ಬೆಂಗಳೂರು:- ಎಚ್ಎಸ್ಆರ್ಪಿ ಅಂದ್ರೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಆಧುನಿಕ ಜಗತ್ತಲ್ಲಿ ಹೊಸ ಕ್ರಾಂತಿ ಮಾಡುತ್ತಿದೆ. ಇದು ಅಲ್ಯುಮಿನಿಯಂ ಲೋಹದ ಮೂಲಕ ತಯಾರಿಸಿದ ಪ್ಲೇಟ್ ಆಗಿದೆ. ಹೊಸ ವಾಹನಗಳಲ್ಲಿ ಈ ರಿತಿ ನಂಬರ್ ಪ್ಲೇಟ್ ಕಡ್ಡಾಯವಾಗಿ ಅಳವಡಿಕೆ ಆಗುತ್ತಾ ಬಂದಿದ್ದು, ಹೊಸ ನಂಬರ್ ಪ್ಲೇಟ್ಗಳಲ್ಲಿ ಇಂಗ್ಲಿಷ್ ಅಕ್ಷರ ಸೇರಿದಂತೆ ನಂಬರ್ಸ್ ಉಬ್ಬಿಕೊಂಡಿರುವ ರೀತಿ ಪ್ರಿಂಟ್ ಆಗಿರುತ್ತವೆ. ಈ ಪ್ಲೇಟ್ ಅಳವಡಿಸುವಾಗ 2 ಲಾಕ್ ಪಿನ್ ಹಾಕಿರ್ತಾರೆ ಪೇಪರ್ಗಳ ಸ್ಟೆಪ್ಲರ್ ಪಿನ್ ಮಾಡುವಾಗ ಪಂಚ್ ಮಾಡುವ ರೀತಿಯಲ್ಲಿ ಹೊಸ ನಂಬರ್ ಪ್ಲೇಟ್ ವಾಹನಕ್ಕೆ ಅಂಟಿಸಿರ್ತಾರೆ ಎಂಬುದು ವಿಶೇಷ. ಆದ್ರೆ ಈ ಆತ್ಯಾಧುನಿಕ ನಂಬರ್ ಪ್ಲೇಟ್ ಅಳವಡಿಕೆಗೆ ವಾಹನ ಮಾಲೀಕರು ನಿರಾಸಕ್ತಿ ತೋರಿಸುತ್ತಿದ್ದಾರೆ, ಹೀಗಾಗಿ ಸರ್ಕಾರ ಖಡಕ್ ಕ್ರಮ ಕೈಗೊಳ್ಳಲು ಮುಂದಾಗಿದೆ.
Breaking: ಗ್ರಾಹಕರ ಸೋಗಿನಲ್ಲಿ ಬಂದು 15 ಕೆಜಿ ತುಪ್ಪ ಕದ್ದ ಖದೀಮರು… !
ರಾಜ್ಯದಲ್ಲಿ 2 ಕೋಟಿ ವಾಹನಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು ಎನ್ನಲಾಗಿತ್ತು. ಹೀಗಾಗಿಯೇ 3 ಬಾರಿ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ದಿನಾಂಕ ಮುಂದೂಡಿಕೆ ಮಾಡಲಾಗಿತ್ತು. ಇದೀಗ ಕೊನೆಯ ಬಾರಿ ಅಂತಾ, ಮೇ 31 ರ ಡೆಡ್ಲೈನ್ ಕೊಟ್ಟು ಕರ್ನಾಟಕ ಸರ್ಕಾರ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಆದೇಶ ನೀಡಿತ್ತು. ಹೀಗಿದ್ದರೂ 2 ಕೋಟಿ ವಾಹನಗಳ ಪೈಕಿ, ಕೇವಲ 35 ಲಕ್ಷ ವಾಹನಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಲಾಗಿದೆ. ಹೀಗಾಗಿ ವಾಹನ ಸವಾರರಿಗೆ ದಂಡದ ಆಘಾತ ನೀಡಲು ಕರ್ನಾಟಕ ಸರ್ಕಾರ ಮುಂದಾಗಿದೆ.
ಅಕಸ್ಮಾತ್ ಎಚ್ಎಸ್ಆರ್ಪಿ ಪ್ಲೇಟ್ ಅಳವಡಿಕೆ ಮಾಡದಿದ್ದರೆ ದಂಡ ಗ್ಯಾರಂಟಿ. ಮೇ 31ಕ್ಕೆ ಈ ಗಡುವು ಮುಗಿದ ನಂತರ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಇಲ್ಲದಿರುವ ವಾಹನದ ಮಾಲಿಕರಿಗೆ ದಂಡ ವಿಧಿಸುವುದಾಗಿ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಎಚ್ಎಸ್ಆರ್ಪಿ ನಿಯಮ ಮೊದಲ ಬಾರಿ ಉಲ್ಲಂಘನೆಗೆ 1 ಸಾವಿರ ರೂಪಾಯಿ ದಂಡ ವಿಧಿಸುತ್ತಾರೆ. ನಂತರದ ಉಲ್ಲಂಘನೆಗೆ ಪ್ರತಿ ಬಾರಿ 1 ಸಾವಿರ ರೂಪಾಯಿ ದಂಡ ಗ್ಯಾರಂಟಿ ಆಗಿದೆ.