ನವದೆಹಲಿ:- ಓಯೋ ಹೋಟೆಲ್ ಬುಕ್ಕಿಂಗ್ ಕಂಪನಿ ಚೆಕ್ ಇನ್ಗೆ ಸಂಬಂಧಿಸಿದಂತೆ ಕೆಲವು ಹೊಸ ಮಾರ್ಪಾಡುಗಳನ್ನು ಮಾಡಿದ್ದು. ಇನ್ನು ಮುಂದೆ ಅವಿವಾಹಿತ ಜೋಡಿಗಳಿಗೆ ರೂಂ ನೀಡುವುದಿಲ್ಲ ಎಂದು ಘೋಷಣೆ ಮಾಡಿದೆ.
ಪಂಪ್ಸೆಟ್ ಇರುವ ರೈತರಿಗೆ ಸಿಕ್ತು ಸರ್ಕಾರದ ಗುಡ್ ನ್ಯೂಸ್: ಈ ವಿಚಾರ ನೀವು ತಿಳಿಯಲೇಬೇಕು!?
ದೇಶದ ಪ್ರಮುಖ ಲಾಡ್ಜ್ ಬುಕ್ಕಿಂಗ್ ಕಂಪನಿಗಳಲ್ಲಿ ಓಯೋ ಕೂಡ ಒಂದಾಗಿದೆ. ದೇಶದ ಎಲ್ಲಾ ನಗರಗಳಲ್ಲಿಯೂ ತನ್ನ ಹೋಟಲ್ ಬುಕ್ಕಿಂಗ್ ಜಾಲವನ್ನು ವಿಸ್ತರಣೆ ಮಾಡಿಕೊಂಡಿದೆ. ಕಡಿಮೆ ದರ, ಗುಣಮಟ್ಟದ ಸೇವೆ, ದೊಡ್ಡ ಜಾಲದಿಂದ ಈ ಓಯೋ ಹೋಟೆಲ್ಗಳು ಹೆಸರುವಾಸಿಯಾಗಿವೆ. ಅದರಲ್ಲೂ ಅವಿವಾಹಿತರಿಗೆ ಹೋಟೆಲ್ ಚೆಕ್ಇನ್ಗೆ ಅವಕಾಶ ನೀಡುವ ಕಾರಣಕ್ಕೆ ಈ ಹೋಟೆಲ್ ಗ್ರಾಹಕರ ನೆಚ್ಚಿನ ಆಯ್ಕೆಯಾಗಿತ್ತು. ಇದೀಗ ಅವಿವಾಹಿತರಿಗೆ ನಿರ್ಬಂಧ ವಿಧಿಸಿ ಹೊಸ ನಿಯಮ ಜಾರಿಗೊಳಿಸಿದೆ.
ಓಯೋ ಹೋಟೆಲ್ ರೂಮ್ ಬುಕ್ ಮಾಡುವ ಮುನ್ನ ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ಓಯೋ ಹೊಸ ನಿಯಮದ ಪ್ರಕಾರ, ಗ್ರಾಹಕರು ಚೆಕ್-ಇನ್ ಸಮಯದಲ್ಲಿ ಅಧಿಕೃತ ಗುರುತಿನ ಚೀಟಿ ಮತ್ತು ನಿಮ್ಮೊಂದಿಗೆ ಬರೋವರರ ಸಂಬಂಧ ಪ್ರಮಾಣಪತ್ರವನ್ನು ನೀಡಬೇಕಾಗುತ್ತದೆ. ನೀವು ಬುಕ್ಕಿಂಗ್ ಆನ್ಲೈನ್ ಅಥವಾ ಆಫ್ಲೈನ್ ಮಾಡಿದ್ರೂ ಎಲ್ಲಾ ದಾಖಲೆಗಳನ್ನು ನೀಡಬೇಕಾಗುತ್ತದೆ. ಸ್ಥಳೀಯ ಸಾಮಾಜಿಕ ನಂಬಿಕೆಗಳ ಆಧಾರದ ಮೇಲೆ ದಂಪತಿಗಳ ಬುಕಿಂಗ್ ಅನ್ನು ತಿರಸ್ಕರಿಸಬಹುದು ಎಂಬ ಸ್ವಾತಂತ್ರ್ಯವನ್ನು OYO ತನ್ನ ಪಾಲುದಾರ ಹೋಟೆಲ್ಗಳಿಗೆ ನೀಡಿದೆ.
ಖಾಸಗಿ ಸಮಯ ಕಳೆಯಲು ಓಯೋ ರೂಮ್ ಬುಕ್ ಮಾಡುತ್ತಿದ್ದ ಪ್ರೇಮಿಗಳಿಗೆ ಇದು ಬ್ಯಾಡ್ ನ್ಯೂಸ್ ಆಗಿದೆ. ಓಯೋ ಮೊದಲು ಈ ನಿಯಮವನ್ನು ಮೀರತ್ ನಗರದಲ್ಲಿ ಜಾರಿಗೆ ತಂದಿದೆ. ಒಂದು ವೇಳೆ ಹೊಸ ನಿಯಮ ಯಶಸ್ವಿಯಾದ್ರೆ ಹಂತ ಹಂತವಾಗಿ ದೇಶದ ಎಲ್ಲಾ ಭಾಗದಲ್ಲಿಯೂ ಜಾರಿಗೆ ತರಲು ಓಯೋ ಯೋಚಿಸಿದೆ. ಧಾರ್ಮಿಕ ಕ್ಷೇತ್ರಗಳಲ್ಲಿ ಓಯೋ ರೂಮ್ ಬುಕ್ ಮಾಡುತ್ತಿದ್ದ, ಭಕ್ತಾದಿಗಳು ಹೊಸ ನಿಯಮವನ್ನು ಸ್ವಾಗತಿಸಿದ್ದಾರೆ.