ಬೆಂಗಳೂರು :– ನಗರ ಹೊರವಲಯ ನೆಲಮಂಗಲ ನಗರದ ಪುರಾಣ ಪ್ರಸಿದ್ಧ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳಿಂದ ಸಂಕ್ರಾಂತಿ ವಿಶೇಷವಾಗಿ ಸುಗ್ಗಿ ಸಂಭ್ರಮ ಅರ್ಥ ಪೂರ್ಣ ಕಾರ್ಯಕ್ರಮ ಆಚರಣೆ ಮಾಡಲಾಗಿದ್ದು. ಪವಾಡ ಶ್ರೀ ಬಸವಣ್ಣ ದೇವರ ಮಠದ ಶಿಕ್ಷಕರು ಹಾಗೂ ಸಾವಿರಾರು ವಿದ್ಯಾರ್ಥಿಗಳು ಸುಗ್ಗಿ ಸಂಭ್ರಮದಲ್ಲಿ ಪಾಲ್ಗೊಂಡು ಸುಗ್ಗಿ ಸಂಭ್ರಮದ ಕಲರವದಲ್ಲಿ ಸಂಭ್ರಮಿಸಿದ್ದಾರೆ.
ಇನ್ನೂ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದು. ಎತ್ತುಗಳಿಗೆ ಅಲಂಕಾರ, ಚಕ್ಕಡಿ ಗಳಿಗೆ ಅಲಂಕಾರ ,ಗೋವು ಪೂಜೆ, ಭೂಮಿ ಹಾಗೂ ಗಂಗಾ ಮಾತೆಗೆ ವಿಶೇಷ ಪೂಜೆ ಪುನಸ್ಕಾರ ಸಲ್ಲಿಸಲಾಗಿದೆ .
ಇನ್ನೂ ಸಂಕ್ರಾಂತಿ ವಿಶೇಷ ಎಳ್ಳು ಬೆಲ್ಲ, ಬೇಯಿಸಿದ ಕಡಲೇಕಾಯಿ, ಅವರೇ ಕಾಯಿ ಹಾಗೂ ಕಬ್ಬುಗಳನ್ನು ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ವಿದ್ಯಾರ್ಥಿಗಳಿಗೆ ಹಂಚುತ್ತಾ ಸುಗ್ಗಿ ಸಂಭ್ರಮದಲ್ಲಿ ತಾವು ಮಕ್ಕಳಂತೆ ಸಂಭ್ರಮಿಸಿದ್ದು ವಿಶೇಷವಾಗಿತ್ತು.
ಇನ್ನೂ ಸುಗ್ಗಿ ಸಂಭ್ರಮದ ವಿಶೇಷವಾಗಿ ತಯಾರಿಸಿದ ವಿಶೇಷ ಅಲಂಕಾರಗೊಂಡ ಚಕ್ಕಡಿಯಲ್ಲಿ ವಿದ್ಯಾರ್ಥಿಗಳು ಕುಳಿತು ಸುಗ್ಗಿ ಸಂಭ್ರಮವನ್ನು ಸಂಭ್ರಮಿಸಿದ್ದು , ನೋಡುಗರ ಕಣ್ಮನ ಸೆಳೆದಿತ್ತು.