ಸಾಕಷ್ಟು ಜನ ಬಿರಿಯಾನಿ ಇಷ್ಟ ಪಡುತ್ತಾರೆ. ಬಿರಿಯಾನಿ ತಂದು ಮುಂದೆಯಿಟ್ಟರೆ ಹೊಟ್ಟೆ ತುಂಬುವಷ್ಟು ತಿಂದು ತೆಗುವವರೇ ಹೆಚ್ಚು. ಭಾರತದಲ್ಲಿ ವಿವಿಧ ಬಗೆಯ ಬಿರಿಯಾನಿಯೂ ಲಭ್ಯವಿದ್ದು, ತಮಿಳುನಾಡಿನಲ್ಲಿ ತಲಪಾಕಟ್ಟಿ ಬಿರಿಯಾನಿಯೂ ಸಿಕ್ಕಾಪಟ್ಟೆ ಫೇಮಸ್. ಮನೆಯಲ್ಲೇ ಈ ಕೆಲವೇ ಕೆಲವು ಪದಾರ್ಥಗಳಿದ್ದರೆ ಸುಲಭವಾಗಿ ಈ ಬಿರಿಯಾನಿ ರೆಸಿಪಿ ಮಾಡಿ ರುಚಿ ಸವಿಯಬಹುದು.
ಅಂಗಳದಲ್ಲಿ ನಾನ್ಯಾಕೆ ಮಲಗಿದ್ದೆ ಎಂಬುದರ ಬಗ್ಗೆ ರಿವೀಲ್ ಮಾಡಿದ ರೋಹಿತ್ ಶರ್ಮಾ!
ತಲಪಾಕಟ್ಟಿ ಬಿರಿಯಾನಿ ಮಾಡಲು ಬೇಕಾಗುವ ಸಾಮಗ್ರಿಗಳು
ಹಸಿರು ಮೆಣಸಿನಕಾಯಿ, ಸಣ್ಣ ಎರಡು ಇಂಚಿನ ದಾಲ್ಟಿನ್ನಿ, ಆರರಿಂದ ಏಳು ಏಲಕ್ಕಿ, ನಾಲ್ಕೈದು ಲವಂಗ, ಶುಂಠಿ, ಸೋಂಪು ಕಾಳು, ಬಿರಿಯಾನಿ ಎಲೆ, ಬಾಸುಮತಿ ಅಕ್ಕಿ, ಚಿಕನ್, ತುಪ್ಪ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಟೊಮೊಟೊ, ಈರುಳ್ಳಿ, 1/2 ಟೀಸ್ಪೂನ್ ಕೆಂಪು ಮೆಣಸಿನ ಪುಡಿ, 1/2 ಕಪ್ ಮೊಸರು 1/2 ಕಪ್ ಪುದೀನಾ, 1 ಕಪ್ ಕೊತ್ತಂಬರಿ ಸೊಪ್ಪು, ಎರಡು ಚಮಚ ನಿಂಬೆ ರಸ, ರುಚಿಗೆ ತಕ್ಕಷ್ಟು ಉಪ್ಪು.
ತಲಪಾಕಟ್ಟಿ ಬಿರಿಯಾನಿ ಮಾಡುವ ವಿಧಾನ
ಅಕ್ಕಿಯನ್ನು ಅರ್ಧ ಘಂಟೆಯವರೆಗೆ ನೀರಿನಲ್ಲಿ ನೆನೆಸಿಟ್ಟುಕೊಳ್ಳಿ.
ಮೊದಲಿಗೆ ಚಿಕನ್ ನನ್ನು 15-20 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಿಕೊಳ್ಳಿ.
ಒಂದು ಮಿಕ್ಸಿ ಜಾರಿಗೆ ಕೊತ್ತಂಬರಿ ಬೀಜ, ಜೀರಿಗೆ, ಸೋಂಪು ಕಾಳು, ದಾಲ್ಚಿನ್ನಿ, ಏಲಕ್ಕಿ, ಲವಂಗ, ಗರಂ ಮಸಾಲೆ ಚಕ್ಕೆ, ಸ್ಟಾರ್ ಹೂವನ್ನು ನೀರು ಹಾಕದೇ ರುಬ್ಬಿಕೊಂಡು ಬಿರಿಯಾನಿ ಮಸಾಲಾ ತಯಾರಿಸಿಕೊಳ್ಳಿ.
ಒಂದು ಬಾಣಲೆಗೆ ಎಣ್ಣೆ ಅಥವಾ ತುಪ್ಪವನ್ನು ಹಾಕಿ ಬಿಸಿಯಾಗುತ್ತಿದ್ದಂತೆ ಬಿರಿಯಾನಿ ಎಲೆ ಮತ್ತು ದಾಲ್ಚಿನ್ನಿ ಹಾಕಿ ಫ್ರೈ ಮಾಡಿಕೊಳ್ಳಿ.
ಇದಕ್ಕೆ ಕತ್ತರಿಸಿಟ್ಟ ಈರುಳ್ಳಿ ಹಾಗೂ ಹಸಿರು ಮೆಣಸಿನಕಾಯಿ ತಿಳಿ ಕಂದು ಬಣ್ಣ ಬರುವವರೆಗೆ ಚೆನ್ನಾಗಿ ಹುರಿದು ಕೊಳ್ಳಿ.
ಆ ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿಕೊಳ್ಳಿ.
ಟೊಮ್ಯಾಟೊ ಸೇರಿಸಿ ಬೇಯುತ್ತಿದ್ದಂತೆ, ರುಬ್ಬಿಟ್ಟ ಬಿರಿಯಾನಿ ಮಸಾಲಾ, ಅರಿಶಿನ ಪುಡಿ ಹಾಗೂ ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಒಂದು ನಿಮಿಷಗಳ ಕಾಲ ಹಾಗೆ ಬಿಡಿ.
ನಂತರದಲ್ಲಿ ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಎಣ್ಣೆ ಬಿಡುವವರೆಗೂ ಕೈಯಾಡಿಸುತ್ತ ಇರಿ.
ಈಗಾಗಲೇ ಬೇಯಿಸಿಟ್ಟ ಚಿಕನ್ ತುಂಡುಗಳನ್ನು ಸೇರಿಸಿಕೊಂಡು, ಐದು ಹತ್ತು ನಿಮಿಷಗಳ ಕಾಲ ಹಾಗೆಯೇ ಬಿಡಿ.
ತದನಂತರದಲ್ಲಿ ನೆನೆಸಿಟ್ಟ ಅಕ್ಕಿಯನ್ನು ಬೆರೆಸಿ 2 ನಿಮಿಷಗಳ ಕಾಲ ಕೈಯಾಡಿಸಿ ಅಗತ್ಯವಿದ್ದಷ್ಟು ನೀರು ಸೇರಿಸಿಕೊಳ್ಳಿ.
ನಂತರ ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು ಪುದೀನಾ ಹಾಗೂ ಒಂದೆರಡು ಚಮಚ ನಿಂಬೆರಸವನ್ನು ಹಿಂಡಿ ಎರಡು ಸೀಟಿಗೆ ಪ್ರೆಶರ್ ಕುಕ್ಕರ್ ನಲ್ಲಿ ಬೇಯಲು ಬಿಡಿ.
ತಣ್ಣಗಾದ ಬಳಿಕ ಪ್ರೆಶರ್ ಕುಕ್ಕರ್ ಮುಚ್ಚಳ ತೆಗೆದರೆ ರುಚಿಕರವಾದ ಬಿರಿಯಾನಿ ಸವಿಯಲು ಸಿದ್ಧ.