ಚಿತ್ರಾನ್ನವನ್ನು ಹಲವು ರುಚಿಯಲ್ಲಿ ತಯಾರಿಸುತ್ತಾರೆ, ಕೆಲ ಚಿತ್ರಾನ್ನ ತಿಂದ್ರೆ ಚಿತ್ರಾನ್ನ ಮೇಲಿದ್ದ ಬೇಸರ ದೂರಾಗುವುದು, ಹೌದು ಅಷ್ಟೊಂದು ರುಚಿಯಾಗಿರುತ್ತದೆ.
ನಾವಿಲ್ಲಿ ಸ್ವಲ್ಪ ಭಿನ್ನವಾಗಿ ಮಾಡುವ ಅಂದರೆ ಹುಣಸೆಹಣ್ಣು ಹಾಕಿ ಮಾಡುವ ಚಿತ್ರಾನ್ನ ಇದಾಗಿದೆ. ಇದನ್ನು ಉಡುಪಿ ಕಡೆ ಹೆಚ್ಚಾಗಿ ಮಾಡಲಾಗುವುದು, ಬನ್ನಿ ಈ ಚಿತ್ರಾನ್ನ ರೆಸಿಪಿ ನೋಡೋಣ:
ಬೇಕಾಗುವ ಸಾಮಗ್ರಿ
1/2 ಕಪ್ ತೆಂಗಿನತುರಿ
1/2 ಚಮಚ ಸಾಸಿವೆ
2 ಒಣ ಮೆಣಸು
1/2 ಚಮಚ ಅರಿಶಿಣ ಪುಡಿ
ಇತರ ಸಾಮಗ್ರಿ
1 ಚಮಚ ತೆಂಗಿನೆಣ್ಣೆ
1 ಚಮಚ ಸಾಸಿವೆ
1/2 ಚಮಚ ಉದ್ದಿನ ಬೇಳೆ
1 ಒಣ ಮೆಣಸು
ಸ್ವಲ್ಪ ಕರಿಬೇವು
2 ಚಮಚ ಹುಣಸೆಹಣ್ಣು
1/2 ಚಮಚ ಬೆಲ್ಲ
1/2 ಚಮಚ ಉಪ್ಪು
ಅನ್ನ (2 ಕಪ್ ಅಕ್ಕಿ ಬೇಯಿಸಿದ್ದು)
ಮಾಡುವ ವಿಧಾನ:
1. ಮೊದಲಿಗೆ ತೆಂಗಿನತುರಿ, 1/2 ಚಮಚ ಸಾಸಿವೆ, 2 ಒಣ ಮೆಣಸು, ಒಣ ಮೆನಸು ಹಾಗೂ ಸ್ವಲ್ಪ ಹುಣಸೆ ಹಣ್ಣು ಹಾಕಿ ಬ್ಲೆಂಡ್ ಮಾಡಿ. ಹೆಚ್ಚು ನೀರು ಸೇರಿಸಿದರೆ ತರಿತರಿ ರುಬ್ಬಿಕೊಳ್ಳಿ.
2. ಈಗ ಪ್ಯಾನ್ ಬಿಸಿ ಮಾಡಿ 1 ಚಮಚ ಎಣ್ಣೆ ಹಾಕಿ
3. ಎಣ್ಣೆ ಬಿಸಿಯಾದಾಗ 1 ಚಮಚ ಸಾಸಿವೆ, 1/2 ಚಮಚ ಉದ್ದಿನ ಬೇಳೆ, 1 ಒಣ ಮೆಣಸು, ಸ್ವಲ್ಪ ಕರಿಬೇವು, 2 ಚಮಚ ನೆಲೆಗಡಲೆ ಹಾಕಿ.
4. ಕಡಿಮೆ ಉರಿಯಲ್ಲಿ 2 ನಿಮಿಷ ಫ್ರೈ ಮಾಡಿ, ಹೆಚ್ಚು ಉರಿ ಮಾಡಿದರೆ ಸೀದು ಹೋಗುವುದು.
5. ನಂತರ 2 ಚಮಚ ಹುಣಸೆ ರಸ, 1/2 ಚಮಚ ಬೆಲ್ಲ, ರುಚಿಗೆ ತಕ್ಕ ಕಲ್ಲುಪ್ಪು (1/2 ಚಮಚ) ಹಾಕಿ ಮಿಕ್ಸ್ ಮಾಡಿ.
6. ನಂತರ ರುಬ್ಬಿದ ತೆಂಗಿನಕಾಯಿ ಮಿಶ್ರಣ ಹಾಕಿ ಮತ್ತೆ 2 ನಿಮಿಷ ಪ್ರೈ ಮಾಡಿ, ನಂತರ ಅನ್ನ ಹಾಕಿ ಮಿಕ್ಸ್ ಮಾಡಿದರೆ ಹುಣಸೆಹಣ್ಣನ ಚಿತ್ರಾನ್ನ ರೆಡಿ.