ರಾಮನಗರ: ಎಚ್ಡಿಕೆ ರಾಜಕೀಯ ಜೀವನದಲ್ಲಿ ಅವರ ವಿರುದ್ಧ ಮಾತನಾಡಿದವರನ್ನ ಸರ್ವನಾಶ ಮಾಡಿಕೊಂಡೆ ಬಂದಿದ್ದಾರೆ ಎಂದು ಶಾಸಕ ಎಚ್ಸಿ ಬಾಲಕೃಷ್ಣ ಹೇಳಿಕೆ ನೀಡಿದ್ದಾರೆ. ರಾಮನಗರ ಜಿಲ್ಲೆ ಹೆಸರು ಬದಲಾವಣೆ ಮಾಡಿದರೆ ಸರ್ವನಾಶ ಆಗ್ತಾರೆ ಎಂಬ ಎಚ್ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶಾಸಕರು,
ಎಚ್ಡಿಕೆ ರಾಜಕೀಯ ಜೀವನದಲ್ಲಿ ಅವರ ವಿರುದ್ಧ ಮಾತನಾಡಿದವರನ್ನ ಸರ್ವನಾಶ ಮಾಡಿಕೊಂಡೆ ಬಂದಿದ್ದಾರೆ. ಸೂರ್ಯ, ಚಂದ್ರ ಇರೋವರೆಗೂ ಈ ಭೂಮಿ ಮೇಲೆ ಅವರೇ ಇರಲಿ. ನಾವೇಲ್ಲ ಸರ್ವನಾಶ ಆಗುತ್ತೇವೆ ಎಂದು ವ್ಯಂಗ್ಯವಾಗಿ ನುಡಿದರು.
ವಾಹನ ಸವಾರರೇ ಗಮನಿಸಿ.. ಆಗಸ್ಟ್ 1ರಿಂದ 130 ಕಿ.ಮೀ. ವೇಗದಲ್ಲಿ ಗಾಡಿ ಓಡಿಸಿದರೇ ಬೀಳುತ್ತೆ FIR..!
ರಾಮನಗರವನ್ನು ಜಿಲ್ಲೆ ಮಾಡಿ ನಾಲ್ಕು ಬಿಲ್ಡಿಂಗ್ ಕಟ್ಟಿದ್ದು ಬಿಟ್ರೆ ಇನ್ನೇನಾಗಿದೆ ಅಭಿವೃದ್ಧಿ? 20 ವರ್ಷ ರಾಜ್ಯಭಾರ ಮಾಡಿ ಏನು ಅಭಿವೃದ್ಧಿ ಮಾಡಿದ್ದಾರೆ. ಕಸದ ತೊಟ್ಟಿ ಇದ್ದಾಗಿದೆ ರಾಮನಗರ. ಕನಕಪುರಕ್ಕೂ ರಾಮನಗರ ಅಭಿವೃದ್ಧಿ ಹೇಗಿದೆ ಗೊತ್ತಾ?
ನಮಗೂ 20 ವರ್ಷ ಕೊಡಿ ಅಭಿವೃದ್ಧಿ ಮಾಡುತ್ತೇವೆ. ಅಭಿವೃದ್ಧಿ ಮಾಡಲಿಲ್ಲ ಅಂದ್ರೆ ಮತ್ತೆ ಬದಲಾವಣೆ ಮಾಡಿ. ಸಿಎಂ ಈಗಾಗಲೇ ಅನುದಾನ ಬಿಡುಗಡೆ ಮಾಡಿದ್ದಾರೆ. ಇನ್ನ ಸ್ವಲ್ಪ ದಿನ ನೋಡಿ ರಾಮನಗರ ಹೇಗೆ ಬದಲಾವಣೆ ಆಗಲಿದೆ ಎಂದು ಬಾಲಕೃಷ್ಣ ಹೇಳಿದರು.