ಬೆಂಗಳೂರು: ಮಾಜಿ ಸಂಸದ ಡಿ.ಕೆ.ಸುರೇಶ್ ತಂಗಿ ಎಂದು ಹೇಳಿಕೊಂಡು 9 ಕೋಟಿ ರೂ. ಮೌಲ್ಯದ ಚಿನ್ನ ಪಡೆದು ವಂಚಿಸಿದ ಆರೋಪ ಎದುರಿಸುತ್ತಿರುವ ಐಶ್ವರ್ಯಗೌಡ, ತನಗೆ ಮಾಜಿ ಸಿಎಂ ಕುಮಾರಸ್ವಾಮಿಯ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿಯೂ ಬಹಳಷ್ಟು ಪರಿಚಿತರು ಎಂದು ಹೇಳಿಕೊಂಡಿರುವುದು ಬೆಳಿಕಿಗೆ ಬಂದಿದೆ.
ಇನ್ನೂ ಈ ವಿಚಾರವಾಗಿ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಈಗ ರಾಜ್ಯದಲ್ಲಿ ಚಿನ್ನ, ಬೆಳ್ಳಿ ಕೇಸ್ ನಡೆಯುತ್ತಿದೆ. ನಿಖಿಲ್, ಅನಿತಾ ಕುಮಾರಸ್ವಾಮಿ ಪರಿಚಯ ಅಂತ ಹೇಳಿ ನಿನ್ನೆ ಮೊನ್ನೆಯಿಂದ ಸುದ್ದಿ ಬರುತ್ತಿದೆ.
ಚಳಿಗಾಲದಲ್ಲೇ ಏಕೆ ಜಾಸ್ತಿ ಸೆಕ್ಸ್ ಮಾಡಬೇಕು ಅನಿಸುತ್ತೆ ಗೊತ್ತಾ..? ಇದಕ್ಕೆ ಕಾರಣ ಇಲ್ಲಿದೆ ನೋಡಿ
ಐಶ್ವರ್ಯ ಗೌಡ ನಿಖಿಲ್, ಅನಿತಾ ಅವರನ್ನ ಯಾವಾಗ ಭೇಟಿ ಮಾಡಿದ್ರು? ಈ ಸರ್ಕಾರದಲ್ಲಿ ಎಷ್ಟರ ಮಟ್ಟಿಗೆ ತನಿಖೆ ನಡೆಯುತ್ತಿದೆ ಅನ್ನೋದು ಗೊತ್ತಿದೆ. ಮಾಧ್ಯಮಗಳಲ್ಲಿ ಬಂದ ಮೇಲೆ ನಾನು ಮಾಹಿತಿ ಪಡೆದುಕೊಂಡಿದ್ದೇನೆ. ಕೇಸ್ ಹಿನ್ನೆಲೆ ತಿಳಿದಿಕೊಂಡಿದ್ದೇನೆ ಎಂದರು.
ಇನ್ನೂ ನಿಖಿಲ್, ಅನಿತಾ ಕುಮಾರಸ್ವಾಮಿ ಅವರ ಮುಖಗಳನ್ನೇ ನೊಡಿಲ್ಲ. ಹೇಗೆ ಅವರ ಪರಿಚಯ ಅಂತ ಸುದ್ದಿ ಮಾಡಿಸುತ್ತಿದ್ದೀರಿ? ಇದರ ಹಿಂದೆ ಯಾರಿದ್ದಾರೆ? ನಿಖಿಲ್, ಅನಿತಾ ಕುಮಾರಸ್ವಾಮಿಯವರನ್ನ ಯಾಕೆ ಈ ಪ್ರಕರಣದಲ್ಲಿ ತಂದ್ರಿ? ಇದನ್ನ ಸರ್ಕಾರ ಅಂತ ಕರೆಯುತ್ತೀರಾ? ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು