ವರ್ಕ್ ಫ್ರಮ್ ಬೆಡ್ ಕೇಳಿದ್ದೀರಾ? ಹೌದು ನಿಮ್ಮ ಹಾಸಿಗೆ ಮೇಲಿಂದಲೇ ನೀವು ಕೆಲಸ ಮಾಡಬಹುದು, ನಿದ್ರೆಗೂ ಭಂಗ ಬರುವುದಿಲ್ಲ. ಏನೇನೋ ಯೋಚನೆ ಮಾಡುವ ಮುನ್ನ ಈ ಸ್ಟೋರಿ ಓದಿ.
B.S. Yediyurappa: ಮುಡಾ ಹಗರಣ: ಸಿಎಂ ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ – ಬಿ.ಎಸ್. ಯಡಿಯೂರಪ್ಪ
ವೇಕ್ ಫಿಟ್ ಎಂಬ ಭಾರತದ ಬ್ರ್ಯಾಂಡ್ ನಿಮ್ಮ ಕನಸನ್ನು ನನಸಾಗಿಸಲು ಮುಂದಾಗಿದೆ. ಅವರು ವಿಶೇಷವಾದ ವೃತ್ತಿಪರ ಸ್ಲೀಪ್ ಇಂಟರ್ನ್ ಕಾರ್ಯಕ್ರಮವು ಕೇವಲ ಒಂದು ಇಂಟರ್ನ್ ಶಿಪ್ ಅಲ್ಲ. ವಿಶ್ರಾಂತಿಯನ್ನು ಗೌರವಿಸುವ ಕಂಪನಿ ಇದು. ನೀವು ನಿದ್ದೆ ಮಾಡಿದ್ರೆ ದುಡ್ಡು ಕೊಡೋಕೆ ಇವರು ರೆಡಿ ಇದ್ದಾರೆ.
ಪ್ರೊಫೆಷನಲ್ ಸ್ಲೀಪ್ ಇಂಟರ್ನ್ ಪ್ರೋಗ್ರಾಂ ನಿದ್ರೆಯ ಬಗ್ಗೆ ಉತ್ಸುಕರಾಗಿರುವವರಿಗೆ ಅದ್ಭುತ ಅವಕಾಶವನ್ನು ನೀಡಿದೆ. ಈ ಉದ್ಯೋಗಕ್ಕೆ ಸೇರಲು ಸಾಮಾಜಿಕ ನೆಟ್ ವರ್ಕಿಂಗ್ ಪ್ಲಾಟ್ ಫಾರ್ಮ್ ಲಿಂಕ್ಡ್ ಇನ್ ನಲ್ಲಿ ವಿವರವಾದ ಉದ್ಯೋಗ ವಿವರಣೆಯನ್ನು ಕಂಪನಿ ಹಂಚಿಕೊಂಡಿದೆ.
ವೃತ್ತಿಪರ ಸ್ಲೀಪ್ ಇಂಟರ್ನ್ಶಿಪ್ ಬಗ್ಗೆ ಹೇಳೇದಾದ್ರೆ ಉದ್ಯೋಗದ ಹೆಸರು ವೃತ್ತಿಪರ ಸ್ಲೀಪ್ ಇಂಟರ್ನ್. ಉದ್ಯೋಗ ಸ್ಥಳ: ಹಾಸಿಗೆಯಿಂದ ಕೆಲಸ ಮಾಡಿ. ಉದ್ಯೋಗ ಅವಧಿ 2 ತಿಂಗಳುಗಳು. ಸ್ಟೈಫಂಡ್ 1 ಲಕ್ಷದಿಂದ 10 ಲಕ್ಷ ರೂ. ವರೆಗೆ ನೀಡುತ್ತಾರೆ.
ಇನ್ನು ಉದ್ಯೋಗದ ಜವಾಬ್ದಾರಿಗಳು ಹೀಗಿರುತ್ತದೆ. ಪ್ರತಿ ರಾತ್ರಿ 8-9 ಗಂಟೆಗಳ ಕಾಲ ಶ್ರದ್ಧೆಯಿಂದ ಮತ್ತು ನಿಯಮಿತವಾಗಿ ನಿದ್ರಿಸುವುದು. ಹಗಲಿನಲ್ಲಿ 20 ನಿಮಿಷಗಳ ಪವರ್ ನ್ಯಾಪ್ ಅನ್ನು ಮಾಡುವುದು. ನಿಮ್ಮ ಮನೆಗೇ ಉಚಿತ ಹಾಸಿಗೆಯನ್ನು ಒದಗಿಸುವ ವೇಕ್ ಫಿಟ್ ಕಂಪನಿ ಪ್ರತಿ ರಾತ್ರಿ ನಿರ್ದಿಷ್ಟ ಸಮಯದಲ್ಲಿ ಮಲಗಬೇಕು ಎಂದು ಹೇಳುತ್ತೆ
ವಿಸ್ತೃತ KPI ಸಾಧನೆಗಾಗಿ ಸಾಂದರ್ಭಿಕವಾಗಿ ವಾರಾಂತ್ಯದಲ್ಲಿ ಮಲಗುವ ಸಮಯವನ್ನು ವಿಸ್ತರಿಸಬೇಕಾಗಬಹುದು. , ‘ಸ್ಲೀಪ್ ಚಾಂಪಿಯನ್’ ಆಗಿ ಬಡ್ತಿ ಪಡೆಯುವ ಸಾಧ್ಯತೆಗಳನ್ನು ಇನ್ನಷ್ಟು ಸುಧಾರಿಸಲು ಅನುಭವಿ ‘ಸ್ಲೀಪ್ ಮೆಂಟರ್’ಗಳು ನಡೆಸುವ ಕಾರ್ಯಾಗಾರಗಳಿಗೆ ಹಾಜರಾಗಬೇಕು.
ಅಭ್ಯರ್ಥಿಗಳು ಹೇಗಿರಬೇಕು: ಪ್ರತಿ ರಾತ್ರಿ ಒಂದೇ ಸಮಯದಲ್ಲಿ ಹಾಸಿಗೆ ಮೇಲೆ ಮಲಗಬೇಕು. ನಿದ್ರೆ-ಜೀವನ ಸಮತೋಲನ ಇರಬೇಕು. ಆದರ್ಶ ಮಲಗುವ ಸಮಯದ ಸುತ್ತ ಜೀವನ ಚಟುವಟಿಕೆಗಳನ್ನು ಹೊಂದಿರಬೇಕು
ಫೋನ್ ನೋಡಬಾರದು, ಫೋನ್ ನಲ್ಲಿ ಮಾತನಾಡದೆ ಶಿಸ್ತುಬದ್ಧವಾಗಿ ಮಲಗುವವರು ಬೇಕು. ಒತ್ತಡವನ್ನು ಚೆನ್ನಾಗಿ ನಿಭಾಯಿಸಬೇಕು. ವೇಕ್ ಫಿಟ್ ನ ಅತ್ಯಾಧುನಿಕ ಹಾಸಿಗೆಗಳ ಮೇಲೆ ಮಲಗುವಾಗ ಎಲ್ಲಾ ಮಾನಸಿಕ ಮತ್ತು ದೈಹಿಕ ಒತ್ತಡಗಳನ್ನು ಬದಿಗಿಡುವ ಸಾಮರ್ಥ್ಯ ಇರಬೇಕು.
ಅರ್ಹತೆಗಳು: ವಯಸ್ಸು 22 ವರ್ಷ ಮೇಲ್ಪಟ್ಟವರು. ಯಾವುದೇ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ. ಪ್ರತಿ ಆಯ್ಕೆಯಾದ ಸ್ಲೀಪ್ ಇಂಟರ್ನ್ಗೆ ರೂ 1 ಲಕ್ಷ, ವರ್ಷದ “ಸ್ಲೀಪ್ ಚಾಂಪಿಯನ್” ಆಗಿ ಬಡ್ತಿ ಪಡೆದ ಸ್ಲೀಪ್ ಇಂಟರ್ನ್ಗೆ ರೂ 10 ಲಕ್ಷದವರೆಗೆ ನೀಡಲಾಗುತ್ತದೆ.