ಬೆಳಗಾವಿ: ಬೆಳಗಾವಿ ವಿಧಾನಸಭಾ ಅಧಿವೇಶನದ ಎರಡನೇ ದಿನದ ಕಾರ್ಯಕಲಾಪ ಶುರುವಾದಾಗ ಮಂತ್ರಿಗಳ ಗೈರುಹಾಜರಿ ಬಗ್ಗೆ ವಿರೋಧ ಪಕ್ಷದ ನಾಯಕರ ಸರ್ಕಾರದ ವಿರುದ್ಧ ಕಿಡಿಕಾರಿದರು. ಸದಸ್ಯರೊಬ್ಬರು ಮಾತಾಡುವಾಗ ಸಭಾಧ್ಯಕ್ಷ ಯುಟಿ ಖಾದರ್ ಅವರನ್ನು ಕೂರುವಂತೆ ಹೇಳುವಾಗಲೇ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎದ್ದುನಿಂತು ಸ್ಪೀಕರ್ ಅವರು ಆಡಳಿತ ಪಕ್ಷದ ಸದಸ್ಯರ ವಿರುದ್ಧ ಚಾಟಿ ಬೀಸದಿದ್ದರೆ 5 ವರ್ಷಗಳ ಕಾಲ ಸಭಾಧ್ಯಕ್ಷರಾಗೇ ಉಳಿಯಬೇಕಾಗುತ್ತದೆ, ಯಾವತ್ತೂ ಮಂತ್ರಿ ಮಾಡಲ್ಲ ಎಂದು ಹೇಳಿದಾಗ ಸಭಾಧ್ಯಕ್ಷಕರು,
ರಾಕಿಭಾಯ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಡಿಸೆಂಬರ್ 8ಕ್ಕೆ ಮುಂದಿನ ಚಿತ್ರದ ಟೈಟಲ್ ಘೋಷಣೆ!
ಕೇವಲ ಮಂತ್ರಿಯಾಗುವ ಉದ್ದೇಶಕ್ಕೆ ಕಠೋರ ನಿರ್ಣಯಗಳನ್ನು ತೆಗೆದುಕೊಳ್ಳಲಾಗಲ್ಲ, ತಾನು ಹಾಗೆ ಮಾಡುವುದು ಸಾಧ್ಯವೇ ಇಲ್ಲ ಎಂದು ಹೇಳಿದರು. ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರು ಎದ್ದು ನಿಂತು, ಸದನ ಆರಂಭಗೊಳ್ಳುವ ಮೊದಲು ಎಲ್ಲರೂ ಒಳಗೆ ಬಂದು ಕೂತಿರಬೇಕು ಅಂತ ಸೋಮವಾರ ಸ್ಪೀಕರ್ ಎಲ್ಲರಿಗೆ ಬುದ್ಧಿವಾದ ಹೇಳಿದರೂ ಸಚಿವರ ಸ್ಥಾನಗಳೆಲ್ಲ ಖಾಲಿ ಇವೆ, ತಾವು ಯಾರನ್ನು ಪ್ರಶ್ನಿಸುವುದು ಅಂತ ಕೇಳಿದರು. ಅದಕ್ಕೆ ಸ್ಪೀಕರ್, ನಾವು ಕಾರ್ಯಕಲಾಪ ಶುರು ಮಾಡೋಣ ಅವರು ಬಂದು ಜಾಯಿನ್ ಆಗುತ್ತಾರೆ ಅಂತ ಹೇಳಿದರು.