ಸ್ಯಾಂಡಲ್ವುಡ್ ನಟಿ ಹರಿಪ್ರಿಯಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯದಲ್ಲೇ ವಸಿಷ್ಠ ಕುಟುಂಬಕ್ಕೆ ಪುಟಾಣಿ ಕಂದನ ಆಗಮನವಾಗುತ್ತಿದ್ದ ಇದೇ ಖುಷಿಯಲ್ಲಿ ಹರಿಪ್ರಿಯಾ ತಾಯ್ತನದ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ಅಮ್ಮನ ಮಡಿಲಲ್ಲಿ ಹರಿಪ್ರಿಯಾ ನಿದ್ದೆ ಮಾಡುತ್ತಿರುವ ವಿಶೇಷ ಫೋಟೋ ಶೇರ್ ಮಾಡಿ ನಟಿ ಸಂಭ್ರಮಿಸಿದ್ದಾರೆ.
ಕಂದ ನನ್ನ ಒಡಲಲ್ಲಿ, ನಾನು ಅಮ್ಮನ ಮಡಿಲಲ್ಲಿ ಎಂದು ನಟಿ ಬರೆದುಕೊಂಡಿದ್ದಾರೆ. ಮನೆಗೆ ಆಗಮಿಸಲಿರುವ ಕಂದನ ಮೇಲಿನ ಮತ್ತು ಅಮ್ಮನ ಮೇಲಿನ ಮಮತೆಯನ್ನು ಈ ಫೋಟೋ ಮೂಲಕ ಹರಿಪ್ರಿಯಾ ವ್ಯಕ್ತಪಡಿಸಿದ್ದಾರೆ.
ನವೆಂಬರ್ 1ರಂದು ವಸಿಷ್ಠ ಸಿಂಹ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿಚಾರವನ್ನು ರಿವೀಲ್ ಮಾಡಿದ್ದರು. ಮದುವೆಯ ಬಳಿಕ ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡಿದ್ದಾರೆ. ಈಗ ಹೊಸ ಅತಿಥಿ ಆಗಮನದ ಖುಷಿಯಲ್ಲಿದ್ದಾರೆ ಖುಷಿಯಲ್ಲಿದ್ದಾರೆ. ಹಲವು ವರ್ಷಗಳ ಕಾಲ ಪ್ರೀತಿಸುತ್ತಿದ್ದ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಕಳೆದ ವರ್ಷ ಜ.26ರಂದು ಹಸೆಮಣೆ ಏರಿದರು.