ಹಾವೇರಿ:- ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಕಡೂರು ಗ್ರಾಮದಲ್ಲಿ ನೀರಿನ ತೊಟ್ಟಿಯಲ್ಲಿ ಮುಳುಗಿ ಬಾಲಕನೋರ್ವ ಮೃತಪಟ್ಟ ಘಟನೆ ಜರುಗಿದೆ.
9 ವರ್ಷದ ಮೃತ ಬಾಲಕ. ನಿನ್ನೆ ಶನಿವಾರ ಆಗಿದ್ದರಿಂದ ಶಾಲೆ ಬಿಟ್ಟ ನಂತರ ಬಾಲಕ ಆಡಲು ತೆರಳಿದ್ದ. ಆಡಲು ಹೋಗಿದ್ದ ಬಾಲಕ ಶಾಲೆಯ ಬಳಿ ಇರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ನೀರಿನ ತೊಟ್ಟಿಗೆ ಬಿದ್ದಿದ್ದಾನೆ.
ಸಂಜೆಯಾದರೂ ಬಾಲಕ ಪ್ರಜ್ವಲ್ ಮನೆಗೆ ಬಂದಿರಲಿಲ್ಲ. ಹೀಗಾಗಿ ಆತನ ಮನೆಯವರು ಹುಡುಕಾಟ ನಡೆಸಿದ್ದರು. ಆಗ ಪ್ರಜ್ವಲ್ ನೀರಿನ ತೊಟ್ಟಿಯಲ್ಲಿ ಮುಳುಗಿ ಮೃತಪಟ್ಟಿರುವುದು ಗೊತ್ತಾಗಿದೆ. ನಂತರ ಬಾಲಕನ ಮೃತದೇಹವನ್ನು ನೀರಿನ ತೊಟ್ಟಿಯಿಂದ ಮೇಲಕ್ಕೆತ್ತಿ ರಟ್ಟೀಹಳ್ಳಿ ತಾಲೂಕು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ದಾಖಲಿಸಲಾಗಿದೆ.