ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೈ ಹಿಡಿದಿದ್ದು ಪಂಚ ಗ್ಯಾರಂಟಿ ಯೋಜನೆಗಳು. ಇದನ್ನೆ ಪಂಚರಾಜ್ಯಗಳ ಚುನಾವಣೆಯಲ್ಲಿ ಅಸ್ತ್ರವನ್ನಾಗಿ ಮಾಡಿಕೊಳ್ಳೊಕೆ ಕಾಂಗ್ರೆಸ್ ನಾಯಕರು ಹೊರಟಿದ್ದಾರೆ. ಇದಕ್ಕೆ ಬ್ರೇಕ್ ಹಾಕೋದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಮುಂದಾಗಿದ್ದಾರೆ. ತೆಲಾಂಗಣದಲ್ಲಿ ಸಿಎಂ, ಡಿಸಿಎಂ ಪ್ರಚಾರ ಮಾಡಿದಕ್ಕೆ HDK ಟಾಂಕ್ ಕೊಟ್ಟಿದ್ದು ಡ್ಯೂಪ್ಲಿಕೇಟ್ ಸಿಎಂ ಅಂತ ಡಿಕೆಶಿಯನ್ನ ವ್ಯಂಗ್ಯವಾಡಿದ್ದಾರೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ವಿರುದ್ಧ ಹ್ಯೂಬ್ಲೆಟ್ ವಾಚ್ ನ ಅಪ್ಡೇಟ್ ವರ್ಷನ್ ಬಾಂಬಗ ಸಿಡಿಸಿರೋದು ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುವಂತಿದೆ..
DKS Vs HDK: ನಮ್ಮ ಗ್ಯಾರಂಟಿ ಬಗ್ಗೆ ಕುಮಾರಸ್ವಾಮಿಗೆ ಏನು ಗೊತ್ತಿದೆ: ಡಿಸಿಎಂ ಡಿ.ಕೆ ಶಿವಕುಮಾರ್ ತಿರುಗೇಟು
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿಂದ ಮಾಜಿ ಸಿಎಂ ಕುಮಾರಸ್ವಾಮಿ ಒಂದಲ್ಲಾ ಒಂದು ಆರೋಪಗಳನ್ನ ಮಾಡ್ತಾ ಸರ್ಕಾರವನ್ನ ಇಕ್ಕಟಿಗೆ ಸಿಲುಕಿಸ್ತಿದ್ದಾರೆ. ವರ್ಗಾವಣೆ ದಂದೆಯನ್ನ ಸರ್ಕಾರದ ವಿರುದ್ದ ಹೋರಾಟ ಅಸ್ತ್ರವನ್ನಾಗಿ ಮಾಡಿಕೊಂಡಿದ್ದ ಕುಮಾರಸ್ವಾಮಿ ಇದೀಗ ಗ್ಯಾರಂಟಿ ಯೋಜನೆಗಳನ್ನ ಸಮರ್ಪಕವಾಗಿ ಜಾರಿಗೆ ತರದೇ ಜನರನ್ನ ದಾರಿತಪ್ಪಿಸಿದ್ದಾರೆ ಅಂತಾ ಕಾಂಗ್ರೆಸ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸ್ತಿದ್ದಾರೆ. ಕರ್ನಾಟಕದ ಸಕ್ಸಸ್ ಮಂತ್ರ ಪಂಚ ಗ್ಯಾರಂಟಿ ಯೋಜನೆಗಳನ್ನೇ ಕಾಂಗ್ರೆಸ್ ಪಂಚರಾಜ್ಯ ಚುನಾವಣೆಯಲ್ಲಿ ಪ್ರಚಾರದ ಅಸ್ತ್ರಗಳನ್ನಾಗಿ ಬಳಸಿಕೊಳ್ತಿದ್ದಾರೆ. ಪಂಚ ಗ್ಯಾರಂಟಿಗಳನ್ನು ಡೋಂಗಿ ಉಂಡೆನಾಮ ಅಂತ ಕಿಡಿ ಕಾರಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ…..
ತೆಲಾಂಗಣ ಚುನಾವಣೆಯ ಪ್ರಚಾರಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿವಕುಮಾರ್ ಹೋಗಿದ್ದ ವಿಚಾರಕ್ಕೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. 5 ರಾಜ್ಯಗಳಲ್ಲಿನ ಚುನಾವಣೆ ಅಂಶಗಳನ್ನು ಗಮನಿಸಿದ್ದೇನೆ ಕಳೆದ ಚುನಾವಣೆಯಲ್ಲಿ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ನ ಗ್ಯಾರಂಟಿಗಳ ಯೋಜನೆ ಗಳಲ್ಲಿ ಯಶಸ್ಸುನ್ನು ಪಡೆದಿದ್ದೇವೆ. ಗ್ಯಾರಂಟಿಗಳು ಜನತೆಗೆ ಬದುಕಿನ ಭಾಗ್ಯದ ಬಾಗಿಲು ತೆರೆದಿವೆ ಅಂತ ಕಾಂಗ್ರೆಸ್ ನಾಯಕರು ಪ್ರತಿದಿನ ಬಡಾಯಿಕೊಚ್ಚಿಕೊಳ್ತಿದ್ದಾರೆ. ತೆಲಂಗಾಣದಲ್ಲಿ ನಮ್ಮ ಸಿಎಂ, ಡಿಸಿಎಂ, ಟೆಂಪವರಿ ಚೀಫ್ ಮಿನಿಸ್ಟರ್, ಡೂಪ್ಲಿಕೇಟ್ ಚೀಫ್ ಮಿನಿಸ್ಟರ್ ಗಳು ಹಾಗೂ ಮಂತ್ರಿಗಳು ಮಾತಾಡಿದ್ದಾರೆ ಈ ಗ್ಯಾರಂಟಿಗಳ ಬೆನ್ನು ತಟ್ಟಿಕೊಳ್ಳೋಕೆ ಹೋಗಿ ಮುಖಭಂಗ ಅನುಭವಿಸಿದ್ದಾರೆ ಅಂತಾ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಗೆ ಟೆಂಪರವರಿ, ಡೂಪ್ಲಿಕೇಟ್ ಚೀಫ್ ಮಿನಿಸ್ಟರ್ ಎಂದು ಟಾಂಗ್ ಕೊಟ್ರು ಕುಮಾರಸ್ವಾಮಿ…
ತೆಲಾಂಗಣ ರಾಜ್ಯದ ಜನರು ಕಾಂಗ್ರೆಸ್ ನಾಯಕರ ಮಾತು ಕೇಳಬೇಡಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳ ಮೂಲಕ ನಮ್ಮ ರಾಜ್ಯದ ಜನರ ಹಾದಿ ತಪ್ಪಿಸಿದ್ದಾರೆ, ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಮೋಸ ಆಗಿದೆ ಅಂತಾ ಹಂತಹಂತವಾಗಿ ವಿವರಣೆ ನೀಡಿ ಆರೋಪಗಳ ಸುರುಮಳೆಗೈದಿದ್ದಾರೆ ಮಾಜಿ ಸಿಎಂ. ಇನ್ನೂ ಸಿಎಂ ಮನೆಯಲ್ಲಿ ಕಾನ್ಫರೆನ್ಸ್ ಹಾಲ್ ಮಾಡಿದ್ದಾರೆ, ಮೂರು ಕೋಟಿ ಖರ್ಚು ಆಹಿರಬಹುದು ಇದು ಸರ್ಕಾರದ ದುಡ್ಡಲ್ಲ ಸಚಿವರು ಒಬ್ಬರು ಸಿಎಂ ಮನೆ ರಿನೋವೇಷನ್ ಗೆ ಸ್ಟಾಂಗ್ಲೆ ಅಂತ ಫರ್ನಿಚರ್ ಕೊಟ್ಟಿದ್ದಾರಂತೆ. ಈ ಬಗ್ಗೆ ಸತ್ಯ ಹರಿಶ್ಚಂದ್ರ ರೇ ಉತ್ತರ ಕೊಡಬೇಕು.ಇದರ ಮೌಲ್ಯ 1 ಕೋಟಿ 90 ಲಕ್ಷ ಒಂದು ಸೋಫಾ ಸೆಟ್ ಒಂದು ಕಾಟ್ ಗೆ. ಇದು ಹ್ಯೂಬ್ಲೆಟ್ ನ ಅಬ್ ಡೇಟೆಟ್ ವರ್ಷನ್ ಎಂಬ ಗಂಭೀರ ಆರೋಪ ಮಾಡಿದ್ದಾರೆ ಕುಮಾರಸ್ವಾಮಿ….
ಗ್ಯಾರಂಟಿ ಯೋಜನೆಗಳ ಬಗ್ಗೆ ಕುಮಾರಸ್ವಾಮಿ ಆರೋಪಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ. ಕುಮಾರಸ್ವಾಮಿಗೂ ಗ್ಯಾರಂಟಿಗಳಿಗೆ ಏನು ಸಂಬಂಧ ಕುಮಾರಸ್ವಾಮಿಗೆ ಏನು ಗೋತ್ತಿದೆ ನಮ್ಮ ಗ್ಯಾರಂಟಿ ಬಗ್ಗೆ ಅವರೇನು ಫಲಾನುಭವಿನಾ, ಅವರ ಪಂಚರತ್ನ ಯೋಜನೆ ಇಂಪ್ಲಿಮೆಂಟ್ ಮಾಡಲು ಆಗಲಿಲ್ಲ. ಜನರಿಗೆ ತಲುಪಿದೇಯೋ ಇಲ್ಲ ಅಂತ ಮತದಾರರು ಕೇಳಬೇಕು. ಚನ್ನಪಟ್ಟಣದ ಮತದಾರರನ್ನು ಕೇಳಿದ್ರೆ ಕುಮಾರಸ್ವಾಮಿ ಅವರಿಗೆ ಗೊತ್ತಾಗುತ್ತೆ. ಕುಮಾರಸ್ವಾಮಿ ಅಧಿಕಾರಕ್ಕಾಗಿ ಬಹಳ ಅರ್ಜೆಂಟ್ ಅಲ್ಲಿ ಇದ್ದಾರೆ ಅದಕ್ಕೆ ಏನೇನೊ ಮಾತಾಡ್ತಾರೆ ಅಂತ ತಿರುಗೇಟು ಕೊಟ್ಟಿದ್ದಾರೆ ಡಿಕೆಶಿ….
ಒಟ್ನಲ್ಲಿ ಕಾಂಗ್ರೆಸ್ ವಿರುದ್ದ ಗ್ಯಾರಂಟಿ ಯೋಜನೆಗಳ ವಿಚಾರವನ್ನ ಇಟ್ಟುಕೊಂಡು ಮತ್ತೆ ಮಾಜಿ ಸಿಎಂ ಕುಮಾರಸ್ವಾಮಿ ಅಖಾಡಕ್ಕೆ ಸಜ್ಜಾಗ್ತಿದ್ದಾರೆ. ಪಂಚರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನೆ ಅಸ್ತ್ರವನ್ನಾಗಿ ಮಾಡಿಕೊಂಡಿರುವ ಕಾಂಗ್ರೆಸ್ ನಾಯಕರಿಗೆ ಕುಮಾರಸ್ವಾಮಿ ಕಂಟಕವಾಗ್ತಿದ್ದಾರೆ. ಸಿಎಂ ವಿರುದ್ಧ ಕುಮಾರಸ್ವಾಮಿ ಮಾಡಿರೋ ಹ್ಯೂಬ್ಲೆಟ್ ಅಪ್ಡೇಟ್ ವರ್ಷನ್ ಮುಂದಿನ ದಿನಗಳಲ್ಲಿ ಭಾರೀ ಸದ್ದು ಮಾಡುವ ಮುನ್ಸೂಚನೆ ಕಂಡುಬರ್ತಿದೆ…