ಬೆಂಗಳೂರು:- ಕಳೆದ ಮೂರು ತಿಂಗಳಿನಿಂದ ವೇತನ ಪಾವತಿ ಆಗದ ಹಿನ್ನೆಲೆ ರೊಚ್ಚಿಗೆದ್ದಿರುವ ಸಿಬ್ಬಂದಿಗಳು ಇಂದಿನಿಂದ ಆಂಬ್ಯುಲೆನ್ಸ್ ಸೇವೆ ಬಂದ್ ಮಾಡಿದ್ದಾರೆ.
ಪ್ರಜ್ವಲ್ ರೇವಣ್ಣ ಸೆಕ್ಸ್ ಟೇಪುಗಳ ಪ್ರಕರಣ ದಿಕ್ಕು ತಪ್ಪುವ ಆತಂಕ -ಕೆಎಸ್ ಲಿಂಗೇಶ್
ಇದೇ ವಿಚಾರವಾಗಿ x ನಲ್ಲಿ ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಜನರಿಗಿಂತ ಜನಪ್ರಿಯತೆಯ ವ್ಯಸನವೇ ಹೆಚ್ಚು. ಬರ ನಿರ್ವಹಣೆಗಿಂತ ಬೇಜವಾಬ್ದಾರಿಯೇ ಜಾಸ್ತಿ. ಗ್ಯಾರಂಟಿ ಕೊಟ್ಟು ಜನರ ಬದುಕು ಹಸನು ಮಾಡಿದ್ದೇವೆನ್ನುವ ಇವರಿಗೆ 108 ಆಂಬುಲೆನ್ಸ್ ಚಾಲಕರಿಗೆ ಸಂಬಳ ಕೊಡಲಿಕ್ಕೂ ಹಣವಿಲ್ಲ! ತಮ್ಮ ಜೀವ ಪಣಕ್ಕಿಟ್ಟು ಜನರ ಜೀವ ರಕ್ಷಿಸುವ ಈ ಚಾಲಕರಿಗೆ ಸಂಬಳದ ಗ್ಯಾರಂಟಿ ಕೊಡಲು ಸಾಧ್ಯವಾಗಿಲ್ಲ. 3 ತಿಂಗಳಿಂದ ಅವರಿಗೆ ವೇತನ ಪಾವತಿ ಮಾಡಿಲ್ಲ ಎಂದರೆ ನಾಚಿಕೆಗೇಡು!” ಎಂದು ವಾಗ್ದಾಳಿ ಮಾಡಿದರು.
ಬಾಗಲಕೋಟೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾಷಣ ಬಿಗಿದಿದ್ದಾರೆ. “ರಾಜ್ಯದ ಒಬ್ಬನೇ ಒಬ್ಬ ಸರಕಾರಿ ನೌಕರ ನನ್ನ ಬಳಿ ಬಂದು ಸಂಬಳ ಪಾವತಿಯಾಗಿಲ್ಲ ಎಂದು ಹೇಳಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ” ಎಂದು ಗುಡುಗಿದ್ದರು. ಹಾಗಾದರೆ, ಮಾನ್ಯ ಸಿದ್ದರಾಮಯ್ಯನವರೇ.. ನೀವು ರಾಜೀನಾಮೆ ನೀಡುವುದು ಯಾವಾಗ? ಕುರ್ಚಿ ಬಿಡುವ ಮೊದಲು ಆಂಬುಲೆನ್ಸ್ ಚಾಲಕರಿಗೆ ವೇತನ ಕೊಡಿಸಿ” ಎಂದು ಹರಿಹಾಯ್ದರು. ವೇತನ ಪಾವತಿ ಸಂಬಂಧ ಆಂಬ್ಯುಲೆನ್ಸ್ ಸಿಬ್ಬಂದಿ ಜೊತೆ ಆರೋಗ್ಯ ಇಲಾಖೆ ಸಭೆ ನಡೆಸಿದೆ. ಇಲಾಖೆ ಸಂಜೆ 6 ಗಂಟೆಯವರೆಗೂ ಕಾಲಾವಕಾಶ ಕೇಳಿದೆ.
ಇನ್ನೂ ಕೊರೊನಾ ನಂತರ ಸಿಬ್ಬಂದಿಗೆ ಹಲವು ಬಾರಿ ವೇತನ ಪಾವತಿ ಸಮಸ್ಯೆಯಾಗುತ್ತಲೇ ಇತ್ತು. 2022 ಸೆಪ್ಟೆಂಬರ್ನಲ್ಲಿ ಸಿಬ್ಬಂದಿ ನ್ಯಾಯಾಲಯದ ಮೊರೆ ಹೋಗಿದ್ದರು. ಕರ್ತವ್ಯ ನಿಲ್ಲಿಸಿ ಮುಷ್ಕರ ನಡೆಸಿದ ನಂತರ ಸಂಬಳ ನೀಡಿದ್ದರು. ಆದರೆ, ಮುಂದಿನ ಎರಡು ತಿಂಗಳಲ್ಲಿ ಸರಿಯಾಗಿ ವೇತನ ಪಾವತಿಯಾಯಿತು. ನಂತರ ಮತ್ತೆ ಸಂಬಳ ನೀಡದೆ ಸತಾಯಿಸುತ್ತಿದ್ದಾರೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.