ನಿಮ್ಮ ಮಕ್ಕಳನ್ನು ಫೋನ್ನಿಂದ ದೂರವಿಡಲು ನೀವು ಎಲ್ಲ ಪ್ರಯತ್ನಗಳನ್ನು ಮಾಡಿದ್ದರೂ, ವಿಫಲರಾಗಿರಾಗಿದ್ದರೆ ನಿಮಗೆ ಸಹಾಯಕವಾಗುವ ಕೆಲವು ಟಿಪ್ಸ್ ಇಲ್ಲಿವೆ ನೋಡಿ.
ತುಳಸಿ ಗಿಡದ ಬಳಿ ಇವುಗಳನ್ನಿಟ್ಟರೆ ದಾರಿದ್ರ್ಯ ವಕ್ಕರಿಸಿ ನರಳುತ್ತೀರಿ!
ಮಕ್ಕಳಿಗೆ ಮೊಬೈಲ್ ನೀಡಲು ಸಮಯ ನಿಗದಿಪಡಿಸುವತ್ತ ಪೋಷಕರು ಒತ್ತು ನೀಡಬೇಕು. ದಿನಕ್ಕೆ ಒಂದು ಗಂಟೆ ಮಾತ್ರ ಮೊಬೈಲ್ ಬಳಸಲು ನೀಡುವುದಾಗಿ ಅವರಿಗೆ ಸ್ಪಷ್ಟಪಡಿಸಿ. ಅದು ಟಿವಿಯೇ ಆಗಿರಲಿ, ಫೋನ್ ಅಥವಾ ಟ್ಯಾಬ್ಲೆಟ್ಯೇ ಆಗಿರಲಿ. ಈ ವಿಚಾರದಲ್ಲಿ ಪಾಲಕರು ತಮ್ಮ ಮಕ್ಕಳೊಂದಿಗೆ ಸ್ವಲ್ಪ ಕಟ್ಟುನಿಟ್ಟಾಗಿರಬೇಕು. ಅವರು ಈ ನಿಯಮವನ್ನು ಅನುಸರಿಸುತ್ತಾರೆ ಎಂದು ನೀವು ಖಚಿತಪಡಿಸಿಕೊಳ್ಳಬೇಕು. ಇದರಿಂದ ಅವರು ನಿಮಗೆ ತೊಂದರೆ ನೀಡುವುದಿಲ್ಲ.
ನಿಮ್ಮ ಮಕ್ಕಳನ್ನು ಅವರ ಮೊಬೈಲ್ ಫೋನ್ಗಳಿಂದ ದೂರವಿರಿಸಲು ನೀವು ಕ್ರೀಡೆಗಳು, ಪುಸ್ತಕಗಳನ್ನು ಓದುವುದು ಅಥವಾ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು. ಪಾಲಕರು ತಮ್ಮ ಮಕ್ಕಳನ್ನು ಉದ್ಯಾನವನಕ್ಕೆ ಕರೆದೊಯ್ಯಬಹುದು, ಬೈಕ್ ಸವಾರಿಗೆ ಕರೆದೊಯ್ಯಬಹುದು ಅಥವಾ ನೃತ್ಯ, ಈಜು, ಹೊರಗೆ ಆಟವಾಡುವುದು ಅಥವಾ ಇತರ ಚಟುವಟಿಕೆಗಳಂತಹ ಅವರ ನೆಚ್ಚಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಬಹುದು.
ಪೋಷಕರು ತಮ್ಮ ಮಕ್ಕಳೊಂದಿಗೆ ಇರುವಾಗ ಫೋನ್ ಅನ್ನು ದೂರವಿಡಿ. ನಿಮ್ಮ ಮಕ್ಕಳೊಂದಿಗೆ ಮಾತನಾಡಿ ಮತ್ತು ಅವರೊಂದಿಗೆ ಆಟವಾಡಿ. ಅವರಿಗೆ ಒಗಟುಗಳನ್ನು ನೀಡಿ, ಹೊಸ ವಿಷಯಗಳನ್ನು ಕಲಿಸಿ, ಕಥೆಗಳನ್ನು ಹೇಳಿ. ಹೀಗೆ ಮಾಡುವುದರಿಂದ ನಿಮ್ಮ ಮಕ್ಕಳು ಸ್ವಯಂಚಾಲಿತವಾಗಿ ಫೋನ್ನಿಂದ ದೂರ ಉಳಿಯುತ್ತಾರೆ. ಇದು ಪೋಷಕರಿಗೂ ಉಪಯುಕ್ತವಾಗಲಿದೆ.
ಬಹುಶಃ ನೀವು ನಿಮ್ಮ ಮಕ್ಕಳಿಗೆ ಆಟಿಕೆಗಳನ್ನು ನೀಡಿದರೆ, ಅವರು ವಯಸ್ಸಿಗೆ ಸರಿಯಾಗಿ ಆಟ ಆಡುತ್ತಾರೆ. ಕೆಲವೊಮ್ಮೆ ನೀವು ಕೊಡುವ ಆಟಿಕೆಗಳು ತುಂಬಾ ಚಿಕ್ಕದಾಗಿರುತ್ತವೆ ಅಥವಾ ಅವರ ವಯಸ್ಸಿಗೆ ತುಂಬಾ ದೊಡ್ಡದಾಗಿರುತ್ತವೆ. ಇಂತಹ ಆಟಿಕೆಗಳನ್ನು ಅವರು ಇಷ್ಟಪಡುವುದಿಲ್ಲ.
ನಿಮ್ಮ ಮಕ್ಕಳೊಂದಿಗೆ ಸಮಯ ಕಳೆಯುವಾಗ ಅವರೊಂದಿಗೆ ಮಾತನಾಡಿ ಮತ್ತು ಅವರಿಗೆ ಮನೆಯ ಸುತ್ತ ಕೆಲವು ಸಣ್ಣ-ಪುಟ್ಟ ಕೆಲಸಗಳನ್ನು ಮಾಡಲು ನೀಡಿ. ಅವರಿಗೆ ಬರ್ತ್ಡೇ ಪಾರ್ಟಿಗಳು, ಮನೆಯ ಇತರ ಸಮಾರಂಭಗಳಲ್ಲಿ ಸಣ್ಣ ಕೆಲಸಗಳನ್ನು ಮಾಡಲು ನೀಡಿ. ಗಿಡಗಳಿಗೆ ನೀರುಣಿಸುವುದು, ಆಟಿಕೆಗಳನ್ನು ಜೋಡಿಸುವುದು, ಬಚ್ಚಲು ಸ್ವಚ್ಛಗೊಳಿಸುವುದು, ಮನೆಯನ್ನು ಅಲಂಕರಿಸುವುದು ಮುಂತಾದ ಕೆಲಸಗಳಲ್ಲಿ ನಿಮ್ಮ ಮಕ್ಕಳನ್ನು ತೊಡಗಿಸಿಕೊಳ್ಳಿ. ಇದು ಅವರನ್ನು ಯಾವಾಗಲೂ ಕಾರ್ಯನಿರತವಾಗಿರಿಸುತ್ತದೆ, ಕುಟುಂಬದೊಂದಿಗೆ ಸಂಪರ್ಕ ಹೊಂದಿಸುತ್ತದೆ ಮತ್ತು ಫೋನ್ನಿಂದ ದೂರವಿರಿಸುತ್ತದೆ.
ಮೊಬೈಲ್ಗೆ ಅಡಿಕ್ಟ್ ಆಗುವುದು ತುಂಬಾ ಕೆಟ್ಟ ವಿಚಾರ. ಇದು ಅಂತಿಮವಾಗಿ ಮಕ್ಕಳ ದೃಷ್ಟಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಂತಹ ಮಕ್ಕಳು ಸಮೀಪದೃಷ್ಟಿಯಿಂದ ಬಳಲುತ್ತಿದ್ದಾರೆ. ಇದಲ್ಲದೇ, ಅವರು ಆತಂಕ ಮತ್ತು ಖಿನ್ನತೆಯಂತಹ ಸಮಸ್ಯೆಗಳನ್ನು ಹೊಂದಿರಬಹುದು. ಮೊಬೈಲ್ ಫೋನ್ ಚಟವು ದೇಹ ಮತ್ತು ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಅಷ್ಟೇ ಅಲ್ಲದೇ, ಈಗ ಮಕ್ಕಳು ಆನ್ ಲೈನ್ ಸೈಬರ್ ಕ್ರೈಂಗೆ ಬಲಿಯಾಗುತ್ತಿದ್ದಾರೆ. ಹಾಗಾಗಿ ನಿಮ್ಮ ಮಕ್ಕಳಿಗೆ ಫೋನ್ ಕೊಡುವಾಗ ಎಚ್ಚರಿಕೆ ವಹಿಸಬೇಕು. ಅವರು ಮೊಬೈಲ್ ಫೋನ್ ಅನ್ನು ಅತಿಯಾಗಿ ಬಳಸದಂತೆ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ