ಹಾವುಗಳಲ್ಲಿನ ವಿಷವು ತಾಂತ್ರಿಕವಾಗಿ ಸಾಕಷ್ಟು ಮಾರಕವಲ್ಲ ಎಂದು ಹೇಳಲಾಗಿದೆ. ಎಲ್ಲಾ ಹಾವುಗಳು ಒಂದೇ ರೀತಿಯಾದ ವಿಷಕಾರಿ ಅಂಶ ಹೊಂದಿರುವುದಿಲ್ಲ. ಕೆಲವು ಹಾವುಗಳು ಮಾತ್ರ ವಿಷಕಾರಿ. ಹಾಗಿದ್ರೆ ಹಾವುಗಳು ಕಂಡಾಗ ಏನು ಮಾಡಬೇಕು ಗೊತ್ತಾ.
ನಿತ್ಯ ಈ ಎಲೆ ಸೇವಿಸಿದ್ರೆ ತಕ್ಷಣ ನಾರ್ಮಲ್ ಆಗುತ್ತೆ ಬ್ಲಡ್ ಶುಗರ್ !ದಿನಕ್ಕೊಮ್ಮೆ ಸೇವಿಸ್ಬೇಕು ಅಷ್ಟೇ!
1.ಸಸ್ಯಗಳನ್ನು ಬೆಳೆಸಿ: ಬಹುತೇಕು ಹಾವು ಕಂಡ ಕೂಡಲೇ ಅದನ್ನು ಕೊಲ್ಲಲು ಮುಂದಾಗ್ತಾರೆ. ಹೀಗೆ ಮಾಡುವುದು ಹಿಂದೂ ಶಾಸ್ತ್ರದ ಪ್ರಕಾರ ಮಹಾಪಾಪ ಎಂದು ಪರಿಗಣಿಸಲಾಗುತ್ತದೆ. ಇದರಿಂದ ನಾಗದೋಷಕ್ಕೆ ತುತ್ತಾಗುತ್ತಾರೆ ಎಂಬ ನಂಬಿಕೆಯಿದೆ. ನಿಮ್ಮ ಮನೆಯ ಸುತ್ತಲೂ ಸಾಕಷ್ಟು ಮರ ಮತ್ತು ಗಿಡಗಳಿದ್ದರೆ, ಅಂತಹ ಸ್ಥಳದಲ್ಲಿ ಹಾವುಗಳು ವಾಸ್ತವ್ಯ ಹೂಡುತ್ತವೆ. ಆದ್ರೆ ಹಾವುಗಳಿಗೆ ಕೆಲವು ಸಸ್ಯಗಳ ವಾಸನೆ ಇಷ್ಟಯಾಗಲ್ಲ. ಹಾಗಾಗಿ ನೀವು ಮನೆಯ ಮುಂಭಾಗ ಅಥವಾ ಮೇಲ್ಛಾವಣಿಯಲ್ಲಿ ಅಂತಹ ಸಸ್ಯಗಳನ್ನು ಬೆಳೆಸಬೇಕು.
2.ಫಿನಾಯಿಲ್ ಸಿಂಪಡಿಸಿ: ನಿಮ್ಮ ಮನೆಯೊಳಗೆ ಹಾವು ಬಂದ್ರೆ ಕೂಡಲೇ ಅದು ಇರೋ ಸ್ಥಳದಲ್ಲಿ ಫಿನಾಯಿಲ್ ಸಿಂಪಡಿಸಿ. ಬಳಿಕ ಅದು ಹೊರಗೆ ಹೋಗಲು ಸ್ಥಳಾವಕಾಶ ಮಾಡಿಕೊಡಿ. ಮನೆಯಲ್ಲಿ ಸೀಮೆಎಣ್ಣೆ ಇದ್ದರೂ ಸಿಂಪಡಿಸಬಹುದು. ಫಿನಾಯಿಲ್ ಅಥವಾ ಸೀಮೆಎಣ್ಣೆಯ ವಾಸಿನಿಂದ ಹಾವು ಹೆಚ್ಚು ಆಮ್ಲಜನಕ ಇರೋ ಪ್ರದೇಶದತ್ತ ಹೋಗಲು ಮುಂದಾಗುತ್ತದೆ
ಲವಂಗ ಮತ್ತು ದಾಲ್ಚಿನ್ನಿ ಎಣ್ಣೆ: ಲವಂಗ ಮತ್ತು ದಾಲ್ಚಿನ್ನಿ ಎಣ್ಣೆ ಹಾವುಗಳಿಗೆ ಆಗಿ ಬರುವುದಿಲ್ಲ ಹಾಗಾಗಿ ಈ ಎರಡೂ ತೈಲವನ್ನು ಸಮಪ್ರಮಾಣದಲ್ಲಿ ಮಿಕ್ಸ್ ಮಾಡಬೇಕು. ನಿಧಾನವಾಗಿ ಹಾವಿನ ಸಮೀಪ ಅಥವಾ ಅದರ ಮೇಲೆ ಸಿಂಪಡಿಸಬೇಕು. ಈ ತೈಲದ ವಾಸನೆಯಿಂದ ಹಾವು ಹೊರಗೆ ಹೋಗುತ್ತದೆ.
5.ಗರುಡ ಮರ: ವಾಸ್ತವವಾಗಿ ಹಾವು ಹಾಗೂ ಗರುಡ ಒಂದಕ್ಕೊಂದು ವಿರುದ್ಧ ಎಂದು ಹೇಳಲಾಗುತ್ತದೆ. ಹಾಗಾಗಿ ಹಾವುಗಳು ಮನೆಯೊಳಗೆ ಬರದಂತೆ ತಡೆಯಲು ಗರುಡ ಮರವನ್ನು ಮನೆಯ ಹೊರಗೆ ನೆಡಬಹುದು ಎಂದು ಹೇಳುತ್ತಾರೆ. ಗರುಡ ಹಣ್ಣನ್ನು ಮನೆಯೊಳಗೆ ಇಡುವುದರಿಂದ ವಿಷ ಜಂತುಗಳನ್ನು ಸುಲಭವಾಗಿ ಓಡಿಸಬಹುದು. ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ವಾಸಿಸುವ ಜನರಿಗೆ ಈ ಮರದ ಪರಿಚಯ ಇರುತ್ತದೆ.
ಭೂಮಿ ಮೇಲೆ ಕಂಡುಬರುವ ಸುಮಾರು ಶೇ. 40 ರಷ್ಟು ಪ್ರತಿಶತ ಹಾವುಗಳು ವಿಷ ರಹಿತವಾಗಿವೆ. ಭಾರತದಲ್ಲಿರುವ 300 ಜಾತಿಯ ಹಾವುಗಳಲ್ಲಿ ಕೇವಲ ನಾಲ್ಕು ಜಾತಿಗಳು ಮಾತ್ರ ವಿಷಕಾರಿ. ಇತರ ಹಾವುಗಳು ವಿಷಕಾರಿಯಲ್ಲ ಎನ್ನಲಾಗಿದೆ. ಹಾಗಾಗಿ ಹಾವುಗಳು ಬಂದಾಗ ಸುಲಭ ಮಾರ್ಗಗಳ ಮೂಲಕ ಅವುಗಳನ್ನು ಹೊರಗೆ ಕಳಿಸುವುದು ಉತ್ತಮ