ಮನೆಯ ಸದಸ್ಯರಲ್ಲಿ ಸೋಮಾರಿತನ, ಕಿರಿಕಿರಿ ಅಥವಾ ನಕಾರಾತ್ಮಕತೆ ಕಂಡುಬಂದರೆ, ಅದು ಮನೆಯಲ್ಲಿನ ಜೇಡರ ಬಲೆಯಿಂದಾಗಿರಬಹುದು.
Dhananjay-Dhanyatha: ಧನ್ಯತಾಗೆ ಮೀನಾ ಲಗ್ನದಲ್ಲಿ ತಾಳಿ ಕಟ್ಟಿದ ಡಾಲಿ ಧನಂಜಯ್!
ಜೇಡರ ಬಲೆ ಇರುವ ಮನೆಯ ಸದಸ್ಯರ ಮನಸ್ಸು ಸರಿಯಾಗಿ ಕೆಲಸ ಮಾಡುವುದಿಲ್ಲ. ಕೌಟುಂಬಿಕ ಜೀವನದಲ್ಲಿ ಒತ್ತಡಕ್ಕೆ ಕೂಡ ಕಾರಣವಾಗಿದೆ. ಇದು ಕುಟುಂಬದ ಸದಸ್ಯರನ್ನು ಮಾನಸಿಕ ಅಸ್ವಸ್ಥರನ್ನಾಗಿಯೂ ಮಾಡಬಹುದು.
ಕೆಲವರ ಮನೆಯಲ್ಲಿ ಮನೆ ತುಂಬಾ ಜೇಡರ ಬಲೆಯೇ ತುಂಬಿ ಹೋಗುತ್ತದೆ. ಎಷ್ಟೇ ಸ್ವಚ್ಛ ಮಾಡಿದ್ರು ಜೇಡ ಬಲೆ ಮತ್ತೆ ಮತ್ತೆ ಕಟ್ಟುತ್ತಿದ್ದರೆ ಈ ಸಮಸ್ಯೆಗೆ ಈ ರೀತಿ ಮನೆಯಲ್ಲೇ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು.
ಪುದೀನಾ ಎಣ್ಣೆ : ಜೇಡಗಳನ್ನು ಹಿಮ್ಮೆಟ್ಟಿಸಲು ಪುದೀನಾ ಎಣ್ಣೆ ಉತ್ತಮ ಆಯ್ಕೆ ಎನ್ನಬಹುದು. ನಿಮ್ಮ ಮನೆಯಲ್ಲಿ ಜೇಡಗಳಿದ್ದರೆ ಒಂದು ಸ್ಪ್ರೇ ಬಾಟಲಿಯಲ್ಲಿ 10-15 ಹನಿ ಪುದೀನಾ ಎಣ್ಣೆಯನ್ನು ನೀರಿನೊಂದಿಗೆ ಬೆರೆಸಿ. ಈ ಮಿಶ್ರಣವನ್ನು ಕಿಟಕಿಗಳಿರುವಲ್ಲಿ ಸಿಂಪಡಿಸಿದ್ರೆ, ಇದರ ಬಲವಾದ ವಾಸನೆಗೆ ಜೇಡಗಳು ಹತ್ತಿರ ಕೂಡ ಸುಳಿಯುವುದಿಲ್ಲ.
ನಿಂಬೆ ಹಾಗೂ ಪುದೀನಾ :ಸ್ವಲ್ಪ ಪುದೀನಾ ಸೊಪ್ಪನ್ನು ಮಿಕ್ಸಿಗೆ ಹಾಕಿ ನೀರು ಸೇರಿಸಿ ರುಬ್ಬಿ ರಸ ತೆಗೆಯಿರಿ. ಇದಕ್ಕೆ ನಿಂಬೆ ಹಣ್ಣಿನ ರಸವನ್ನು ಹಿಂಡಿಕೊಳ್ಳಿ. ಚೆನ್ನಾಗಿ ಕಲಸಿಕೊಂಡು ಸ್ಪ್ರೇ ಬಾಟಲಿಗೆ ಹಾಕಿಕೊಳ್ಳಿ. ಈ ನೀರನ್ನು ಮನೆಯ ಮೂಲೆ ಮೂಲೆಗೆ ಹಾಗೂ ಜೇಡ ಬಲೆ ಕಟ್ಟುವ ಜಾಗಕ್ಕೆ ಸ್ಪ್ರೇ ಮಾಡಿದ್ರೆ ಆ ಜಾಗದಲ್ಲಿ ಜೇಡರ ಹುಳು ಬಲೆ ಕಟ್ಟುವುದೇ ಇಲ್ಲ.
ಬಿಳಿ ವಿನೆಗರ್ ಬಳಸಿ : ಮೊದಲಿಗೆ ಪೊರಕೆಯ ಸಹಾಯದಿಂದ ಜೇಡರ ಬಲೆಯಲ್ಲಿ ಸ್ವಚ್ಛಗೊಳಿಸಿ. ಒಂದು ಪಾತ್ರೆಗೆ ಬಿಳಿ ವಿನೆಗರ್ ಹಾಕಿ ಸ್ವಲ್ಪ ನೀರು ಬೆರೆಸಿಕೊಳ್ಳಿ. ಸ್ವಲ್ಪ ಸಮಯ ಬಿಟ್ಟು ಈ ಮಿಶ್ರಣವನ್ನು ಒಂದು ಬಟ್ಟೆಯಲ್ಲಿ ಅದ್ದಿ ಒಂದು ಉದ್ದವಾದ ಕೋಲಿಗೆ ಕಟ್ಟಿ ಜೇಡ ಬಲೆ ಕಟ್ಟುವ ಜಾಗಕ್ಕೆ ಒರೆಸಿ ಕೊಳ್ಳಿ. ಹೀಗೆ ಮಾಡಿದ್ರೆ ಮತ್ತೆ ಆ ಜಾಗದಲ್ಲಿ ಜೇಡರ ಹುಳು ಬಲೆ ಕಟ್ಟುವುದಿಲ್ಲ
ಬೆಳ್ಳುಳ್ಳಿ ಹಾಗೂ ಚೆಕ್ಕೆ : ಮನೆಯಲ್ಲಿ ಜೇಡರ ಹುಳು ಬಲೆ ಕಟ್ಟುತ್ತಿದ್ದರೆ ಬೆಳ್ಳುಳ್ಳಿ ಹಾಗೂ ಚಕ್ಕೆಯ ಮಿಶ್ರಣ ಬಳಸಿ ಬಲೆ ಕಟ್ಟದಂತೆ ತಡೆಯಬಹುದು. ಹೀಗಾಗಿ ಒಂದು ಬಟ್ಟಲಿನಲ್ಲಿ ಬೆಳ್ಳುಳ್ಳಿ ಹಾಗೂ ಚಕ್ಕೆಯ ತುಂಡುಗಳನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಇದಕ್ಕೆ ನೀರು ಸೇರಿಸಿ ಚೆನ್ನಾಗಿ ಕಲಸಿಕೊಂಡು ಇದನ್ನು ಮನೆಯ ಮೂಲೆ ಮೂಲೆಗೆ ಹಾಗೂ ಜೇಡ ಬಲೆ ಹೆಣೆಯದಂತೆ ತಡೆಯಲು ಸಹಕಾರಿಯಾಗಿದೆ.
ಲ್ಯಾವೆಂಡರ್ ಎಣ್ಣೆ. ಮನೆಯಲ್ಲಿ ಜೇಡರ ಹುಳು ಕಾಟದಿಂದ ಬೇಸೆತ್ತು ಹೋಗಿದ್ರೆ ಲ್ಯಾವೆಂಡರ್ ಎಣ್ಣೆಯನ್ನು ಬಳಸಬಹುದು. ಐದಾರು ಚಮಚ ಲ್ಯಾವೆಂಡರ್ ಎಣ್ಣೆಗೆ ನೀರು ಬೆರೆಸಿಕೊಳ್ಳಿ. ಇದನ್ನು ಜೇಡಗಳು ಹೆಚ್ಚಾಗಿ ಇರುವ ಪ್ರದೇಶಗಳಲ್ಲಿ ಸಿಂಪಡಿಸಿದರೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಂತಾಗುತ್ತದೆ.