂತ್ರಿ ಆಗುವ ನಿಟ್ಟಿನಲ್ಲಿ ಕೂತು ಚರ್ಚೆ ಮಾಡಿದ್ದೇವೆ. ಲೋಕಸಭಾ ಚುನಾವಣೆ ಸೀಟು ಹಂಚಿಕೆ ವಿಚಾರ ಬಗ್ಗೆ ಮಾತಾಡಿಲ್ಲ, ಆ ಬಗ್ಗೆ ಕೇಂದ್ರ ನಾಯಕರು ಕೂತು ಚರ್ಚೆ ಮಾಡ್ತಾರೆ. ಯುವ ರಾಜ್ಯಾಧ್ಯಕ್ಷರ ನೇಮಕದಿಂದ ಕಾರ್ಯಕರ್ತರ ಹುರುಪು ಹೆಚ್ಚಾಗಿದೆ,
ಅದಕ್ಕಾಗಿ ವಿಜಯೇಂದ್ರ ಅವರ ಶ್ರಮ ಹಾಕುತ್ತಿರುವುದನ್ನ ನೋಡ್ತಿದ್ದೇನೆ. ನಿಖಿಲ್, ವಿಜಯೇಂದ್ರ ಸಹೋದರ ಮನೋಭಾವದಲ್ಲಿ ಒಟ್ಟಾಗಿ ಹೋಗ್ತಾರೆ, ಬಾಂಧವ್ಯದ ಜೊತೆಗೆ ಚುನಾವಣೆ ಮಾಡ್ತಾರೆ ಎಂದ್ರು ಕುಮಾರಸ್ವಾಮಿ….
ಒಟ್ನಲ್ಲಿ ಎರಡೂ ಬಿಜೆಪಿ- ಜೆಡಿಎಸ್ ಪಕ್ಷದ ಅಧ್ಯಕ್ಷರುಗಳು ಪದಗ್ರಹಣದ ನಂತರ ಮೊದಲಭಾರಿಗೆ ಭೇಟಿಯಾಗಿ ಲೋಕಸಮರದ ಮೈತ್ರಿ ಬಗ್ಗೆ ಮೆಗಾ ಮೀಟಿಂಗ್ ನಡೆಸಿದ್ದಾರೆ. ಎರಡೂ ಪಕ್ಷದೊಳಗಿನ ಭಿನ್ನಮತ ಶಮನಕ್ಕೆ ಮೆಗಾ ಪ್ಲಾನ್ ಮಾಡಿದ್ದು ಅದನ್ನ ಅನುಷ್ಠಾನಕ್ಕೆ ತರಲು ಸರ್ಕಸ್ ಮಾಡಲಿದ್ದಾರೆ. ಸೀಟು ಹಂಚಿಕೆಯನ್ನು ಹೈಕಮಾಂಡ್ ಮೇಲೆ ಹಾಕಿರುವ ಉಭಯ ನಾಯಕರು ಅಸಮಾಧಾನವನ್ನ ಶಮನ ಮಾಡಿಕೊಳ್ಳುವ ಪಣ ತೊಟ್ಟಿದ್ದಾರೆ.ಇಬ್ಬರು ಅಧ್ಯಕ್ಷರುಗಳ ಸಂಧಾನ ಸೂತ್ರ ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೆ ಎಂಬುದನ್ನ ಕಾದುನೋಡಬೇಕಿದೆ….