2025ರ ಹೊಸವರ್ಷ ಶುರುವಾಗಿದೆ. ಕ್ಯಾಲೆಂಡರ್ ಗಳು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ. ನೀವು ಮನೆಗೆ ಹೊಸ ಕ್ಯಾಲೆಂಡರ್ ಖರೀದಿಸಲು ಯೋಚಿಸುತ್ತಿದ್ದರೆ, ಅದಕ್ಕೂ ಮೊದಲು ಅದಕ್ಕೆ ಸಂಬಂಧಿಸಿದ ವಾಸ್ತು ನಿಯಮವನ್ನು ತಿಳಿದುಕೊಳ್ಳಿ. ವಾಸ್ತು ಶಾಸ್ತ್ರದ ಪ್ರಕಾರ, ಕ್ಯಾಲೆಂಡರ್ ಅನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಸಮೃದ್ಧಿಗೆ ಕಾರಣವಾಗುತ್ತದೆ. ಹಾಗೆ ತಪ್ಪು ಸ್ಥಳದಲ್ಲಿ ಇರಿಸಿದರೆ ಒಬ್ಬ ವ್ಯಕ್ತಿಯನ್ನು ಜೀವನದಲ್ಲಿ ಎಡವಿ ಬೀಳುವಂತೆ ಮಾಡುತ್ತದೆ. ಈ ಕಾರಣಕ್ಕಾಗಿ, ಕ್ಯಾಲೆಂಡರ್ ನ ವಾಸ್ತು ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ.
ಟೆಕ್ಕಿ ಅತುಲ್ ಆತ್ಮಹತ್ಯೆ ಕೇಸ್: ಪತ್ನಿ ಸೇರಿ ಮೂವರಿಗೆ ಷರತ್ತುಬದ್ಧ ಜಾಮೀನು!
ವಾಸ್ತುಶಾಸ್ತ್ರದ ಪ್ರಕಾರ ಹಳೆಯ ಕ್ಯಾಲೆಂಡರ್ಗಳನ್ನು ಮನೆಯಲ್ಲಿ ಇಡುವುದು ಒಳ್ಳೆಯದಲ್ಲ. ಇದು ಪ್ರಗತಿಯ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಹಳೆ ಕ್ಯಾಲೆಂಡರ್ ತೆಗೆದು ಹೊಸ ವರ್ಷದಲ್ಲಿ ಹೊಸ ಕ್ಯಾಲೆಂಡರ್ ಅಳವಡಿಸಬೇಕು. ಇದರಿಂದ ಹೊಸ ವರ್ಷದಲ್ಲಿ ಹಳೆ ವರ್ಷಕ್ಕಿಂತ ಹೆಚ್ಚು ಶುಭ ಅವಕಾಶಗಳು ಲಭಿಸುತ್ತವೆ.
ಹೊಸ ವರ್ಷ ಎಂದರೆ ಹೊಸ ಕ್ಯಾಲೆಂಡರ್. ಆದಾಗ್ಯೂ, ತಪ್ಪಾದ ಕ್ಯಾಲೆಂಡರ್ ಋಣಾತ್ಮಕ ಅಂಶಗಳನ್ನು ಮನೆಗೆ ತರುತ್ತದೆ ಮತ್ತು ಪ್ರಗತಿಯನ್ನು ತಡೆಯುತ್ತದೆ. ಇದರೊಂದಿಗೆ ತಪ್ಪು ದಿಕ್ಕಿನಲ್ಲಿ ಅಥವಾ ಸ್ಥಳದಲ್ಲಿ ಇರಿಸಲಾದ ಕ್ಯಾಲೆಂಡರ್ ಜೀವನದಲ್ಲಿ ಕೆಟ್ಟ ಸಮಯವನ್ನು ತರಬಹುದು ಎಂದು ಹೇಳಬಹುದು. ಕ್ಯಾಲೆಂಡರ್ ಇಡುವಾಗ ಅನುಸರಿಸಬೇಕಾದ ವಾಸ್ತು ನಿಯಮಗಳು ಯಾವುವು ಎಂದು ತಿಳಿಯೋಣ.
ವಾಸ್ತು ಪ್ರಕಾರ, ನಿಮ್ಮ ಮನೆಯ ಮುಖ್ಯ ಬಾಗಿಲಿಗೆ ಕ್ಯಾಲೆಂಡರ್ ಅನ್ನು ಹಾಕಬೇಡಿ. ಹಾಗೆ ಮಾಡುವುದರಿಂದ ನಿಮ್ಮ ಪ್ರಗತಿಗೆ ಅಡ್ಡಿಯಾಗುತ್ತದೆ ಮತ್ತು ನಿಮ್ಮ ಕೆಲಸಕ್ಕೂ ಸಹ ಅಡ್ಡಿಯಾಗುತ್ತದೆ. ಕ್ಯಾಲೆಂಡರ್ಗಳನ್ನು ಮುಖ್ಯ ಬಾಗಿಲಿನ ಮೇಲೆ ಇಡಬಾರದು.
ಹೊಸ ವರ್ಷದ ಕ್ಯಾಲೆಂಡರ್ ಅನ್ನು ಬಾಗಿಲಿನ ಹಿಂದೆ ಇಡುವುದರಿಂದ ಬಹಳಷ್ಟು ಹಾನಿಯಾಗುತ್ತದೆ. ವಾಸ್ತವವಾಗಿ, ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಕ್ಯಾಲೆಂಡರ್ ಅನ್ನು ಯಾವಾಗಲೂ ನಿಮ್ಮ ಮುಂದೆ ಇರಿಸಿ ಮತ್ತು ಅದರ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡ ಬೇಕು.
ಅನೇಕ ಜನರು ಹೊಸ ವರ್ಷದ ಕ್ಯಾಲೆಂಡರ್ ಅನ್ನು ಇಟ್ಟುಕೊಳ್ಳುತ್ತಾರೆ ಆದರೆ ಹಳೆಯದನ್ನು ತೆಗೆದುಹಾಕಲು ಮರೆಯುತ್ತಾರೆ. ಆ ತಪ್ಪನ್ನು ಮಾಡಬೇಡಿ. ಹಳೆಯ ಕ್ಯಾಲೆಂಡರ್ ಅನ್ನು ಮನೆಯಲ್ಲಿ ಇಡಬೇಡಿ, ಅದು ನಿಮ್ಮನ್ನು ಜೀವನದಲ್ಲಿ ಮುನ್ನಡೆ ಸಾಧಿಸಲು ಬಿಡುವುದಿಲ್ಲ. ನೀವು ಎಷ್ಟೇ ಪ್ರಯತ್ನಿಸಿದರೂ ಪ್ರಗತಿ ಸಾಧಿಸಲು ಸಾಧ್ಯವಾಗುವುದಿಲ್ಲ.
ಅದರಲ್ಲೂ ಕ್ಯಾಲೆಂಡರ್ ಅನ್ನು ಉತ್ತರ, ಪಶ್ಚಿಮ ಅಥವಾ ಪೂರ್ವ ದಿಕ್ಕಿನಲ್ಲಿರುವ ಗೋಡೆಯ ಮೇಲೆ ಇಡಬೇಕು. ಬಹಳ ಮುಖ್ಯವಾಗಿ ಹಿಂಸಾತ್ಮಕ ಪ್ರಾಣಿಗಳು, ದುಃಖದ ಮುಖಗಳ ಚಿತ್ರಗಳೊಂದಿಗೆ ಇರುವ ಕ್ಯಾಲೆಂಡರ್ ಹಾಕಬೇಡಿ.
ಉತ್ತರ ದಿಕ್ಕು ಕುಬೇರನ ದಿಕ್ಕು. ಈ ದಿಕ್ಕಿನಲ್ಲಿ ಹಸಿರು, ಕಾರಂಜಿ, ನದಿ, ಸಮುದ್ರ, ಜಲಪಾತಗಳು, ಮದುವೆ ಇತ್ಯಾದಿಗಳ ಚಿತ್ರಗಳನ್ನು ಹೊಂದಿರುವ ಕ್ಯಾಲೆಂಡರ್ ಅನ್ನು ಈ ದಿಕ್ಕಿನಲ್ಲಿ ಇಡಬೇಕು. ಇನ್ನು ಈ ದಿಕ್ಕಿನದಲ್ಲಿ ಕ್ಯಾಲೆಂಡರ್ ಹಾಕಿದರೆ ಮನೆಯಲ್ಲಿ ಸುಖ ಸಮೃದ್ಧಿ ನೆಲೆಯಾಗುತ್ತದೆ.