ಕೊಪ್ಪಳ: ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಅಂತವರು ಗಲಭೆಗೆ ಪ್ರಚೋದನೆ ನೀಡುವಂತಿದ್ದು, ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸ ಬೇಕು ಎಂದು ಸಂಸದ ಸಂಗಣ್ಣ ಕರಡಿ (Sanganna Karadi) ಒತ್ತಾಯಿಸಿದ್ದಾರೆ. ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಮಮಂದಿರ ಉದ್ಘಾಟನೆಗೆ ತೆರಳುವ ಕರ ಸೇವಕರಿಂದ ಮತ್ತೊಮ್ಮೆ ಗೋಧ್ರಾ ಮಾದರಿ ಗಲಭೆ ನಡೆಯಬಹುದು ಎಂಬ ಹರಿಪ್ರಸಾದ್ ಮಾತಿಗೆ ತಿರುಗೇಟು ನೀಡಿದರು.
CSIR Recruitment: ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ..! CSIR ನಲ್ಲಿದೆ ಭರ್ಜರಿ ಅವಕಾಶ – ಇಂದೇ ಅರ್ಜಿ ಸಲ್ಲಿಸಿ
ಹರಿಪ್ರಸಾದ್ (B.K Hariprasad) ಅವರ ಭಾವನೆ ಏನಿದೆ ಎಂಬುದು ನನಗೆ ಗೊತ್ತಿಲ್ಲ. ಇಂತಹ ಹೇಳಿಕೆಗಳನ್ನು ಅಡ್ವಾನ್ಸ್ ಕೊಡುತ್ತಾರೆ ಅಂದರೆ ಇದರ ಅರ್ಥ ಏನು ಎಂದು ಪ್ರಶ್ನಿಸಿದ ಸಂಸದ ಸಂಗಣ್ಣ ಕರಡಿ, ಹೀಗೆ ಹೇಳುತ್ತಾರೆ ಎಂದರೆ ಇವರದ್ದೇ ಆಂತರಿಕ ಪ್ರಚೋದನೆ ಇರಬಹುದು. ಕೃತ್ಯ ಎಸಗಲು ಕೆಲವರಿಗೆ ಪ್ರಚೋದನೆ ನೀಡುತ್ತಿರಬಹುದು. ಕೆಲವು ಬಾರಿ ಇಂತಹ ಹೇಳಿಕೆಗಳಿಂದಲೇ ಹಲವು ಪ್ರಚೋದನೆಗೆ ಒಳಗಾಗುತ್ತಾರೆ. ಯಾರ ಮನಸ್ಸಿನಲ್ಲೂ ಇಲ್ಲದಿದ್ದರೂ ಕ್ರಿಯೇಟ್ ಆಗುತ್ತದೆ. ಇದರಿಂದ ಹರಿಪ್ರಸಾದ್ ಅವರನ್ನ ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.