ಮಂಡ್ಯ :- ಮಾಜಿ ಸಂಸದೆ ಸುಮಲತಾ ಉಪಯೋಗಿಸುತ್ತಿದ್ದ ಕಾರು ಬಳಸಲು ಕುಮಾರಸ್ವಾಮಿ ನಿರಾಕರಿಸಿದರೇ ಎಂಬ ಪ್ರಶ್ನೆ ಇದೀಗ ಹುಟ್ಟುಹಾಕಿದೆ.
ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಕರ್ನಾಟಕ ಪ್ರವಾಸದ ವೇಳೆ ರಾಜ್ಯ ಸರ್ಕಾರ ಕಾರು ನೀಡದೆ ಶಿಷ್ಟಾಚಾರ ಉಲ್ಲಂಘಿಸಿದೆ ಎಂಬ ಆರೋಪಕ್ಕೆ ಇದೀಗ ಹೊಸ ತಿರುವು ದೊರೆತಿದೆ
ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಮಾತನಾಡಿದ ಚಲುವರಾಯಸ್ವಾಮಿ, ಸರ್ಕಾರ ನನಗೆ ಕಾರು ನೀಡಿಲ್ಲ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಆದರೆ, ಸುಮಲತಾ ಉಪಯೋಗಿಸುತ್ತಿದ್ದ ಕಾರು ಬಳಸುವುದಿಲ್ಲ ಎಂದು ಯಾಕೆ ಹೇಳಿದರು’ ಎಂದು ಪ್ರಶ್ನಿಸಿದ್ದಾರೆ.
ಹೊಸ ಸಂಸದರಿಗೆ ಮೊದಲು ಹಳೆಯ ಕಾರು ನೀಡುವುದು ವಾಡಿಕೆ. ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು ಹೊಸ ಕಾರು ಖರೀದಿಸಿ ಕೊಡುತ್ತೇವೆ. ಹಿಂದೆ ನಮಗೂ ಅಂಬರೀಶ್ ಬಳಸುತ್ತಿದ್ದ ಕಾರು ಕೊಟ್ಟಿದ್ದರು. ಸಚಿವನಾದಾಗಲೂ 6 ತಿಂಗಳು ಹಳೆಯ ಕಾರನ್ನೇ ಬಳಸಿದ್ದೆ. ಇಂತಹ ಸಣ್ಣ ಹೇಳಿಕೆ, ಆರೋಪ ಮಾಡುವುದು ಅವರ ಘನತೆಗೆ ತರವಲ್ಲ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.